ಮತ್ತೆ ಪಾಕಿಸ್ತಾನದ ಟಿಕ್ ಟಾಕ್ ತಾರೆಯ ವಿಡಿಯೋ ಲೀಕ್; ಖಾಸಗಿ ವಿಡಿಯೋ ಲೀಕ್ ಮಾಡುವಲ್ಲಿ ಪಾಕಿಗಳೇ ಮುಂದು?
ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾ ತಾರೆಯರ ಖಾಸಗಿ ವಿಡಿಯೋಗಳು ಅತೀ ಹೆಚ್ಚು ಲೀಕ್ ಆಗುತ್ತಿವೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಇನ್ಪ್ಯೂಯೆನ್ಸರ್, ಟಿಕ್ ಟಾಕ್ ಸ್ಟಾರ್‌ಗಳನ್ನು ಟಾರ್ಗೆಟ್ ಮಾಡಿ ಲೀಕ್ ಮಾಡಲಾಗುತ್ತಿದೆ ಎಂದು ವರದಿಯಾಗಳಾಗಿವೆ. ಈ ಮತ್ತೆ ಪಾಕ್‌ನ ಟಿಕ್ ಟಾಕ್ ತಾರೆಯದ್ದೇ ಎನ್ನಲಾದ ಖಾಸಗಿ ವಿಡಿಯೋ ಒಂದನ್ನು ಲೀಕ್ ಮಾಡಲಾಗಿದೆ.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇತ್ತೀಚೆಗೆ ಪಾಕಿಸ್ತಾನ ಸ್ಟಾರ್ ನಟಿ, ಸೋಶಿಯಲ್ ಮೀಡಿಯಾ ಇನ್ಪ್ಯೂಯೆನ್ಸರ್ ಅವರದ್ದೇ ಎನ್ನಲಾದ ಖಾಸಗಿ ವಿಡಿಯೋವನ್ನು ಲೀಕ್ ಮಾಡಲಾಗಿತ್ತು. ಈಗ ಮತ್ತೆ ಟಿಕ್ ಟಾಕ್ ತಾರೆ ಮಿನಾಹಿಲ್ ಮಲಿಕ್ ಎಂಬುವವರ ಖಾಸಗಿ ವಿಡಿಯೋ ಲೀಕ್ ಆಗಿದೆ. ಕಿಡಿಗೇಡಿಗಳನ್ನು ಮಾಡಿದ ಈ ಕೆಲಸಕ್ಕೆ ಟಿಕ್ ಟಾಕ್ ತಾರೆ ತಲೆ ತಗ್ಗಿಸುವಂತೆ ಮಾಡಿದೆ.

ಮಿನಾಹಿಲ್ ಮಲಿಕ್ ಪಾಕಿಸ್ತಾನದ ಜನಪ್ರಿಯ ಇನ್ಫ್ಯೂಯೆನ್ಸರ್. ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಂ ಹಾಗೂ ಟಿಕ್‌ಟಾಕ್‌ನಲ್ಲಿ ಇವರನ್ನು ಹಿಂಬಾಲಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಈಗ ಇದೇ ನಟಿಯದ್ದೇ ಎಂದು ಹೇಳಲಾಗುತ್ತಿರುವ ಖಾಸಗಿ ವಿಡಿಯೋವನ್ನು ಕಿಡಿಗೇಡಿಗಳು ಸೋರಿಕೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟಿಕ್‌ಟಾಕ್ ತಾರೆ ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದಾಳೆ.
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮಿನಾಹಿಲ್ ಮಲಿಕ್ ಅವರದ್ದೇ ಎಂದು ಹೇಳಲಾಗುತ್ತಿರುವ 8 ರಿಂದ 10 ವಿಡಿಯೋವನ್ನು ಸೋರಿಕೆ ಮಾಡಿದ್ದಾರೆ. ಈ ವಿಡಿಯೋಗಳು ವಾಟ್ಸಾಪ್, ಟೆಲಿಗ್ರಾಂ ಅಂತ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋಗಳು ಪಾಕಿಸ್ತಾನ ಟಿಕ್ ಟಾಕ್ ತಾರೆ ಮಿನಾಹಿಲ್ ಮಲಿಕ್ ಅವರದ್ದೇ ಎಂದು ಶೇರ್ ಮಾಡಲಾಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಿನಾಹಿಲ್ ಮಲಿಕ್ ಖಡಕ್ ಪ್ರತಿಕ್ರಿಯೆಯನ್ನು ಕೂಡ ಕೊಟ್ಟಿದ್ದಾಳೆ.
