ಬಾಲಿವುಡ್ 'ಕ್ವೀನ್' ಕಂಗನಾ ಅಲ್ಲ ದೀಪಿಕಾ ಪಡುಕೋಣೆ: ಕತ್ರಿನಾ ಕೈಫ್, ಆಲಿಯಾ ಲೆಕ್ಕಕ್ಕಿಲ್ಲ!
ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ ಹವಾ ಜೋರಾಗಿ ನಡೆಯುತ್ತಿದೆ. ಕೆಲ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡ ಬಳಿಕ ದೀಪಿಕಾ ಕಥೆ ಮುಗೀತು ಅಂತಲೇ ಅದೆಷ್ಟು ಮಂದಿ ಮಾತಾಡಿಕೊಂಡಿದ್ದರು. ಆದ್ರೀಗ ಮತ್ತೆ ಬಾಲಿವುಡ್ ಪಾಲಿಗೆ ಮಸ್ತಾನಿ ಲಕ್ಕಿ ಲೇಡಿಯಾಗಿ ಹೊರಹೊಮ್ಮಿದ್ದಾರೆ.
ಶಾರುಖ್ ಖಾನ್ ಸಿನಿಮಾ 'ಪಠಾಣ್' ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ ಬಳಿಕ ದೀಪಿಕಾ ಪಡುಕೋಣೆ ಬಾಲಿವುಡ್ ಕ್ವೀನ್ ಆಗಿ ಹೊರಹೊಮ್ಮಿದ್ದಾರೆ. 'ಪಠಾಣ್' ಸಿನಿಮಾದಲ್ಲಿ ದೀಪಿಕಾ ರೋಲ್ ಸಿನಿಪ್ರಿಯರಿಗೆ ಸಖತ್ ಇಷ್ಟ ಆಗಿದೆ.
ದೀಪಿಕಾ ಪಡುಕೋಣೆಯ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇನ್ನೊಂದು ಕಡೆ ದೀಪಿಕಾ ಪಡುಕೋಣೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಈ ನಟಿ ಬಾಲಿವುಡ್‌ನ ಸ್ಟಾರ್ ನಟಿಯರನ್ನೆಲ್ಲಾ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಅಸಲಿಗೆ ಏನಿದು? ಲೆಕ್ಕಾಚಾರ? ಬಾಲಿವುಡ್ ಮಂದಿ ಕಂಗನಾ ಬಿಟ್ಟು ದೀಪಿಕಾನೇ ಕ್ವೀನ್ ಅಂತಿರೋದ್ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.

'ಪಠಾಣ್' ಗೆಲುವು ದೀಪಿಕಾ ನಂ 1 ಸ್ಟಾರ್
ಕಿಂಗ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್' ಬ್ಲಕ್‌ಬಸ್ಟರ್ ಅಂತ ಸಾಬೀತಾಗಿದೆ. ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ವಿಶ್ವದಾದ್ಯಂತ ಸುಮಾರು 675 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ 2023ರ ಆರಂಭದಲ್ಲಿ ಸೋಲುಂಡವರಿಗೆ ಗೆಲುವು ಸಿಕ್ಕಂತಾಗಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಇಬ್ಬರಿಗೂ ಸಕ್ಸಸ್ ಸಿಕ್ಕಿದೆ. ಅದರಲ್ಲೂ ದೀಪಿಕಾ ನಂ 1 ನಟಿಯಾಗಿ ಹೊರಹೊಮ್ಮಿದ್ದಾರೆ.

