ಸುಶಾಂತ್ ಸಾವಿನ ಬಗ್ಗೆ ಹತ್ತು ಗಂಟೆ ವಿಚಾರಣೆ: ಪೊಲೀಸರಿಗೆ ರಿಯಾ ತಿಳಿಸಿದ್ದೇನು?

ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಅವರ ಆಪ್ತ ಗೆಳತಿ ರಿಯಾ ಚಕ್ರಬೊರ್ತಿ ಅವರನ್ನು ಬಾಂದ್ರಾ ಪೊಲೀಸರು ಗುರುವಾರ ವಿಚಾರಣೆ ನಡೆಸಿದರು. ಸುಮಾರು ಹತ್ತು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ರಜಪೂತ್ ಕುಟುಂಬದ ಸದಸ್ಯರು ಸೇರಿದಂತೆ ಪೊಲೀಸರು ಇದುವರೆಗೂ ಹತ್ತಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ.

ಇದಕ್ಕೂ ಮುನ್ನ ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ಮತ್ತು ಸುಶಾಂತ್ ಕುಟುಂಬದ ಸದಸ್ಯರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಇರುವ ಮಾಹಿತಿಯನ್ನು ಪೊಲೀಸರ ಮುಂದೆ ದಾಖಲಿಸಿದ್ದರು. ಗುರುವಾರ ರಿಯಾ, ಸುಶಾಂತ್ ಅವರ ಬಿಜಿನೆಸ್ ಮ್ಯಾನೇಜರ್ ಶ್ರುತಿ ಮೋದಿ ಮತ್ತು ಸುಶಾಂತ್ ಪಿಆರ್ ತಂಡದ ರಾಧಿಕಾ ನಿಹಲಾನಿ ಅವರನ್ನು ತನಿಖಾ ತಂಡ ಪ್ರಶ್ನಿಸಿ ಮಾಹಿತಿ ಕಲೆಹಾಕಿತು. ಮುಂದೆ ಓದಿ...

ಶ್ರುತಿ ಮೋದಿ ಹೇಳಿಕೆ ದಾಖಲು

ಶ್ರುತಿ ಮೋದಿ ಹೇಳಿಕೆ ದಾಖಲು

ಸುಶಾಂತ್ ಅವರೊಂದಿಗೆ 2019ರ ಜುಲೈನಿಂದ 2020ರ ಫೆಬ್ರವರಿವರೆಗೆ ಶ್ರುತಿ ಮೋದಿ ಕೆಲಸ ಮಾಡಿದ್ದರು. ನೇಷನ್ ಇಂಡಿಯಾ ಫಾರ್ ವರ್ಲ್ಡ್ ಎಂಬ ಸಮಾಜ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಲು ಸುಶಾಂತ್ ಸಿದ್ಧತೆ ನಡೆಸಿದ್ದರು. ಇದರ ಮೂಲಕ ಪರಿಸರ ಹಾಗೂ ಸಾಮಾಜಿಕ ಕಾರ್ಯಗಳಿಗೆ ಕಾಲೇಜು ವಿದ್ಯಾರ್ಥಿಗಳ ಜತೆ ಕೆಲಸ ಮಾಡಲು ಬಯಸಿದ್ದರು. ಇದರ ಜತೆಗೆ 'ಜೀನಿಯಸ್' ಮತ್ತು 'ಡ್ರಾಪ್ ಔಟ್ಸ್' ಎಂಬ ಪ್ರಾಜೆಕ್ಟ್‌ಗಳನ್ನು ಆರಂಭಿಸಲು ಬಯಸಿದ್ದರು ಎಂಬುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಿಯಾ ಸುದೀರ್ಘ ವಿಚಾರಣೆ

ರಿಯಾ ಸುದೀರ್ಘ ವಿಚಾರಣೆ

ರಿಯಾ ಅವರನ್ನು ಸುದೀರ್ಘ ಕಾಲ ವಿಚಾರಣೆಗೆ ಒಳಪಡಿಸಲಾಯಿತು. ತಂದೆಯ ಜತೆಗೆ ವಿಚಾರಣೆಗೆ ಬಂದ ಅವರು, ಮಾಧ್ಯಮದ ಜತೆ ಏನೂ ಮಾತನಾಡಲಿಲ್ಲ. ಸುಶಾಂತ್ ಜತೆಗಿನ ಸಂಬಂಧ ಮತ್ತು ಬ್ರೇಕಪ್, ಅವರ ಸಿನಿಮಾಗಳು, ಸುಶಾಂತ್ ಅವರಿಗಿದ್ದ ಮಾನಸಿಕ ಖಿನ್ನತೆ, ಅವರ ಮಾನಸಿಕ ಸ್ಥಿತಿ ಮುಂತಾದವುಗಳ ಬಗ್ಗೆ ಪೊಲೀಸರು ಪ್ರಶ್ನೆಗಳನ್ನು ಕೇಳಿದರು ಎಂದು ವರದಿಯಾಗಿದೆ.

