ಬಾವಿ ಪತಿ ರಾಘವ್ ಚಡ್ಡಾಗಿಂತ ನಟಿ ಪರಿಣಿತ ಚೋಪ್ರಾ ಶ್ರೀಮಂತೆ: ಇಬ್ಬರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ನಿನ್ನೆಯಷ್ಟೇ (ಮೇ 13) ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಪ್ ಪಕ್ಷದ ಮುಖಂಡ ರಾಘವ್ ಚಡ್ಡ ಅವರೊಂದಿಗೆ ನಿಶ್ವಿತಾರ್ಥ ಮಾಡಿದ್ದಾರೆ. ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಈ ಜೋಡಿಯ ಅದ್ಧೂರಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ.
ನಿಶ್ಚಿತಾರ್ಥ ಸಮಾರಂಭಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು. ಹಾಗೇ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಈ ಜೋಡಿಯ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಪರಿಣಿತಿ ಹಾಗೂ ರಾಘವ್ ಚಡ್ಡಾ ಇಬ್ಬರೂ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಎಂಗೇಜ್ ಆದ ಬೆನ್ನಲ್ಲೇ ನೆಟ್ಟಿಗರು ಇಬ್ಬರ ಆಸ್ತಿಯ ವಿವರವನ್ನು ಹುಡುಕುತ್ತಿದ್ದಾರೆ. ಮೇಲ್ನೋಟಕ್ಕೆ ಆಪ್ ಸಂಸದನಿಗಿಂತ ಬಾಲಿವುಡ್ ನಟಿ ಪರಿಣಿತಿ ಚೋಪ್ರಾನೇ ಶ್ರೀಮಂತೆ ಅಂತಾನೂ ಅರಿತುಕೊಂಡಿದ್ದಾರೆ. ಹಾಗಿದ್ದರೆ, ಇಬ್ಬರಲ್ಲಿ ಯಾರ ಬಳಿ ಎಷ್ಟು ಆಸ್ತಿಯಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ರಾಘವ್ ಚಡ್ಡಾ ಆಸ್ತಿ ಎಷ್ಟು?
ಪರಿಣಿತಿ ಚೋಪ್ರಾ ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಅತ್ತ ರಾಘವ್ ಚಡ್ಡಾ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಇಬ್ಬರೂ ಅವರವರ ಕ್ಷೇತ್ರಗಳಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ರಾಘವ್ ಕೇವಲ ರಾಜಕೀಯದಲ್ಲಷ್ಟೇ ಇಲ್ಲ. ಅವರು ಚಾರ್ಟೆಡ್ ಅಕೌಂಟೆಂಟ್ ಕೂಡ ಹೌದು. ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಡೆಲಾಯ್ಟ್, ಶ್ಯಾಮ್ ಮಲ್ಪಾನಿ, ಗ್ರಾಂಟ್ ಥಾರ್ನ್‌ಟನ್ ಅಂತಹ ಕಂಪನಿಗಳಲ್ಲೂ ಕೆಲಸ ಮಾಡಿದ್ದಾರೆ.
ಹೀಗಿದ್ದರೂ ರಾಘವ್ ಕೋಟಿ ಕೋಟಿ ಹಣವಿಲ್ಲ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ರಾಘವ್ ಬಳಿ 50 ಲಕ್ಷ ರೂ. ಇದೆ. ಅಲ್ಲದೆ ಇವರ ಬಳಿ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಮಾತ್ರ ಇದೆ. ಹಾಗೇ 90 ಗ್ರಾಂ ಚಿನ್ನ, 4.95 ಲಕ್ಷ ರೂ. ಹಾಗೂ ಇತ್ತೀಚೆಗಷ್ಟೇ 37 ಲಕ್ಷ ರೂ. ಬೆಲೆ ಬಾಳುವ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಪರಿಣಿತಿ ಬಳಿ ಇರುವ ಆಸ್ತಿಯೇ ಹೆಚ್ಚು
ರಾಘವ್ ಚಡ್ಡಾಗೆ ಹೋಲಿಕೆ ಮಾಡಿದರೆ, ಬಾಲಿವುಡ್ ನಟಿ ಪರಿಣಿತಿ ಚೋಪ್ರಾನೇ ಶ್ರೀಮಂತೆ. ವಿವಿದೆಡೆ ಆದ ವರದಿಯ ಪ್ರಕಾರ, ಪರಿಣಿತಿ ಚೋಪ್ರಾ ಬಳಿ ಸುಮಾರು 60 ಕೋಟಿ ರೂ. ಬೆಲೆಯ ಆಸ್ತಿಯಿದೆ. ಹೀಗಾಗಿ ರಾಘವ್ ಚಡ್ಡಾಗಿಂತ ಪರಿಣಿತಿ ಚೋಪ್ರಾ ಬಳಿನೇ ಹೆಚ್ಚು ಹಣವಿದೆ.
ಸಿನಿಮಾಗಳು, ಜಾಹೀರಾತು ಪರಿಣಿತಿ ಚೋಪ್ರಾಗೆ ಆದಾಯದ ಮೂಲ ಎನ್ನಲಾಗಿದೆ. ಇವರ ಬಳಿಕ ಮುಂಬೈನಲ್ಲಿ ಐಷಾರಾಮಿ ಸೀ ಫೇಸಿಂಗ್ ಫ್ಲ್ಯಾಟ್ ಇದೆ. ಇದರೊಂದಿಗೆ ಔಡಿ A6, ಜಾಗ್ವಾರ್ XJL, ಔಡಿ Q5, ಸೇರಿದಂತೆ ಹಲವಾರು ಐಷಾರಾಮಿ ಕಾರುಗಳು ಕೂಡ ಇವೆ. ರಾಘವ್ ರಾಜಕೀಯ ಮುಖಂಡ ಹಾಗೂ ಚಾರ್ಟೆಡ್ ಅಕೌಂಟೆಂಟ್ ಆಗಿರುವುದಿಂದ ಆಸ್ತಿ ವಿಷಯವನ್ನು ಗೌಪ್ಯವಾಗಿ ಇಟ್ಟಿರುವ ಸಾಧ್ಯತೆಯಿದೆ.
ಪರಿಣಿತಿ- ರಾಘವ್ ಲವ್ ಸ್ಟೋರಿ ಏನು?
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಇಬ್ಬರೂ ಒಟ್ಟಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಆ ವೇಳೆ ಇಬ್ಬರೂ ಉತ್ತಮ ಸ್ಬೇಹಿತರಾಗಿದ್ದರು. ಸ್ನೇಹದಿಂದ ಶುರುವಾಗಿದ್ದು ಪ್ರೀತಿಗೆ ತಿರುಗಿತ್ತು. ಕಳೆದ ಕೆಲ ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇವರಿಬ್ಬರ ಪ್ರೀತಿಯ ವಿಷಯ ಕೆಲವೇ ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿದೆ. ಇಬ್ಬರೂ ಹೋಟೆಲ್‌ಗೆ ಡಿನ್ನರ್ ಡೇಟ್‌ಗೆ ಹೋಗಿದ್ದ ವೇಳೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಅಂದಿನಿಂದ ಪರಿಣಿತಿ ಹಾಗೂ ರಾಘವ್ ಲವ್ ಸ್ಟೋರಿ ಎಲ್ಲೆಡೆ ಹರಿದಾಡುತ್ತಿದೆ. ಈಗ ಈ ಜೋಡಿ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಿಕೊಂಡು, ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.


Click it and Unblock the Notifications











