ಶ್ರೀದೇವಿ ಸತ್ತಿದ್ದ ಬಾತ್‌ಟಬ್‌ನಲ್ಲಿ ಕೂತು ಆತ್ಮದೊಂದಿಗೆ ಮಾತುಕತೆ; ಏನಂತು ಆತ್ಮ? ಮತ್ತೆ ಬೋನಿ ಕಪೂರ್ ಮೇಲೆ ಅನುಮಾನ
ಅತಿಲೋಕ ಸುಂದರಿ ಶ್ರೀದೇವಿ ಇಹಲೋಕ ತ್ಯಜಿಸಿ ಬರೋಬ್ಬರಿ 8 ವರ್ಷಗಳಾಗಿವೆ. ಪತಿ ಬೋನಿ ಕಪೂರ್, ಪುತ್ರಿಯಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಆ ನೋವನ್ನು ಮರೆತು ಮುಂದೆ ಸಾಗಿದ್ದಾರೆ. ಆದರೂ, ಅವರ ಸಾವಿನ ರಹಸ್ಯವನ್ನು ಭೇದಿಸುವ ಪ್ರಯತ್ನ ನಡೆಯುತ್ತಲೇ ಇದೆ. 2018ರಲ್ಲಿ ಶ್ರೀದೇವಿ ದುಬೈನ ಐಷಾರಾಮಿ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಈ ವಿಷಯವನ್ನು ಅವರ ಅಭಿಮಾನಿಗಳು ಇಂದಿಗೂ ಅರಗಿಸಿಕೊಂಡಿಲ್ಲ. ಅವರಿಗೆ ಶ್ರೀದೇವಿ ಸಾವಿನ ಬಗ್ಗೆ ಅನುಮಾನವಿದೆ. ಒಂದು ಕಾಲದ ಲೇಡಿ ಸೂಪರ್‌ಸ್ಟಾರ್ ಹೀಗೆ ದುರಂತ ಅಂತ್ಯ ಕಂಡಿದ್ದು ಅಭಿಮಾನಿಗಳಲ್ಲಿ ಅನುಮಾನ ಹುಟ್ಟುವಂತೆ ಮಾಡಿತ್ತು. ಕೆಲವರು ಪತಿ ಬೋನಿ ಕಪೂರ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಹೀಗಿದ್ದರೂ ಬೋನಿ ಕಪೂರ್ ಮಾತ್ರ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.

ಸೋಶಿಯಲ್ ಮೀಡಿಯಾಗಳಲ್ಲಿ ಮಾಡುತ್ತಿರುವ ಆರೋಪಗಳಿಂದ ಬೇಸತ್ತು ಘಟನೆ ಬಗ್ಗೆ ವಿವರವಾಗಿ ಹೇಳಿದರೂ, ಶ್ರೀದೇವಿ ಅಭಿಮಾನಿಗಳು ಮಾತ್ರ ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಆಗಾಗ ಶ್ರೀದೇವಿ ಸಾವಿನ ಕುರಿತು ಚರ್ಚೆ ಮುನ್ನಲೆಗೆ ಬರುತ್ತಲೇ ಇರುತ್ತೆ. ಈಗ ಆತ್ಮಗಳ ಜೊತೆ ಸಂವಾದ ಮಾಡುವುದಾಗಿ ಹೇಳಿಕೊಳ್ಳುವ ಸೌರಭ್ ಪೂನಿಯ ಎಂಬ ವ್ಯಕ್ತಿ ಇದೇ ವಿಚಾರವಾಗಿ ಚರ್ಚೆಯಲ್ಲಿ ಇದ್ದಾರೆ. ಶ್ರೀದೇವಿ ಸಾವನ್ನಪ್ಪಿದ್ದ ದುಬೈನ ಅದೇ ಹೋಟೆಲ್‌ನ ಬಾತ್‌ಟಬ್ ಮುಂದೇನೆ ಆತ್ಮದ ಜೊತೆ ಸಂಪರ್ಕ ಸಾಧಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಆ ವಿಡಿಯೋವನ್ನು ರಿಲೀಸ್ ಮಾಡಿದ್ದು, ಶ್ರೀದೇವಿಯ ಸಾವು ಆಕಸ್ಮಿಕವೋ..? ಇಲ್ಲ ಕೊಲೆಯೋ? ಅನ್ನೋದೂ ರಿವೀಲ್ ಆಗಿದೆ.
