Pooja Hegde: ಸಿನಿಮಾ ಬಿಟ್ಟು ಟೆನ್ನಿಸ್ ರಾಕೆಟ್ ಹಿಡಿದ ಪೂಜಾ ಹೆಗ್ಡೆ.. ಟೆನ್ನಿಸ್ ಸ್ಟಾರ್ ರೋಜರ್ ಫೆಡರರ್‌ಗೆ ಅರ್ಪಣೆ
ಪೂಜಾ ಹೆಗ್ಡೆ ದಶಕಗಳ ಕಾಲ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮೆರೆದಿದ್ದಾರೆ. ಆದ್ರೀಗ ಬಾಲಿವುಡ್ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಪೂಜಾ ಹೆಗ್ಡೆ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅದೇ ಹ್ಯಾಂಗೋವರ್‌ನಲ್ಲೇ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಪೂಜಾ ಹೆಗ್ಡೆ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿಲ್ಲ. ಒಂದರ ಹಿಂದೊಂದು ಸೋಲನ್ನು ಕಾಣುತ್ತಿವೆ. ಈ ಬೆನ್ನಲ್ಲೇ ಕೆಲವು ಸಿನಿಮಾಗಳಿಂದ ಪೂಜಾ ಹೆಗ್ಡೆ ಹೊರಬಂದಿದ್ದಾರೆ. ಹೀಗಾಗಿ ಕೆಲವು ದಿನ ಸೈಲೆಂಟ್ ಆಗಿದ್ದ ನಟಿ ದಿಢೀರನೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ.

ಪೂಜಾ ಹೆಗ್ಡೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಹಸಿರು ಬಣ್ಣ ಸ್ಕರ್ಟ್ ಧರಿಸಿ, ಟೆನ್ನಿಸ್ ಕೋರ್ಟ್‌ನಲ್ಲಿ ಟೆನ್ನಿಸ್ ರಾಕೆಟ್ ಹಿಡಿದು ನಿಂತಿರುವ ಫೋಟೊಗಳನ್ನು ಶೇರ್ ಮಾಡಿದ್ದರು. ಇದೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಟೆನ್ನಿಸ್ ಕೋರ್ಟ್‌ನಲ್ಲಿ ನಿಂತಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಷ್ಟೇ ಅಲ್ಲ. ಆ ಫೋಟೊಗಳಿಗೆ ಕ್ಯಾಪ್ಷನ್ ಕೂಡ ಕೊಟ್ಟಿದ್ದು, "ಈ ಫೋಟೊಗಳು ರೋಜರ್ ಫೆಡರರ್‌ಗಾಗಿ" ಎಂದು ಪೂಜಾ ಹೆಗ್ಡೆ ಬರೆದುಕೊಂಡಿದ್ದಾರೆ. ಇತ್ತ ಅಭಿಮಾನಿಗಳು ಹಸಿರು ಬಣ್ಣದ ಸ್ಕರ್ಟ್ ತೊಟ್ಟು, ಕಪ್ಪು ಬಣ್ಣದ ಸನ್‌ಗ್ಲಾಸ್ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿರೋ ನಟಿಯನ್ನು ಕಂಡು ಫಿದಾ ಆಗಿದ್ದಾರೆ. ಪೂಜಾ ಹೆಗ್ಡೆ ಡ್ರೆಸ್ಸಿಂಗ್ ಸೆನ್ಸ್‌ಗೆ ಫಿದಾ ಆಗಿದ್ದಾರೆ.

ಪೂಜಾ ಹೆಗ್ಡೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಇದೇ ಅಕ್ಟೋಬರ್ 13ರಂದು ಪೂಜಾ ಹೆಗ್ಡೆ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹೀಗಾಗಿ ಮಾಲ್ಡೀವ್ಸ್ ಪ್ರವಾಸದಲ್ಲಿ ಇದ್ದಾರೆ. ಹೀಗಾಗಿ ಅಲ್ಲಿನ ಸುಂದರ ತಾಣಗಳಲ್ಲಿ ಪೂಜಾ ಹೆಗ್ಡೆ ಬಿಂದಾಸ್ ಆಗಿ ಪೋಸ್ ಕೊಟ್ಟಿದ್ದಾರೆ. ಗುಲಾಬಿ ಬಣ್ಣ ಮೊನೊಕಿನಿಯಲ್ಲಿ ಪೋಸ್ ಕೊಟ್ಟಿರೋ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಪೂಜಾ ಹೆಗ್ಡೆ ಸಿನಿಮಾ ವಿಚಾರಕ್ಕೆ ಬರೋದಾದರೆ, ಈಗಾಗಲೇ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ಕೊಟ್ಟಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ಬ್ಯೂಟಿ, ಗ್ಲಾಮರ್ ಹಾಗೂ ಆಕ್ಟಿಂಗ್‌ನಿಂದ ಜನಪ್ರಿಯರಾಗಿರುವ ನಟಿ ಸದ್ಯ ಯಾವುದೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ.
ಈ ವರ್ಷ ಸಲ್ಮಾನ್ ಖಾನ್ ಜೊತೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಇದರ ಹಿಂದೆನೇ ಮಹೇಶ್ ಬಾಬು ನಟಿಸುತ್ತಿರುವ 'ಗುಂಟೂರು ಖಾರಂ' ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತು. ಆದರೆ, ಈ ಸಿನಿಮಾದಿಂದಲೂ ಹೊರಬಂದಿದ್ದಾರೆ.
ಸದ್ಯ ಪೂಜಾ ಹೆಗ್ಡೆ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದೇ ಇದ್ದರೂ, ಈಗಾಗಲೇ 'ಹೌಸ್‌ಫುಲ್ 5' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 2024ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್, ಜಾನ್ ಅಬ್ರಾಹಂ, ಅಭಿಷೇಕ್ ಬಚ್ಚನ್, ಬಾಬಿ ಡಿಯೋಲ್, ಕೃತಿ ಸನೆನ್, ಕೃತಿ ಖರಬಂಧ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