ವೈರಲ್ ಆಗುತ್ತಿರುವ ವಿಡಿಯೋ ನನ್ನದಲ್ಲ. ಇದು ನಕಲಿ. ಇಲ್ಲಿ ಯಾರೂ ನನಗೆ ಬುದ್ದಿವಾದ ಹೇಳುವುದಕ್ಕೆ ಬರಬೇಡಿ. ನನ್ನ ಕಷ್ಟ ಕಾಲದಲ್ಲಿ ನನ್ನ ಬೆಂಬಲಕ್ಕೆ ಬಂದಿದ್ದು ನನ್ನ ಕುಟುಂಬ ಮಾತ್ರ. ನನ್ನ ಬೆನ್ನ ಹಿಂದೆ ಯಾರು ಏನೇ ಮಾತಾಡಿದರೂ, ಅದು ನನಗೆ ಸಂಬಂಧವಿಲ್ಲ. ನೀವು ನನ್ನನ್ನು ಯಾವ ದೃಷ್ಟಿಯಿಂದ ನೋಡುತ್ತಿರೋ ಅದು ನನಗೆ ಬೇಕಾಗಿಲ್ಲ. ನನ್ನ ಲೈಫ್‌ನಲ್ಲಿ ನಾನು ಸಿಕ್ಕಾಪಟ್ಟೆ ಆರಾಮಾಗಿದ್ದೇನೆ. ಯಾರು ಏನು ಬೇಕಾದರೂ ಮಾಡಿಕೊಳ್ಳಿ." ಎಂದು ತನ್ನದೇ ಖಾಸಗಿ ವಿಡಿಯೋ ಎಂದು ಹಬ್ಬಿಸುತ್ತಿರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾಳೆ.
ಹಾಗಂತ ಪಾಕಿಸ್ತಾನದಲ್ಲಿ ಸಿನಿಮಾ, ಸೋಶಿಯಲ್ ಮೀಡಿಯಾ ತಾರೆಯರ ಖಾಸಗಿ ವಿಡಿಯೋಗಳನ್ನು ಸೋರಿಕೆ ಮಾಡುವುದು ಹೆಚ್ಚಾಗಿದೆ. ಕಳೆದ ವರ್ಷ ಕೂಡ ಮತ್ತೊಬ್ಬ ಟಿಕ್‌ಟಾಕ್ ತಾರೆ ಇಮ್ಶಾ ರೆಹಮಾನ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಮಥಿರಾ ಮೊಹಮ್ಮದ್ ಅವರದ್ದೇ ಎಂದು ಹೇಳಲಾಗಿದ್ದ ಖಾಸಗಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆ ಮಾಡಿದ್ದರು. ಈ ವಿಡಿಯೋಗಳು ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಸಿದ್ದವು. ಇವರಿಬ್ಬರ ವಿರುದ್ಧ ಟೀಕೆಗಳು ಎದ್ದಿದ್ದವು. ಈಗ ಆ ಸಾಲಿಗೆ ಮತ್ತೆ ಮಿನಾಹಿಲ್ ಮಲಿಕ್ ಸೇರಿಕೊಂಡಿದ್ದಾರೆ.
ಹಾಗಂತ ಇದೇ ಮೊದಲ ಬಾರಿಯೇನಲ್ಲ. ಕಳೆದ ವರ್ಷ ಕೂಡ ಮಿನಾಹಿಲ್ ಮಲಿಕ್ ಅವರದ್ದೇ ಎನ್ನಲಾಗಿದ್ದ ಖಾಸಗಿ ವಿಡಿಯೋ ರಿಲೀಸ್ ಆಗಿತ್ತು. ಆಗ ಮಿನಾಹಿಲ್ ಮಲಿಕ್ ಉದ್ದೇಶ ಪೂರ್ವಕವಾಗಿಯೇ ಈ ವಿಡಿಯೋವನ್ನು ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಈಗ ಮತ್ತೆ ಈಕೆಯದ್ದೇ ವಿಡಿಯೋ ಲೀಕ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳನ್ನು ಶುರು ಮಾಡಿದ್ದಾರೆ. ಭಾರತಕ್ಕಿಂತ ಪಾಕಿಸ್ತಾನದಲ್ಲಿಯೇ ತಾರೆಯರ ಖಾಸಗಿ ವಿಡಿಯೋಗಳು ಲೀಕ್ ಆಗುತ್ತಿವೆ ಎಂದು ಟೀಕೆ ಮಾಡಲಾಗುತ್ತಿದೆ.


Click it and Unblock the Notifications