ಶ್ರೀದೇವಿ ಸಾವು ಆಕಸ್ಮಿಕವಾಗಿ ಬಾತ್‌ಟಬ್‌ನಲ್ಲಿ ಮುಳುಗಿ ಆಗಿದ್ದಲ್ಲ. ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಅಂತ ಕೆಲವು ವರ್ಗಗಳು ಇಂದಿಗೂ ಪ್ರತಿಪಾದಿಸುತ್ತಿವೆ. ಆದರೆ, ದುಬೈ ಪೊಲೀಸರು ಶ್ರೀದೇವಿ ಸಾವು ಬಾತ್‌ಟನ್‌ನಲ್ಲಿ ಮುಳುಗಿಯೇ ಆಗಿದ್ದು ಎಂಬ ವರದಿ ಕೂಡ ಕೊಟ್ಟಿದ್ದಾರೆ. ಆದರೂ ಅಭಿಮಾನಿಗಳು, ನೆಟ್ಟಿಗರು ಇದನ್ನು ಒಪ್ಪುತ್ತಿಲ್ಲ. ಇವೆಲ್ಲರೂ ಪತಿ ಬೋನಿ ಕಪೂರ್ ವಿರುದ್ಧವೇ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಈಗ ಸೌರಭ್ ಪೂನಿಯ ಶ್ರೀದೇವಿ ಆತ್ಮದೊಂದು ಮಾತಾಡಿದ್ದಾಗಿ ಶಲೀನ್ ಶ್ರೋತ್ರಿಯಾ ಅವರಿಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 2018, ಫೆಬ್ರವರಿ 24, ದುಬೈನ ಜುಮೇರಾ ಎಮಿರೇಟ್ಸ್ ಟವರ್ಸ್ ಹೋಟೆಲ್‌ನ ರೂಮಿನ ಬಾತ್‌ಟಬ್‌ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದರು. ದುಬೈನ ಫೊರೆನ್ಸಿಕ್ ಡಿಪಾರ್ಟ್‌ಮೆಂಟ್ ಹಾಗೂ ಪೊಲೀಸರು ನೀರಿನಲ್ಲಿ ಮುಳುಗಿಯೇ ಸಾವನ್ನಪ್ಪಿದ್ದಾರೆಂದು ಕನ್ಫರ್ಮ್ ಮಾಡಿದ್ದರು. ಇಷ್ಟಾಗಿಯೂ ಶ್ರೀದೇವಿ ಸಾವು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಅದಕ್ಕೆ ಸರಿಯಾಗಿ ಸೌರಭ್ ಪೂನಿಯ ಸಂದರ್ಶನ ಮತ್ತೆ ಅನುಮಾನದ ಕಿಡಿ ಹೊತ್ತಿಸಿದೆ.
ಶಲೀನ್ ಶ್ರೋತ್ರಿಯಾ ಪಾಡ್‌ಕಾಸ್ಟ್‌ನಲ್ಲಿ ಸೌರಭ್ ಪೂನಿಯ ಕೆಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಮೊದಲು ಶ್ರೀದೇವಿ ಆತ್ಮ ಏನನ್ನೂ ಹೇಳಲಿಲ್ಲ. ಹಲವು ಬಾರಿ ಕೇಳಿದೆ. ಆಮೇಲೆ ನಿಮ್ಮನ್ನು ಬಾತ್‌ಟಬ್‌ನಲ್ಲಿ ಮುಳುಗಿಸಿದ್ದು ಯಾರು? ಎಂದು ಕೇಳಿದೆ. ಆಗ ಅವರ ಆತ್ಮ ಬೋನಿ ಕಪೂರ್ ಎಂದು ಹೇಳಿತು. ಇದನ್ನು ನಾನು ಹೇಳಿದರೆ, ಯಾರೂ ನಂಬೋದಿಲ್ಲ" ಎಂದು ಸೌರಭ್ ಪೂನಿಯ ಹೇಳಿಕೊಂಡಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. " ಇದು 100% ಮರ್ಡರ್" ಎಂದು ನೆಟ್ಟಿಗರೊಬ್ಬರು ಹೇಳಿದ್ದರೆ, ಇನ್ನೊಬ್ಬರು "200 ಕೋಟಿ ರೂಪಾಯಿಗೆ ಮರ್ಡರ್ ಮಾಡಲಾಗಿದೆ" ಎಂದಿದ್ದಾರೆ. "ಮತ್ತೆ ಕೆಲವರು ಸತ್ತಿದ್ದು ಮಹಿಳೆ. ಅದರೆ, ಪುರುಷರ ಧ್ವನಿ ಯಾಕೆ ಕೇಳಿಸುತ್ತಿದೆ" ಎಂದು ಹೇಳಿದ್ದಾರೆ. ಮತ್ತೆ ಕೆಲವರು " ಸುಮ್ ಸುಮ್ನೆನೆ ಏನೋ ಹೇಳುವುದಕ್ಕೆ ಬಂದು ಬಿಡುತ್ತಾರೆ" ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ.


Click it and Unblock the Notifications