ಬಾಬಿ ಡಿಯೋಲ್-ಪೂಜಾ ಭಟ್ ಡೇಟಿಂಗ್.. ಬ್ರೇಕಪ್; 4 ದಶಕಗಳ ಬಳಿಕ ಬಾಯ್ಬಿಟ್ಟ ನಟಿ
ಬಾಲಿವುಡ್‌ನ ಹಿಟ್‌ಮ್ಯಾನ್ ದಿವಂಗತ ಧರ್ಮೇಂದ್ರ ಅವರ ಪುತ್ರ ಬಾಬಿ ಡಿಯೋಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆರಂಭದಲ್ಲಿ ಹೀರೋ ಯಶಸ್ಸು ಗಳಿಸಿದ್ದರೂ ಬಾಬಿ ನಂತರದ ದಿನಗಳಲ್ಲಿ ಸೋಲನ್ನು ಕಂಡಿದ್ದರು. ಒಂದಿಷ್ಟು ವರ್ಷಗಳು ಬಾಲಿವುಡ್‌ನಿಂದಲೇ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ, 'ಅನಿಮಲ್' ಅನ್ನೋ ಒಂದೇ ಒಂದು ಸಿನಿಮಾ ಅವರ ವೃತ್ತಿ ಬದುಕಿಗೆ ತಿರುವು ಕೊಟ್ಟಿದೆ.
ಬಾಬಿ ಡಿಯೋಲ್ ಬಾಲಿವುಡ್‌ನ ಜನಪ್ರಿಯ ನಟರಲ್ಲಿ ಒಬ್ಬರು. ಚಿತ್ರರಂಗದಲ್ಲಿ ಡೇಟಿಂಗ್, ಅಫೇರ್, ವಿವಾದಗಳಿಂದ ದೂರು ಉಳಿದಿರುವ ನಟ. ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ಈ ನಟ ಚಿತ್ರರಂಗಕ್ಕೆ ಕಾಲಿಟ್ಟ ದಿನಗಳಿಂದ ಯಾವುದೇ ನಟಿಯೊಂದಿಗೆ ಡೇಟಿಂಗ್ ಮಾಡಿದ್ದಿಲ್ಲ. ಆದರೆ, ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಒಬ್ಬ ನಟಿಯೊಂದಿಗೆ ಇವರ ಹೆಸರು ತಳುಕು ಹಾಕಿಕೊಂಡಿತ್ತು.

ಆಕೆಯೇ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಮಹೇಶ್ ಭಟ್ ಪುತ್ರ ಪೂಜಾ ಭಟ್. 1990ರಲ್ಲಿ ಈ ಜೋಡಿ ಡೇಟಿಂಗ್ ಮಾಡುತ್ತಿತ್ತು. ಆದರೆ, ಬಹುಬೇಗನೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದರು. ಇಂತಹದ್ದೊಂದು ಸುದ್ದಿ ಸಾಕಷ್ಟು ಸದ್ದು ಮಾಡಿದ್ದರೂ, ಇಬ್ಬರೂ ಈ ಬಗ್ಗೆ ಎಲ್ಲೂ ಮಾತಾಡುವುದಕ್ಕೆ ಹೋಗಿಲ್ಲ. ಆದ್ರೀಗ ಪೂಜಾ ಭಟ್ ಸಂದರ್ಶನವೊಂದರಲ್ಲಿ ಬಾಬಿ ಡಿಯೋಲ್ ಜೊತೆಗಿನ ಡೇಟಿಂಗ್, ಬ್ರೇಕಪ್ ಬಗ್ಗೆ ರಿವೀಲ್ ಮಾಡಿದ್ದಾರೆ.
ಬಾಲಿವುಡ್ ನಟಿ ಪೂಜಾ ಭಟ್ ಇತ್ತೀಚೆಗೆ ವಿಕ್ಕಿ ಲಾಲ್ವಾನಿ ಜೊತೆಗಿನ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ತನ್ನ ವೃತ್ತಿ ಬದುಕಿ, ಪ್ರೀತಿ, ಬ್ರೇಕಪ್, ಮದುವೆ ಬಗ್ಗೆ ಓಪನ್ ಆಗಿ ಮಾಡಿದ್ದಾರೆ. ಅದರಲ್ಲಿ ಬಾಬಿ ಡಿಯೋಲ್ ಜೊತೆ ಡೇಟಿಂಗ್ ಮಾಡಿದ ದಿನಗಳು, ಬ್ರೇಕಪ್ ಮಾಡಿಕೊಂಡಿದ್ದು ಎಲ್ಲವನ್ನೂ ಓಪನ್ ಆಗಿ ಹಂಚಿಕೊಂಡಿದ್ದಾರೆ.
