ಹೆಲ್ಮೆಟ್-ಶರ್ಟ್ ಎರಡೂ ಇಲ್ಲ.. ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪೊಲೀಸರ ಕ್ರಮ?

ಬಾಲಿವುಡ್ ನಟ ಸೋನು ಸೂದ್ ಸಿನಿಮಾ ಅಷ್ಟೇ ಅಲ್ಲ ಸಮಾಜಮುಖಿ ಕೆಲಸಗಳಿಂದ ಜನಪ್ರಿಯರಾದವರು. ಹಲವು ಸಂಕಷ್ಟದ ಸಮಯದಲ್ಲಿ ಸೋನು ಸೂದ್ ಸಾಮನ್ಯ ಜನರ ನೆರವಿಗೆ ಬಂದಿದ್ದರು. ಈ ಬಹುಮುಖ ನಟ ಸಹಾಯ ಮನೋಭಾವವನ್ನು ಜನರು ಹೊಗಳಿ ಕೊಂಡಾಡಿದ್ದರು. ಆದರೆ, ಇತ್ತೀಚೆಗೆ ಈ ನಟ ಹೆಸರು ವಿವಾದಗಳಲ್ಲಿ ಸಿಕ್ಕಿಕೊಳ್ಳುತ್ತಿದೆ.

Police taking action against Sonu Sood for riding bike without helmet and shirt

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸೋನು ಸೂದ್ ಬೈಕ್ ರೈಡ್ ಮಾಡುತ್ತಿರುವ ವಿಡಿಯೋ ಒಂದು ಹರಿದಾಡುತ್ತಿತ್ತು. ಇದೇ ವಿಡಿಯೋ ವಿರುದ್ಧ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ನಟನ ವಿರುದ್ಧ ಕಮೆಂಟ್ ಮಾಡುತ್ತಿದ್ದಾರೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋನು ಸೂದ್ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಸೋನು ಸೂದ್ ಹಿಮಾಚಲ ಪ್ರದೇಶದಲ್ಲಿರು ಸ್ಪಿತಿ ಕಣಿವೆಯಲ್ಲಿ ಬೈಕ್ ರೈಡ್ ಮಾಡಿದ್ದಾರೆ. ಹಿಂಬಾಲಕರೊಂದಿಗೆ ಸೋನು ಸೂದ್ ಹೆಲ್ಮೆಟ್ ಹಾಗೂ ಶರ್ಟ್ ಎರಡೂ ಧರಿಸದೆ ಜಾಲಿ ಮೂಡ್‌ನಲ್ಲಿ ಬೈಕ್ ರೈಡ್ ಮಾಡಿದ್ದರು. ಅಷ್ಟೇ ಅಲ್ಲದೆ ಅದನ್ನು ತನ್ನ ಆಪ್ತರ ಕೈ ಯಲ್ಲಿ ವಿಡಿಯೋ ಕೂಡ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದಕ್ಕೆ ಸಿಕ್ಕಿಕೊಂಡಿದೆ. ಅಸಲಿಗೆ ಈ ವಿಡಿಯೋದಿಂದ ಸೋನು ಸೂದ್ ಟೀಕೆಗೆ ಗುರಿಯಾಗಿದ್ದು ಯಾಕೆ? ತಿಳಿಯಲು ಮುಂದೆ ಓದಿ.

ಸೋನು ಸೂದ್‌ಗೆ ಭಾರತದಾದ್ಯಂತ ಒಳ್ಳೆಯ ಹೆಸರು ಇದೆ. ಕೋವಿಡ್ ಸಮಯದಲ್ಲಿ ಸೋನು ಸೂದ್ ಸಾಮಾನ್ಯ ಜನರಿಗೆ ಮಾಡಿದ ಸಹಾಯವನ್ನು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಸೋನು ಸೂದ್ ಕೂಡ ಕೆಲವು ತಪ್ಪುಗಳನ್ನು ಮಾಡಿಕೊಂಡು ವಿವಾದಕ್ಕೆ ಸಿಲುಕುತ್ತಿದ್ದಾರೆ. ಈಗ ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ, ಈ ಬಗ್ಗೆ ಸೋನು ಸೂದ್ ಪ್ರತಿಕ್ರಿಯೆ ನೀಡಿಲ್ಲ.

ಭಾರತದಲ್ಲಿ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವುದಕ್ಕೆ ಅನುಮತಿ ಇಲ್ಲ. ಅದು ಗೊತ್ತಿದ್ದರೂ ಸಹ ಸೋನು ಸೂದ್ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದೇಕೆ? ಅಂತ ನೆಟ್ಟಿಗರು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಕೆಲವರಂತೂ ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಟ್ಯಾಗ್ ಮಾಡಿ ಹಿಮಾಚಲ ಪ್ರದೇಶ ಪೊಲೀಸರು ನಟ ಸೋನು ಸೂದ್ ಅವರ ವಿರುದ್ಧ ದೂರನ್ನು ದಾಖಲಿಸುತ್ತಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋನು ಸೂದ್ ವಿರುದ್ಧ ಪೊಲೀಸರು ಕ್ರಮ ಮುಂದಾಗಿದ್ದಾರೆ ಎನ್ನಲಾಗಿದೆ.

More from Filmibeat

Read more about: sonu sood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X