ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾ ಪ್ರಾಬಲ್ಯ ಸಾಧಿಸಿವೆಯೇ? ಐಶ್ವರ್ಯಾ ರೈ ಕೊಟ್ಟ ಉತ್ತರವೇನು?

ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ 'ಪೊನ್ನಿಯಿನ್ ಸೆಲ್ವನ್ 2'. ಈ ಸಿನಿಮಾ ಏಪ್ರಿಲ್ 28ರಂದು ರಿಲೀಸ್ ಆಗುತ್ತಿದೆ. ಈ ಮಲ್ಟಿಸ್ಟಾರರ್ ಸಿನಿಮಾದ ಚಾಪ್ಟರ್ 1 ಈಗಾಗಲೇ ರಿಲೀಸ್ ಆಗಿದ್ದು, ತಮಿಳು ಪ್ರೇಕ್ಷಕರನ್ನು ಹೆಚ್ಚಾಗಿ ರಂಜಿಸಿತ್ತು. ಈಗ ಅದೇ ಸಿನಿಮಾದ ಪಾರ್ಟ್ 2 ರಿಲೀಸ್‌ಗೆ ರೆಡಿಯಾಗಿದೆ.

'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದಲ್ಲಿ ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯ ರೈ ಬಚ್ಚನ್, ತ್ರಿಶಾ, ಶೋಭಿತಾ ಧೂಳಿಪಾಲ, ಶರತ್ ಕುಮಾರ್, ಪ್ರಕಾಶ್ ರಾಜ್, ಪ್ರಭು, ವಿಕ್ರಮ್ ಪ್ರಭು, ಜಯರಾಮ್, ಐಶ್ವರ್ಯ ಲಕ್ಷ್ಮಿ, ಪ್ರಕಾಶ್ ರಾಜ್ ಅಂತಹ ದಿಗ್ಗಜರು ನಟಿಸಿದ್ದಾರೆ. ಹೀಗಾಗಿ ಎರಡನೇ ಭಾಗದಲ್ಲಿ ಏನಾಗುತ್ತೆ ಅನ್ನೋ ಕುತೂಹಲವಿದೆ.

Ponniyin Selvan 2 Star Aishwarya Rai opens up about south movie success in bollywood

ಈ ಸಿನಿಮಾದ ಮೊದಲ ಭಾಗ ಕುತೂಹಲ ಘಟ್ಟದಲ್ಲಿ ಮುಕ್ತಾಯಗೊಂಡಿತ್ತು. ಚೋಳ ಸಾಮ್ರಾಜ್ಯದ ಉತ್ತರಾಧಿಕಾರಿ ಅರುಲ್ಮೋಳಿ ವರ್ಮನ್ ಸತ್ತಿದ್ದಾನೆಂದು ಭಾವಿಸಲಾಗಿದೆ. ಇಲ್ಲಿಂದಲೇ 'ಪೊನ್ನಿಯಿನ್ ಸೆಲ್ವನ್ 2' ಕಥೆಯು ಮುಂದುವರೆಯುತ್ತೆ. ಕುತೂಹಲ ಘಟ್ಟದಲ್ಲಿರೋ ಈ ಸಿನಿಮಾ ಬಗ್ಗೆ ಇಡೀ ತಂಡವೇ ಒಟ್ಟಾಗಿ ಪ್ರಚಾರ ಮಾಡುತ್ತಿದೆ. ಈ ವೇಳೆ ಐಶ್ವರ್ಯಾ ರೈಗೆ ದಕ್ಷಿಣದ ಸಿನಿಮಾ ಬಾಲಿವುಡ್‌ನಲ್ಲಿ ಪ್ರಾಬಲ್ಯ ಸಾಧಿಸಿವೆಯೇ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಐಶ್ ಕೊಟ್ಟ ಉತ್ತರವೇನು?

ಐಶ್ವರ್ಯಾ ನೀಡಿದ ಉತ್ತರ ಏನು?

ಚೋಳ ಯಾತ್ರೆ ಅನ್ನೋ ಹೆಸರಿಟ್ಟು ಇಡೀ ತಂಡ ಪ್ರಚಾರ ಆರಂಭಿಸಿದೆ. ದೇಶದ ವಿವಿಧ ಭಾಗಗಳಲ್ಲಿ ನಟರು ಪ್ರಚಾರ ಮಾಡುತ್ತಿದ್ದಾರೆ. ಹಾಗೇ ಐಶ್ವರ್ಯಾ ರೈ ಕೂಡ 'ಪೊನ್ನಿಯಿನ್ ಸೆಲ್ವನ್ 2' ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಐಶ್ವರ್ಯಾ ರೈ ಬಚ್ಚನ್‌ಗೆ ಕಠಿಣ ಪ್ರಶ್ನೆಯನ್ನು ಕೇಳಿದ್ದರು.

