'DDLJ'ರೀತಿ ನಿಖಾ ಶೂಟ್ ಮಾಡಿಸಿದ ಪಾಕಿಸ್ತಾನದ ಜೋಡಿ; ಫೋಟೋಶೂಟ್ ಟ್ರೆಂಡಿಂಗ್

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ಕಾಜೋಲ್ ನಟನೆಯ ಎವರ್‌ಗ್ರೀನ್ ಸಿನಿಮಾ ' ದಿಲ್ವಾಲೆ ದುಲ್ಹಾನಿಯ ಲೇ ಜಾಯೇಂಗೆ'. ಒಂದೇ ಥಿಯೇಟರ್‌ನಲ್ಲಿ ಈ ಸಿನಿಮಾ ಹೆಚ್ಚು ವರ್ಷ ಓಡಿದ ಇತಿಹಾಸವಿದೆ. ಮುಂಬೈನ ಮರಾಠ ಮಂದಿರ ಥಿಯೇಟರ್‌ನಲ್ಲಿ ಸುಮಾರು 28 ವರ್ಷಗಳಿಗೆ ಹೆಚ್ಚು ಕಾಲ ಪ್ರದರ್ಶನ ಕಂಡಿದೆ.

'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಸಿನಿಮಾ ಕ್ರೇಜ್ ಹಾಗಿತ್ತು. ಇಡೀ ವಿಶ್ವವೇ ಈ ರೊಮ್ಯಾಂಟಿಕ್ ಸಿನಿಮಾವನ್ನು ಮೆಚ್ಚಿಕೊಂಡಿದೆ. ಇಂದಿಗೂ ಈ ಸಿನಿಮಾಗೆ ಅಭಿಮಾನಿಗಳು ಇದ್ದಾರೆ. 'ಡಿಡಿಎಲ್‌ಜೆ' ಸಿನಿಮಾದ ಒಂದೊಂದು ಪಾತ್ರವನ್ನೂ ಇಂದಿಗೂ ನೆನಪಿನಲ್ಲಿ ಇಟ್ಟುಕೊಂಡಿರುವ ಅಭಿಮಾನಿಗಳು ಇದ್ದಾರೆ. ಶಾರುಖ್ ಖಾನ್ ಹಾಗೂ ಕಾಜೋಲ್ ಜೋಡಿಗೆ ಫಿದಾ ಆಗಿದ್ದವರು ಸಿಗುತ್ತಾರೆ.

Pakistani Pair recreated Nikah shoot from the movie Shah Rukh Khan Kajol s DDLJ Iconic train Scene

'ಡಿಡಿಎಲ್‌ಜೆ' ಭಾರತದಲ್ಲಿಷ್ಟೇ ಪಕ್ಕದ ಪಾಕಿಸ್ತಾನದಲ್ಲೂ ಅಭಿಮಾನಿಗಳು ಇದ್ದಾರೆ. ಭಾರತೀಯರು ಇಷ್ಟ ಪಡುವಂತೆ ಬಾಲಿವುಡ್‌ ಸಿನಿಮಾಗಳನ್ನು ಪಾಕಿಸ್ತಾನದಲ್ಲಿಯೂ ಹೆಚ್ಚು ವೀಕ್ಷಣೆ ಮಾಡುತ್ತಾರೆ. ಇದಕ್ಕೆ ಸಾಕ್ಷಿನೇ ಪಾಕಿಸ್ತಾನದ ಜೋಡಿಯೊಂದು ತಮ್ಮ ನಿಖಾದ ಫೋಟೋಶೂಟ್ ಅನ್ನು 'ಡಿಡಿಎಲ್‌ಜೆ' ಸಿನಿಮಾ ಐಕಾನಿಕ್ ಟ್ರೈನ್‌ ಸೀನ್‌ನಂತೆ ಶೂಟ್ ಮಾಡಿರುವುದು.

