ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆ ಅಲ್ಲ.. ಏನಂತು ಆತ್ಮ?

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರಹಸ್ಯ ಇಂದಿಗೂ ಕಗ್ಗಂಟಾಗಿದೆ. ಅಭಿಮಾನಿಗಳಿಗೆ ಅವರ ಸಾವಿಗೆ ಸರಿಯಾದ ಕಾರಣ ಇನ್ನೂ ಸಿಕ್ಕಿಲ್ಲ. ಈಗಾಗಲೇ ತನಿಖೆ ನಡೆದು ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ ಎಂದು ಹೇಳಲಾಗಿದೆ. ಆದರೂ, ಅದನ್ನು ಒಪ್ಪಿಕೊಳ್ಳುವುದಕ್ಕೆ ಅವರ ಅಭಿಮಾನಿಗಳು ರೆಡಿಯಿಲ್ಲ.

ಇದೇ ವೇಳೆ ಆತ್ಮಗಳ ಜೊತೆ ಸಂವಾದ ನಡೆಸುವ ಪ್ಯಾರಾನಾರ್ಮಲ್ ಆಕ್ಟಿವಿಸ್ಟ್ ಸೌರಭ್ ಪೂನಿಯಾ ಪಾಡ್‌ಕಾಸ್ಟ್‌ವೊಂದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆ ಮಾತಾಡಿದ್ದಾಗಿ ಹೇಳಿಕೊಂಡಿದ್ದಾರೆ. ಸುಶಾಂತ್ ಆತ್ಮದ ಜೊತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ. ಅದಕ್ಕೆ ಆ ಕಡೆಯಿಂದ ಉತ್ತರ ಕೂಡ ಸಿಕ್ಕಿದೆ ಎಂದು ಪ್ಯಾರಾನಾರ್ಮಲ್ ಆಕ್ಟಿವಿಸ್ಟ್ ಸೌರಭ್ ಪೂನಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.

Paranormal investigator Saurabh Poonia claims he communicated Sushanth Singh Rajput spirit

ಶಲೀನ್‌ ಶ್ರೋತ್ರಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಇತ್ತೀಚೆಗೆ ಶ್ರೀದೇವಿ ಸಾವಿನ ಬಗ್ಗೆ ಮಾತಾಡಿದ್ದರು. ಶ್ರೀದೇವಿ ಆತ್ಮ ಬೋನಿ ಕಪೂರ್ ಎಂದು ಹೇಳಿತ್ತು ಎಂದು ಸಂಚಲನ ಸೃಷ್ಟಿಸಿದ್ದ ಸೌರಭ್ ಈಗ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆ ಅಲ್ಲ, ಕೊಲೆ ಎಂದಿದ್ದಾರೆ. ಆ ಪಾಡ್‌ಕಾಸ್ಟ್‌ನ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಹೀಗಿವೆ.

"ಒಂದೂವರೆ ಎರಡು ವರ್ಷಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಅವರ ಇನ್ವೆಸ್ಟಿಗೇಷನ್ ಮಾಡಿದ್ದೆ. ನಾನು ಸುಶಾಂತ್ ಸಿಂಗ್ ಅವರ ಅಜ್ಜಿಯ ಮನೆಯಲ್ಲಿ ಇನ್ವೆಸ್ಟಿಗೇಷನ್ ಮಾಡಿದೆ. ಅಲ್ಲೇ ಒಂದು ಅಟ್ಯಾಚ್ಮೆಂಟ್ ಇರುತ್ತೆ. ಬಾಲ್ಯ ಅಲ್ಲಿಯೇ ಕಳೆದಿರುತ್ತೆ. ಮೊದಲು ನಾನು ಸುಶಾಂತ್ ಸಿಂಗ್ ಅವರ ಜೊತೆ ಸಂಪರ್ಕ ಸಾಧಿಸುವುದಕ್ಕೆ ಪ್ರಯತ್ನ ಪಟ್ಟೆ. ಆಗ ನಾನು ನಿಮ್ಮ ಬಳಿ ಕೇಳುವುದಕ್ಕೆ ಸಾಕಷ್ಟು ಪ್ರಶ್ನೆಗಳಿವೆ ಎಂದು ಹೇಳಿದೆ." ಎಂದಿದ್ದಾರೆ.

"ನಿಮ್ಮನ್ನು ಹೇಗೆ ಸಾಯಿಸಲಾಯ್ತು ಎಂದು ಕೇಳಿದೆ. ಅದಕ್ಕೆ ಅವರ ಆತ್ಮ ರೋಪ್ ಎಂದು ಹೇಳಿತು. ಆಗಲೇ ಕ್ಲಿಯರ್ ಆಗಿತ್ತು. ನಾವು ಮೂರು ಬಾರಿ ಆ ಪ್ರಶ್ನೆ ಕೇಳಿದ್ದೆ. ಮೂರು ಬಾರಿ ಒಂದೇ ಉತ್ತರ ಬಂತು. ಅದು ಮರ್ಡರ್ ಅಂತ ಹೇಳಿತು." ಎಂದು ಪಾಡ್‌ಕಾಸ್ಟ್‌ನಲ್ಲಿ ಪ್ಯಾರಾನಾರ್ಮಲ್ ಆಕ್ಟಿವಿಸ್ಟ್ ಸೌರಭ್ ಪೂನಿಯಾ ರಿವೀಲ್ ಮಾಡಿದ್ದಾರೆ.

"ನಾನು ಇಲ್ಲಿವರೆಗೆ ಎಷ್ಟೋ ಇನ್ವೆಸ್ಟಿಗೇಷನ್ ಮಾಡಿದ್ದೇನೆ. ನನಗೂ ಇದು ಮರ್ಡರ್ ಅಂತಲೇ ಅನಿಸುತ್ತಿದೆ. ಇದು ಆತ್ಮಹತ್ಯೆ ಅಲ್ಲ. ನಿಮ್ಮ ಕಾಲನ್ನು ಮುರಿದಿದ್ದರೇ ಎಂದು ಕೇಳಿದೆ? ಹೌದು ಎಂದು ಹೇಳಿತು. ಅಂದು ಹೊರಬಿದ್ದ ಪೋಟೋದಲ್ಲೂ ಕಾಲಿಗೆ ಏಟು ಬಿದ್ದಿದೆ ಎನ್ನಲಾಗಿತ್ತು. ಅದು ಆತ್ಮಹತ್ಯೆ ಅಂತೂ ಆಗುವುದಕ್ಕೆ ಸಾಧ್ಯವೇ ಇಲ್ಲ." ಎಂದು ಹೇಳಿದ್ದಾರೆ.

ಆಗ ನಿರೂಪಕ ಶಲೀನ್‌ ಶ್ರೋತ್ರಿಯಾ ಅವರನ್ನು ಸಾಯಿಸಿದ್ದು ಯಾಕೆ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಸೌರಭ್ ಪೂನಿಯಾ "ಫೇಮ್‌ಗಾಗಿ ಸಾಯಿಸಲಾಗಿದೆ. ಅವರು ಆ ವೇಳೆ ಚಿತ್ರರಂಗದಲ್ಲಿ ಬೆಳೆಯುತ್ತಿದ್ದರು. ಯಾರಿಗೆ ಗೊತ್ತು. ಅವರು ಏನಾದರೂ ನೋಡಿರಬಹುದು" ಎಂದು ಉತ್ತರ ನೀಡಿದ್ದಾರೆ.

English summary
Paranormal investigator Saurabh Poonia claims he communicated Sushanth Singh Rajput spirit.
Read more about: spirit death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X