ಬಾಲಿವುಡ್‌ನಲ್ಲಿ ದಕ್ಷಿಣದ ಸಿನಿಮಾ ಡಾಮಿನೇಟ್ ಮಾಡುತ್ತಿವೆಯೇ ಎಂಬ ಪ್ರಶ್ನೆಗೆ ಐಶ್ವರ್ಯಾ ರೈ ತನ್ನದೇ ಶೈಲಿಯಲ್ಲಿ ಕೂಲ್ ಆಗಿ ಪ್ರತಿಕ್ರಿಯಿಸಿದ್ದಾರೆ. ಯಾರಿಗೂ ನೋವಾಗದಂತೆ ಪ್ರತಿಕ್ರಿಯೆ ನೀಡಿದ್ದು ಮೆಚ್ಚುಗೆಗೆ ಗಳಿಸಿತ್ತು.

Ponniyin Selvan 2 Star Aishwarya Rai opens up about south movie success in bollywood

ಎಲ್ಲಿದ್ದರೂ ಕಲೆ ಎಂಬುದು ಒಂದೇ

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಐಶ್ವರ್ಯಾ ರೈ ಆರಾಮಾಗಿ ಪ್ರತಿಕ್ರಿಯಿಸಿದ್ದಾರೆ. "ನನಗೆ ದಕ್ಷಿಣ ಮತ್ತು ಉತ್ತರ ಎಂಬ ಭೇದವಿಲ್ಲ. ನಮ್ಮ ದೇಶದ ಯಾವುದೇ ಚಿತ್ರರಂಗವಿದ್ದರೂ ಅದನ್ನು ಭಾರತೀಯ ಚಿತ್ರರಂಗವೆಂದೇ ಭಾವಿಸುತ್ತೇನೆ. ಒಂದು ಚಿತ್ರರಂಗ ಇನ್ನೊಂದು ಚಿತ್ರರಂಗಕ್ಕಿಂತ ಮೇಲು ಅನ್ನೋದನ್ನು ನಾನು ಒಪ್ಪುವುದಿಲ್ಲ" ಎಂದಿದ್ದಾರೆ.

"ಕಲಾವಿದರು ಎಲ್ಲಿಗೆ ಹೋದರೂ ಕಲಾವಿದರೇ. ಪ್ರತಿಯೊಂದು ಚಿತ್ರರಂಗವೂ ಕಲಿಯುವುದು ಬಹಳಷ್ಟಿದೆ. ದಕ್ಷಿಣ ಭಾರತದ ಟಾಪ್ ನಿರ್ದೇಶಕರೆನಿಸಿಕೊಂಡಿರೊ ಮಣಿರತ್ನಂ ಹಾಗೂ ಶಂಕರ್ ಇಬ್ಬರೊಂದಿಗೂ ಕೆಲಸ ಮಾಡಿದ್ದೇನೆ. ಹಾಗಾಗಿ ಉಳಿದ ಚಿತ್ರರಂಗ ಶ್ರೇಷ್ಠ ಅಲ್ಲ ಅನ್ನೋದನ್ನು ನಾನು ವಿರೋಧಿಸುತ್ತೇನೆ" ಎಂದು ಐಶ್ವರ್ಯಾ ರೈ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.

ಇನ್ನು 'ಪೊನ್ನಿಯಿನ್ ಸೆಲ್ವನ್ 1' ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂ. ಕಲೆ ಹಾಕಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಈ ಸಿನಿಮಾವನ್ನು ದಕ್ಷಿಣ ಭಾರತದಲ್ಲಿಯೇ ಹೆಚ್ಚು ಇಷ್ಟ ಪಟ್ಟಿದ್ದರು. ಬಾಲಿವುಡ್‌ ಸಿನಿಪ್ರೇಮಿಗಳು ಈ ಸಿನಿಮಾ ಬಗ್ಗೆ ಆಸಕ್ತಿ ತೋರಲಿಲ್ಲ.

ಹೀಗಾಗಿ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ತಮಿಳು ಸೇರಿದಂತೆ ಉಳಿದ ನಾಲ್ಕು ಭಾಷೆಗಳಲ್ಲೂ ಮೆಚ್ಚುಗೆ ಗಳಿಸುತ್ತಾ? ಹೊಸ ದಾಖಲೆ ಬರೆಯುತ್ತಾ? ದಕ್ಷಿಣದಿಂದ ಉತ್ತರದವರೆಗೂ ಸಿನಿಪ್ರೇಮಿಗಳು ಇಷ್ಟ ಪಡುತ್ತಾರಾ? ಅನ್ನೋ ಪ್ರಶ್ನೆ ಶೀಘ್ರವೇ ಉತ್ತರ ಸಿಗಲಿದೆ.

More from Filmibeat

English summary
Ponniyin Selvan 2 Star Aishwarya Rai opens up about south movie success in bollywood, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X