"ಅವರೊಂದಿಗೆ ಮಲಗಿದ್ದರೆ, ಇದು ನನ್ನ 30ನೇ ಸಿನಿಮಾ ಆಗಿರುತ್ತಿತ್ತು": ಬಾಲಿವುಡ್ ನಟಿ ಪಾಯಲ್ ಘೋಷ್!
ಬಾಲಿವುಡ್‌ನ ವಿವಾದಾತ್ಮಕ ನಟಿ ಪಾಯಲ್ ಘೋಷ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಈಕೆ ಮಾಡಿದ ಒಂದು ಬಾಲಿವುಡ್ ಅಂಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆ ಬಗ್ಗೆ ಇನ್ನೇನು ಚರ್ಚೆ ಶುರುವಾಗಬೇಕು ಅನ್ನುವಷ್ಟರಲ್ಲೇ ದಿಢೀರನೇ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ಇದೇ ನಟಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದು ದೇಶಾದ್ಯಂತ ಸುದ್ದಿ ಮಾಡಿತ್ತು. ಈಗ ಡಿಲೀಟ್ ಮಾಡಿರುವ ಪೋಸ್ಟ್‌ನಲ್ಲಿ ಫಿಲ್ಮ್ ಮೇಕರ್ಸ್ ಜೊತೆ ಮಲಗಿದ್ದರೆ ಅತೀ ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದೆ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಮೂಲಕ ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಪರೋಕ್ಷವಾಗಿ ಧ್ವನಿ ಎತ್ತಿದ್ದಾರೆ. ಈಕೆಯ ಈ ಟ್ವೀಟ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪಾಯಲ್ ಘೋಷ್ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ಆ ಟ್ವೀಟ್‌ನಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಮಲಗಿದ್ದರೆ 30 ಸಿನಿಮಾ ಮಾಡುತ್ತಿದ್ದೆ"
ಪಾಯಲ್ ಘೋಷ್ ಇತ್ತೀಚೆಗಷ್ಟೇ 11ನೇ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಇತ್ತೀಚೆಗೆ 'ಫೈಯರ್ ಆಫ್ ಲವ್: ರೆಡ್' ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿ, ಫಿಲ್ಮ್ ಮೇಕರ್ಸ್ ಜೊತೆ ಮಲಗಿದ್ದರೆ, 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ ಎಂದು ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
"ಫೈಯರ್ ಆಫ್ ಲವ್: ರೆಡ್ ಸಿನಿಮಾ ಮೂಲಕ ನಾನು 11ನೇ ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದೇನೆ. ನಾನು ಫಿಲ್ಮ್‌ಮೇಕರ್ಸ್ ಜೊತೆ ಮಲಗಿದ್ದರೆ ಈಗ 30ನೇ ಸಿನಿಮಾವನ್ನು ಪೂರ್ಣಗೊಳಿಸಿರುತ್ತಿದ್ದೆ. ದೊಡ್ಡ ಸಿನಿಮಾಗಳು ಬೇಕು ಅಂದರೆ, ನೀವು ಮಲಗಲೇಬೇಕು. ಇಲ್ಲಾ ಅಂದರೆ, ದೊಡ್ಡ ಸಿನಿಮಾ ಸಿಗುವುದಕ್ಕೆ ಸಾಧ್ಯವೇ ಇಲ್ಲ" ಎಂದು ಟ್ವೀಟ್ ಮಾಡಿದ್ದರು.

ಪಾಯಲ್ ಘೋಷ್ ಯಾರು?
ಬಾಲಿವುಡ್, ಕನ್ನಡ, ತೆಲುಗು ಭಾಷೆಗಳಲ್ಲಿ ನಟಿಸಿರುವ ಪಾಯಲ್ ಘೋಷ್ ವಿವಾದಾತ್ಮಕ ಹೇಳಿಕೆಗಳಿಂದಲೇ ಜನಪ್ರಿಯರಾಗಿದ್ದಾರೆ. 2008ರಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಬಿಬಿಸಿಯ 'ಶಾರ್ಪ್ ಪೆರಿಲ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿಂದ ತೆಲುಗು, ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
'ವರ್ಷಧಾರೆ' ಅನ್ನೋ ಏಕೈಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೇ ತೆಲುಗಿನಲ್ಲಿ ಜೂ.ಎನ್‌ಟಿಆರ್ ಹಾಗೂ ತಮನ್ನಾ ನಟನೆಯ 'ಊಸರವಳ್ಳಿ' ಸಿನಿಮಾದಲ್ಲೂ ನಟಿಸಿದ್ದರು. ಆದರೆ, ಈಕೆಗೆ ಮೂರ್ನಾಲ್ಕು ಭಾಷೆಗಳಲ್ಲಿ ನಟಿಸಿದ್ದರೂ, ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಕೇವಲ 11 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ.
ಅನುರಾಗ್ ಕಶಪ್ಯ ವಿರುದ್ಧ ಆರೋಪ
2020ರಲ್ಲಿ ಪಾಯಲ್ ಘೋಷ್ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿ, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು ನೀಡಿದ್ದರು. 2013ರಲ್ಲಿ ಮುಂಬೈನ ವರ್ಸೋವಾದಲ್ಲಿ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಕೇಸ್ ದಾಖಲು ಮಾಡಿದ್ದರು.
ಅನುರಾಗ್ ಕಶ್ಯಪ್ ಈ ದೂರನ್ನು ತಿರಸ್ಕರಿಸಿದ್ದರು. ಸರ್ಕಾರ ವಿರುದ್ಧ ಮಾತಾಡುತ್ತಿರುವ ತನ್ನ ಬಾಯನ್ನು ಮುಚ್ಚಿಸು ಪ್ರಯತ್ನವಿದು ಎಂದು ಪ್ರತಿಕ್ರಿಯೆ ನೀಡಿದ್ದರು. ಆಗಲೂ ಪಾಯಲ್ ಘೋಷ್ ಆರೋಪದ ಬಗ್ಗೆ ದೇಶಾದ್ಯಂತ ಚರ್ಚೆ ನಡೆದಿತ್ತು.


Click it and Unblock the Notifications