ಭಾರತ ಹಾಗೂ ಪಾಕಿಸ್ತಾನ ವಿರೋಧ ರಾಷ್ಟ್ರವಾಗಿದ್ದರೂ, ಸಿನಿಮಾ ವಿಚಾರದಲ್ಲಿ ಗಡಿಯನ್ನು ಮೀರಿದೆ. ಪಾಕಿಸ್ತಾನದ ವಧು ಐಶಿ ಹಾಗೂ ವರ ಫರ್ದೀನ್ ಇಬ್ಬರೂ ತಮ್ಮ ಮದುವೆಯ ಫೋಟೋಶೂಟ್ ಮಾಡಿಸಿದ್ದಾರೆ. 'ಡಿಡಿಎಲ್‌ಜೆ' ಸಿನಿಮಾದ ಐಕಾನಿಕ್ ಟ್ರೈನ್ ಸೀನ್ ರೀತಿಯೇ ಫೋಟೊಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಕ್ಲೈಮ್ಯಾಕ್ಸ್ ಸೀನ್ ಸಿನಿಮಾದ ಹೈಲೈಟ್. ಚಲಿಸುತ್ತಿರುವ ಟ್ರೈನ್‌ನಲ್ಲಿ ಶಾರುಖ್ ಖಾನ್ ತನ್ನ ಪ್ರೇಮಿ ಕಾಜೋಲ್‌ಗಾಗಿ ಕೈ ಚಾಚುವ ದೃಶ್ಯ ಇಂದಿಗೂ ಫೇಮಸ್. ಸಾಕಷ್ಟು ಸಿನಿಮಾಗಳಲ್ಲಿ ಈ ಸೀನ್‌ ಅನ್ನು ಮರುಬಳಕೆ ಮಾಡಿದ್ದಾರೆ. ಅದೇ ರೀತಿ ಈ ಜೋಡಿ ಕೂಡ ಫೋಟೋಶೂಟ್ ಮಾಡಿಸಿಕೊಂಡಿದೆ. ಫೋಟೊಗ್ರಾಫರ್ ಅರ್ಸ್ಲಾನ್ ಅರ್ಷದ್ ಈ ಫೋಟೊಶೂಟ್ ಅನ್ನು ಶೇರ್ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

Pakistani Pair recreated Nikah shoot from the movie Shah Rukh Khan Kajol s DDLJ Iconic train Scene

ಅಂದ್ಹಾಗೆ, ಫೋಟೊಗ್ರಾಫರ್ ಅರ್ಸ್ಲಾನ್ ಅರ್ಷದ್ ಮೂರುವಾರಗಳ ಹಿಂದೆನೇ ಈ ಫೋಟೊಶೂಟ್ ಅನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗಳು ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪಾಕಿಸ್ತಾನಿ ಜೋಡಿಯ 'ಡಿಡಿಎಲ್‌ಜೆ' ಸಿನಿಮಾ ಮೇಲಿನ ಅಭಿಮಾನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಪಾಕಿಸ್ತಾನದ ಈ ಜೋಡಿಯ ಸುಮಾರು 10 ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದೆ. ಈಗಾಗಲೇ 43 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ನೆಟ್ಟಿಗರು ಈ ಫೋಟೊಗಳನ್ನು ನೋಡಿ ಎರಡು ಮತ್ತು ನಾಲ್ಕನೇ ಫೋಟೊ ಅದ್ಭುತ ಅಂತ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ವರ ಬಾಲಿವುಡ್ ನಟಿ ಅನುಷ್ಕಾ ರೀತಿ ಇದ್ದಾರೆ ಅಂತ ಹೇಳುತ್ತಿದ್ದಾರೆ. ಭಾರತೀಯರು ಕೂಡ ಶಾರುಖ್ ಖಾನ್ ಸಿನಿಮಾ ಇಷ್ಟಪಟ್ಟಿದ್ದ ಧನ್ಯವಾದಗಳು ಅಂತ ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Pakistani Pair Nikah Photo shoot from the movie DDLJ trending in social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X