ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‌ಗೆ ಸಿನಿಮಾ ಆಫರ್? ಉದಯಪುರ ಟೈಲರ್ ಹತ್ಯೆ ಆಧಾರಿತ ಚಿತ್ರಕ್ಕೆ ಆಡಿಷನ್?

ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಭಾರತದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಪಬ್‌ಜಿ ಆಡುತ್ತಾ ಭಾರತದ ಯುವಕನ ಪ್ರೀತಿಯಲ್ಲಿ ಬಿದ್ದಿದ್ದ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಓಡಿಬಂದಿದ್ದರು. ಆ ಬಳಿಕ ಭಾರತದಲ್ಲಿ ಸೀಮಾ ಹೈದರ್ ಜನಪ್ರಿಯರಾಗಿದ್ದರು.

30 ವರ್ಷದ ಸೀಮಾ ಹೈದರ್ ಪಾಕಿಸ್ತಾನದ ಮಹಿಳೆಯನ್ನು ಪೊಲೀಸರು ಬಂಧಿಸಿದ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದರು. ಅಲ್ಲಿಂದ ಸೀಮಾ ಹೈದರ್‌ ಸಿನಿಮಾ ಮಂದಿಯನ್ನು ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಈಕೆ ಸಿನಿಮಾವೊಂದಕ್ಕೆ ಆಡಿಷನ್ ಕೊಟ್ಟಿದ್ದಾರೆ ಎಂದು ಸುದ್ದಿಯಾಗಿದೆ.

Seema Haider-A Tailor Murder-

ಉದಯಪುರದ ಟೈಲರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಪಾತ್ರವೊಂದಕ್ಕೆ ಸೀಮಾ ಹೈದರ್ ಅನ್ನು ಚಿತ್ರತಂಡ ಸಂಪರ್ಕಿಸಿದ್ದು, ಆಡಿಷನ್ ಕೂಡ ಮಾಡಿದ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಉದಯಪುರ ಟೈಲರ್ ಹತ್ಯೆ ಸ್ಟೋರಿ

ಕೆಲವು ತಿಂಗಳ ಹಿಂದಷ್ಟೇ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಹತ್ಯೆ ಮಾಡಿದ್ದರು. ಈ ಹತ್ಯೆ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೇ ವಿಷಯವನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈ ಸಿನಿಮಾಗೆ 'ಎ ಟೈಲರ್ ಮರ್ಡರ್ ಸ್ಟೋರಿ' ಎಂದು ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ. ಈ ಸಿನಿಮಾದ ರಾ (RAW) ಏಜೆಂಟ್ ಪಾತ್ರಕ್ಕೆ ಸೀಮಾ ಹೈದರ್ ಅನ್ನು ಕೇಳಲಾಗಿದೆ ಎಂದು ಹೇಳಲಾಗುತ್ತಿದೆ.

Seema Haider-A Tailor Murder-

ISI ಏಜೆಂಟ್ ಶಂಕಿತ ವ್ಯಕ್ತಿಗೆ RAW ಏಜೆಂಟ್ ಪಾತ್ರ?

ಪಾಕಿಸ್ತಾನಿ ಮಹಿಳೆ ಪ್ರಿಯಕರನಿಗಾಗಿ ಭಾರತಕ್ಕೆ ಬಂದಿದ್ದೇನೋ ನಿಜ. ಆದರೆ, ಸೀಮಾ ಪಾಕಿಸ್ತಾನದ ISI ಏಜೆಂಟ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಈ ಚರ್ಚೆ ನಡೆಯುತ್ತಿರುವಾಗಲೇ ನಿರ್ದೇಶಕರಾದ ಜಯಂತ್ ಸಿನ್ಹ ಮತ್ತು ಭಾರತ್ ಸಿಂಗ್ ಸೀನಾ ಹೈದರ್ ಅನ್ನು ಭೇಟಿ ಮಾಡಿದ್ದು, 'ಎ ಟೈಲರ್ ಮರ್ಡರ್ ಸ್ಟೋರಿ' ಸಿನಿಮಾದಲ್ಲಿ ರಾ ಏಜೆಂಟ್ ಪಾತ್ರಕ್ಕೆ ಆಡಿಷನ್ ಮಾಡಲಾಗಿದೆ. ಜಾನಿ ಫೈರ್‌ಫಾಕ್ಸ್ ಪ್ರೊಡಕ್ಷನ್ ಹೌಸ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ

ಸೀಮಾ ಹೈದರ್ ವಿರುದ್ಧ ಇನ್ನೂ ವಿಚಾರಣೆ ನಡೆಯುತ್ತಿದೆ. ಪಾಕಿಸ್ತಾನದ ಶಂಕಿತ ISI ಏಜೆಂಟ್ ಎಂಬ ಆರೋಪವಿದೆ. ಹೀಗಾಗಿ ಉತ್ತರ ಪ್ರದೇಶದ ಆಂಟಿ ಟೆರರಿಸಂ ಸ್ಕ್ವಾಡ್ (ATS) ಕ್ಲೀನ್ ಚಿಟ್ ಕೊಡಬೇಕಿದೆ. ಅಲ್ಲಿವರೆಗೂ ಸಿನಿಮಾದಲ್ಲಿ ನಟಿಸಲು ಅವಕಾಶವಿಲ್ಲ. ಹೀಗಾಗಿ ಸೀಮಾ ಹೈದರ್ ಕೂಡ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.

30 ಕೋಟಿ ರೂ. ಬಜೆಟ್ ಸಿನಿಮಾ

'ಎ ಟೈಲರ್ ಮರ್ಡರ್ ಸ್ಟೋರಿ' ಸಿನಿಮಾವನ್ನು 25 ರಿಂದ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ನವೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಸದ್ಯ ಈ ಸಿನಿಮಾ ಚರ್ಚೆಯಲ್ಲಿದ್ದು, ಸೀಮಾ ಹೈದರ್ ಸೆಂಟರ್‌ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ.

More from Filmibeat

English summary
Pakistani woman Seema Haider auditioned for film on Udaipur Tailor's Beheading
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X