ಲಾಕ್ ಡೌನ್ ಅವಧಿಯಲ್ಲಿ ಜತೆಗೇ ಇದ್ದರು

ಲಾಕ್ ಡೌನ್ ಅವಧಿಯಲ್ಲಿ ಜತೆಗೇ ಇದ್ದರು

ಸುಶಾಂತ್ ಮತ್ತು ರಿಯಾ ಚಕ್ರಬೊರ್ತಿ ರಿಲೇಷನ್‌ಶಿಪ್‌ನಲ್ಲಿದ್ದು, ಲಾಕ್ ಡೌನ್ ಅವಧಿಯಲ್ಲಿ ಸಂಪೂರ್ಣವಾಗಿ ಜತೆಗೇ ಇದ್ದರು ಎನ್ನಲಾಗಿದೆ. ಇಬ್ಬರೂ ರೂಮರ್‌ಗಳನ್ನು ಒಪ್ಪಿಕೊಂಡಿರಲಿಲ್ಲ ಹಾಗೂ ತಿರಸ್ಕರಿಸಿಯೂ ಇರಲಿಲ್ಲ. ಈ ಬಗ್ಗೆ ರಿಯಾ ಅವರಿಂದ ಪೊಲೀಸರು ವಿವರಣೆ ಕೇಳಿದ್ದರು. ಇಬ್ಬರ ನಡುವೆ ವಿನಿಮಯವಾಗಿದ್ದ ಟೆಕ್ಸ್ಟ್ ಮೆಸೇಜ್‌ಗಳನ್ನು ತೋರಿಸುವಂತೆ ಕೇಳಿದರು. ಅವರ ಫೋಟೊಗಳು ಹಾಗೂ ವಿಡಿಯೋಗಳು ಸೇರಿದಂತೆ ಸಂಪೂರ್ಣ ಫೋನ್‌ಅನ್ನು ಸ್ಕ್ಯಾನ್ ಮಾಡಲಾಯಿತು. ಸುಶಾಂತ್ ಜತೆ ವಾಸಿಸುತ್ತಿದ್ದದ್ದು ಮತ್ತು ಇಬ್ಬರೂ ಮನೆ ಖರೀದಿಗೆ ಚಿಂತನೆ ನಡೆಸಿದ್ದನ್ನು ತಿಳಿಸಿದರು. ಹಾಗೆಯೇ ಈ ವರ್ಷದ ಕೊನೆಯಲ್ಲಿ ಮದುವೆಯಾಗಲು ಉದ್ದೇಶಿಸಿದ್ದೆವು ಎಂಬ ಮಾಹಿತಿ ನೀಡಿದರು.

ಕೆಲವೇ ದಿನದ ಮುನ್ನ ತೊರೆದಿದ್ದರು

ಕೆಲವೇ ದಿನದ ಮುನ್ನ ತೊರೆದಿದ್ದರು

ಕಾರ್ಟರ್ ರಸ್ತೆಯ ಪೆಂಟ್‌ಹೌಸ್‌ನಲ್ಲಿ ರಿಯಾ ಮತ್ತು ಸುಶಾಂತ್ ವಾಸಿಸುತ್ತಿದ್ದರು. ಸ್ನೇಹಿತ ಸಿದ್ಧಾರ್ಥ್ ಪಿಟಾನಿ ಜತೆಗೆ ಸುಶಾಂತ್ ಇದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ ಸುಶಾಂತ್ ಸಾಯುವ ಕೆಲವೇ ದಿನಗಳ ಮುನ್ನ ಅವರು ತಮ್ಮ ಬ್ಯಾಗ್‌ಗಳ ಸಮೇತ ಅಲ್ಲಿಂದ ಹೊರಡಲು ನಿರ್ಧರಿಸಿದ್ದರು. ಇದರ ಬಗ್ಗೆ ಪೊಲೀಸರು ಅನುಮಾನ ಹೊಂದಿದ್ದರು. ಬ್ರೇಕಪ್ ಕುರಿತಂತೆ ಪ್ರಶ್ನೆಗಳನ್ನು ಕೇಳಿದ್ದರು.

ಇಬ್ಬರ ನಡುವೆ ಜಗಳ ನಡೆದು ರಿಯಾ ಅಲ್ಲಿಂದ ಹೊರಟಿದ್ದರು ಎನ್ನಲಾಗಿದೆ. ಸುಶಾಂತ್ ಮತ್ತು ತಮ್ಮ ನಡುವೆ ನಡೆದ ಮೆಸೇಜ್‌ಗಳನ್ನು ಕೂಡ ರಿಯಾ ತೋರಿಸಿದರು. ಫೋನ್‌ನಲ್ಲಿ ಇಬ್ಬರೂ ಮಾತನಾಡಿದ್ದೆವು ಎಂದು ಮಾಹಿತಿ ನೀಡಿದರು.