ಕತ್ರಿಕಾ, ಆಲಿಯಾ ಹಿಂದಿಕ್ಕಿದ ದೀಪಿಕಾ
'ಪಠಾಣ್' ಸಿನಿಮಾದ ಸೂಪರ್ ಸಕ್ಸಸ್ ಬಳಿಕ ದೀಪಿಕಾ ಪಡುಕೋಣೆ ಬಾಲಿವುಡ್ ಸ್ಟಾರ್ ನಟಿಯರನ್ನು ಸೈಡಿಗೆ ತಳ್ಳಿದ್ದಾರೆ. ಕತ್ರಿನಾ ಕೈಫ್, ಆಲಿಯಾ ಭಟ್ ಸೈಲೆಂಟಾಗಿ ಪಕ್ಕಕ್ಕೆ ಸರಿದಂತಾಗಿದೆ. ಕತ್ರಿನಾ ಕೈಫ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ 'ಟೈಗರ್ ಜಿಂದಾ ಹೇ' 564.2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದೇ ಆಲಿಯಾ ಭಟ್ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' 200 ಕೋಟಿ ರೂ. ಬ್ಯುಸಿನೆಸ್ ಮಾಡಿತ್ತು. ಈಗ ದೀಪಿಕಾ ಪಡುಕೋಣೆ ಸಿನಿಮಾ 675 ಕೋಟಿ ಕಲೆ ಹಾಕುವ ಮೂಲಕ ಆ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ.

ದೀಪಿಕಾ ಅತೀ ಹೆಚ್ಚು ಬ್ಲಾಕ್‌ಬಸ್ಟರ್ ಸಿನಿಮಾ
ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರೋ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಸಿನಿಮಾಗಳಿವೆ. ಶಾರುಖ್ ಖಾನ್ ಜೊತೆ ನಟಿಸಿದ ಸಿನಿಮಾಗಳೆಲ್ಲವೂ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿವೆ. 'ಪದ್ಮಾವತ್' 585 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, 'ಬಾಜಿರಾವ್ ಮಸ್ತಾನಿ' 355 ಕೋಟಿ ರೂ., ಚೆನ್ನೈ ಎಕ್ಸ್‌ಪ್ರೆಸ್ 424 ಕೋಟಿ ರೂ., 'ಹ್ಯಾಪಿ ನ್ಯೂ ಇಯರ್' 400 ಕೋಟಿ ರೂ. ಕಲೆ ಹಾಕಿವೆ. ಬಾಲಿವುಡ್‌ನ ಸ್ಟಾರ್ ನಟಿಯರ ಪಟ್ಟಿಯಲ್ಲಿರುವ ಕತ್ರಿನಾ ಕೈಫ್, ಆಲಿಯಾ ಭಟ್ ಸಿನಿಮಾಗಳು ಈ ಮಟ್ಟಿಗೆ ಸಕ್ಸಸ್ ಕಂಡಿಲ್ಲ.

ಕಂಗನಾ ಅಲ್ಲ ದೀಪಿಕಾ ಪಡುಕೋಣೆ 'ಕ್ವೀನ್'
ದೀಪಿಕಾ ಪಡುಕೋಣೆಯ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋತಿದ್ದವು. 'ಛಪಾಕ್', '83' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದವು. ಇನ್ನು ಓಟಿಟಿಯಲ್ಲಿ ತೆರೆಕಂಡಿದ್ದ 'ಗೆಹರಾಯಿಯಾ'ಗೂ ನೆಗೆಟಿವ್ ಕಮೆಂಟ್ ಸಿಕ್ಕಿತ್ತು. ಆದರೆ, ಇವೆಲ್ಲದರಿಂದಲೂ ದೀಪಿಕಾ ಹೊರಬಂದು ಗೆಲುವು ಕಂಡಿದ್ದಾರೆ. ಇನ್ನು ಕಂಗನಾ ರನೌತ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿವೆ. ಸದ್ಯ ಬಾಕ್ಸಾಫೀಸ್‌ನಲ್ಲಿ ದೀಪಿಕಾ ರೂಲ್ ಮಾಡುತ್ತಿರೋದ್ರಿಂದ ದೀಪಿಕಾನೇ ಕ್ವೀನ್ ಎನ್ನುತ್ತಿದೆ ಬಾಲಿವುಡ್.


Click it and Unblock the Notifications