ಪೂಜಾ ಭಟ್ 'ಡ್ಯಾಡಿ' ಎನ್ನುವ ಸಿನಿಮಾ ಮೂಲಕ ವೃತ್ತಿ ಬದುಕನ್ನು ಆರಂಭಿಸಿದ್ದರು. ಆದರೆ, ನಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈಕೆ ಆಕ್ಟಿಂಗ್ ಮಾಡುವ ಸಮಯದಲ್ಲಿ ಆಕೆ ಪ್ರೀತಿಸುತ್ತಿದ್ದ ವ್ಯಕ್ತಿಗೆ ಈಕೆ ಚಿತ್ರರಂಗದಲ್ಲಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ಆರಂಭದಲ್ಲಿಯೇ ಪೂಜಾ ಭಟ್ ನಟನೆಯನ್ನು ವೃತ್ತಿಯಾಗಿ ಪರಿಗಣಿಸಲಿಲ್ಲ. ಈ ವಿಷಯವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಇದೇ ವೇಳೆ ನಿರೂಪಕ ಬಾಬಿ ಡಿಯೋಲ್ ಜೊತೆಗಿನ ಸಂಬಂಧದದ ಬಗ್ಗೆ ಪ್ರಶ್ನೆ ಮಾಡಿದ್ದರು. ಬಾಬಿ ಡಿಯೋಲ್ ಜೊತೆ ಗಾಢವಾಗಿ ಪ್ರೀತಿ ಮಾಡಿದ್ದರೇ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಪೂಜಾ ಭಟ್ "ಖಂಡಿತವಾಗಿಯೂ.. ಯಾಕೆ ಪ್ರೀತಿಯಲ್ಲಿ ಬೀಳಬಾರದು? ಅದು ನನ್ನ ಬದುಕಿನ ಮ್ಯಾಜಿಕಲ್ ಟೈಮ್ ಆಗಿತ್ತು. ಆ ವ್ಯಕ್ತಿ ಕೂಡ ಮ್ಯಾಜಿಕಲ್ ಹ್ಯೂಮನ್ ಬೀಯಿಂಗ್ ಆಗಿದ್ದರು" ಎಂದು ಪೂಜಾ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೇ ಇಬ್ಬರ ಲವ್ ಸ್ಟೋರಿ ಬ್ರೇಕಪ್‌ನಲ್ಲಿ ಕೊನೆಗೊಂಡಿದ್ದಕ್ಕೆ ಕಾರಣಗಳೇನು ಎಂದು ಕೇಳಿದ್ದರು. ಆದರೆ, ಅದಕ್ಕೆ ಉತ್ತರ ಕೊಡುವುದಕ್ಕೆ ಪೂಜಾ ಭಟ್ ಹಿಂದೇಟು ಹಾಕಿದರು. "ಇವರು ಅವರು ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಬೆಳೆದಿರುವ ಮಕ್ಕಳ ತಂದೆ, ತಮ್ಮ ವೃತ್ತಿ ಬದುಕಿನ ಅದ್ಭುತ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸದ್ಯ ಪರಿಸ್ಥಿತಿಯಲ್ಲಿ ಘಟನೆ ಮತ್ತು ಗೌರವ ಎರಡೂ ನಮಗೆ ಸ್ವಂತ ಅಲ್ಲ, ನಿಮ್ಮ ಜೀವನದಲ್ಲಿದ್ದ ಜನರು ಹಾಗೂ ಅವರ ಜೊತೆಗಿರುವವರಿಗಾಗಿ ಕಾಪಾಡಿಕೊಳ್ಳುವುದು ಕೂಡ ಮುಖ್ಯ ಆಗುತ್ತೆ" ಎಂದು ಪೂಜಾ ಭಟ್ ಹೇಳಿದ್ದಾರೆ. ಈ ಮೂಲಕ ತಮ್ಮಿಬ್ಬರ ನಡುವೆ ಪ್ರೀತಿ ಇತ್ತು. ಅದು ಬ್ರೇಕಪ್ ಮೂಲಕ ಅಂತ್ಯ ಆಯ್ತು ಅನ್ನೋದನ್ನು ಒಪ್ಪಿಕೊಂಡಿದ್ದಾರೆ.


Click it and Unblock the Notifications