ಸುಶಾಂತ್ ಕೊನೆಯ ಕರೆಗಳು

ಸುಶಾಂತ್ ಕೊನೆಯ ಕರೆಗಳು

ಶನಿವಾರ ರಾತ್ರಿ ಕೂಡ ರಿಯಾ ಅವರಿಗೆ ಸುಶಾಂತ್ ಫೋನ್ ಮಾಡಿದ್ದರು. ಮಲಗುವ ಮೊದಲು ಸ್ನೇಹಿತ ಮಹೇಶ್ ಶೆಟ್ಟಿಗೆ ಕರೆ ಮಾಡಿದ್ದರು. ಬಳಿಕ ರಿಯಾಗೆ ಫೋನ್ ಮಾಡಿದ್ದರು. ಆದರೆ ಇಬ್ಬರೂ ಕರೆ ಸ್ವೀಕರಿಸಿರಲಿಲ್ಲ. ನಂತರ ಮಲಗಿದ್ದರು. ಬೆಳಿಗ್ಗೆ ಎದ್ದಾಗ ಮಹೇಶ್ ಕಾಲ್ ಮಾಡಿದ್ದು ಗೊತ್ತಾಗಿತ್ತು. ಸುಶಾಂತ್ ಮತ್ತೆ ಪ್ರಯತ್ನಿಸಿದಾಗ ಕಾಲ್ ಕನೆಕ್ಟ್ ಆಗಿರಲಿಲ್ಲ ಎಂದು ಕಾಲ್ ರೆಕಾರ್ಡ್‌ಗಳು ತಿಳಿಸಿವೆ.

ಸುಶಾಂತ್ ವರ್ತನೆ ಬಗ್ಗೆ ಪ್ರಶ್ನೆ

ಸುಶಾಂತ್ ವರ್ತನೆ ಬಗ್ಗೆ ಪ್ರಶ್ನೆ

ಸುಶಾಂತ್ ಅವರಿಗೆ ಖಿನ್ನತೆ ಇರುವುದನ್ನು ವೈದ್ಯರು ತಿಳಿಸಿದ್ದರು. ಅದಕ್ಕೆ ಚಿಕಿತ್ಸೆ ನೀಡುತ್ತಿದ್ದರು. ಈ ಎಲ್ಲ ಸಮಯದಲ್ಲಿ ರಿಯಾ ಮಾತ್ರವೇ ಅವರ ಜತೆಗಿದ್ದರು. ರಿಯಾ ಕಂಡಿರಬಹುದಾದ ಸುಶಾಂತ್ ವರ್ತನೆಯ ಬದಲಾವಣೆಗಳ ಬಗ್ಗೆ ಪೊಲೀಸರು ಪ್ರಶ್ನಿಸಿದರು. ಯೋಗ ಮತ್ತು ಧ್ಯಾನ ಮಾಡುತ್ತಿದ್ದ ಸುಶಾಂತ್ ತಮ್ಮ ಸಮಸ್ಯೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು ಎಂದು ಸುಶಾಂತ್ ಹೇಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದನ್ನು ರಯಾ ವಿವರಿಸಿದರು.

ಕೆಲವು ದಿನ ಸುಶಾಂತ್ ತೀರಾ ಬೇಸರ, ಖಿನ್ನತೆಯಲ್ಲಿದ್ದಾಗ ಔಷಧ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರು ಎನ್ನಲಾಗಿದೆ. ತಮಗೆ ಸದ್ದುಗಳು ಕೇಳಿಬರುತ್ತಿದೆ ಎಂದು ಸುಶಾಂತ್ ವಿಚಿತ್ರವಾಗಿ ವರ್ತಿಸತೊಡಗಿದಾಗಿ ಆ ಫ್ಲಾಟ್‌ಅನ್ನು ತೊರೆಯುವಂತೆ ಮಹೇಶ್ ಭಟ್, ರಿಯಾಗೆ ಸಲಹೆ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ ವಿಚಾರಣೆ ವೇಳೆ ಈ ಅಂಶ ಬರಲಿಲ್ಲ ಎನ್ನಲಾಗಿದೆ.

ಕೈ ಮುಗಿದ ರಿಯಾ

ಕೈ ಮುಗಿದ ರಿಯಾ

ಪೊಲೀಸ್ ವಿಚಾರಣೆ ವೇಳೆ ರಿಯಾ ತಂದೆಯನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಮಗಳೊಂದಿಗೆ ಇರಲು ಅವರಿಗೆ ಅವಕಾಶ ನೀಡಿರಲಿಲ್ಲ. ವಿಚಾರಣೆ ಮುಗಿಸಿ ಹೊರಬಂದ ಬಳಿಕ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೆ ಎರಡೂ ಕೈ ಮುಗಿದು ಮುಂದೆ ಸಾಗಿದ್ದರು.

More from Filmibeat

English summary
Police on Thursday interrogated Sushant Singh Rajput's close friend Rhea Chakraborty for almost 10 hours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X