'ನನ್ನ ಆಟದಲ್ಲಿ ನನ್ನನ್ನೇ ಸೋಲಿಸಿದ್ದೀರಿ': ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಗೆ ಪೂನಂ ಪಾಂಡೆ ಕಮೆಂಟ್!

ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ನೋಡಿ ಅದೆಷ್ಟು ಮಂದಿ ಹುಡುಗರು ಉರ್ಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ರಣ್‌ವೀರ್ ಸಿಂಗ್ ಈ ಸಾಹಸದ ಬಗ್ಗೆ ಒಂದಿಷ್ಟು ಮಂದಿ ಪರ-ವಿರೋಧವಾಗಿ ಅಂತೂ ಮಾತಾಡುತ್ತಲೇ ಇದ್ದಾರೆ.

ಬೆತ್ತಲೆ ಫೋಟೊಶೂಟ್ ಮಾಡಿಸುವುದು ಬಾಲಿವುಡ್ ಮಂದಿಗೆ ಹೊಸದೇನೂ ಅಲ್ಲ. ಆಗಾಗಾ ಯಾರಾದರೂ ಇಂತಹದ್ದೊಂದು ದುಸ್ಸಾಹಸಕ್ಕೆ ಕೈ ಹಾಕುತ್ತಲೇ ಇದ್ದಾರೆ. ಈಗ ರಣ್‌ವೀರ್ ಸಿಂಗ್ ಮ್ಯಾಗಜೀನ್ ಒಂದಕ್ಕೆ ಬೆತ್ತಲೆ ಪೋಸ್ ನೀಡಿ ಬೆಚ್ಚಿಬೀಳಿಸಿದ್ದಾರೆ.

ಇತ್ತ ಬಾಲಿವುಡ್‌ನಲ್ಲಿ ತಮ್ಮ ಬೋಲ್ಡ್ ಲುಕ್‌ನಿಂದ ಜನಪ್ರಿಯರಾಗಿರುವ ನಟಿಯರು ಇದ್ದಾರೆ. ಅವರು ಒಬ್ಬೊಬ್ಬರಾಗಿಯೇ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಸದ್ಯ ಬಾಲಿವುಡ್‌ನ ಬೋಲ್ಡ್ ನಟಿ ಪೂನಂ ಪಾಂಡೆ, ರಣ್‌ವೀರ್ ಸಿಂಗ್ ಬೋಲ್ಡ್ ಫೋಟೊಗಳನ್ನು ನೋಡಿ ಕಮೆಂಟ್ ಮಾಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

'ಗಲ್ಲಿ ಬಾಯ್' ಫೋಟೊಗೆ ಪೂನಂ ಪಾಂಡೆ ಕಮೆಂಟ್

'ಗಲ್ಲಿ ಬಾಯ್' ಫೋಟೊಗೆ ಪೂನಂ ಪಾಂಡೆ ಕಮೆಂಟ್

ಸೋಶಿಯಲ್ ಮೀಡಿಯಾಗಳಲ್ಲಿ ಪೂನಂ ಪಾಂಡೆ ತನ್ನ ಬೋಲ್ಡ್ ಲುಕ್‌ಗಳಿಗೆ ಜನಪ್ರಿಯ. ಇದೇ ನಟಿಯೀಗ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಬೆತ್ತಲೆಯಾಗಿ ಫೋಟೊಶೂಟ್ ಮಾಡಿಸಿದ ಫೋಟೊಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ರಣ್‌ವೀರ್ ಸಿಂಗ್ ಬಗ್ಗೆ ಪೂನಂ ಪಾಂಡೆ ಕಮೆಂಟ್‌ ಕೂಡ ಮಾಡಿದ್ದಾರೆ. ಬಾಲಿವುಡ್ ನಟಿಯ ಈ ಬೋಲ್ಡ್ ಕಮೆಂಟ್‌ಗೆ ನೆಟ್ಟಿಗರು ಕೂಡ ಕಮೆಂಟ್ ಮಾಡುತ್ತಿದ್ದು, ವೈರಲ್ ಮಾಡಿದ್ದಾರೆ.

ಪೂನಂ ಪಾಂಡೆ ಹೇಳಿದ್ದೇನು?

ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಗಳಿಗೆ ಪೂನಂ ಪಾಂಡೆ ಕಮೆಂಟ್ ಮಾಡಿದ್ದು ಚರ್ಚೆಯಾಗುತ್ತಿದೆ. ಎರಡು ಫೋಟೊಗಳನ್ನು ಶೇರ್ ಮಾಡಿ " ನೀವು ನನ್ನ ಆಟದಲ್ಲಿ ನನ್ನನ್ನೇ ಸೋಲಿಸಿದ್ದೀರಿ" ಎಂದು ಶಾರ್ಟ್ ಅಂಡ್ ಸ್ವೀಟ್ ಆಗಿ ಕಮೆಂಟ್ ಮಾಡಿದ್ದಾರೆ. ರಣ್‌ವೀರ್ ಸಿಂಗ್ ಪೆಪರ್ ಮ್ಯಾಗಜೀನ್‌ಗಾಗಿ ಈ ರೀತಿ ಬೆತ್ತಲೆ ಪೋಸ್ ನೀಡಿದ್ದರು. ಈ ಪೋಟೊಗಳನ್ನು ನೋಡಿ ಕೇವಲ ಪೂನಂ ಪಾಂಡೆ ಅಷ್ಟೇ ಅಲ್ಲ, ಬಾಲಿವುಡ್ ತಾರೆಯರು ಕೂಡ ಕಮೆಂಟ್ ಮಾಡಿದ್ದರು. ಅದರಲ್ಲಿ ಪೂನಂ ಪಾಂಡೆ ಕಮೆಂಟ್ ನೆಟ್ಟಿಗರಿಗೆ ಸಖತ್ ಥ್ರಿಲ್ ಕೊಟ್ಟಿದೆ.

ಪೂನಂ ಪಾಂಡೆಗೆ ನೆಟ್ಟಿಗರ ಕಮೆಂಟ್ ಏನು?

ಪೂನಂ ಪಾಂಡೆಗೆ ನೆಟ್ಟಿಗರ ಕಮೆಂಟ್ ಏನು?

ಪೂನಂ ಪಾಂಡೆ ಮಾಡಿದ ಟ್ವೀಟ್‌ಗೆ ನೆಟ್ಟಿಗರು ಕೂಡ ಮಸ್ತ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಪೂನಂ ಪಾಂಡೆಗೆ ಕಮೆಂಟ್ ಮಾಡಿದರೆ, ಮತ್ತೆ ಕೆಲವರು ರಣ್‌ವೀರ್ ಸಿಂಗ್‌ಗೆ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರಂತೂ " ರಣ್‌ವೀರ್‌ ಸಿಂಗ್‌ಗಿಂತ ನಿಮ್ಮ ಪೋಸ್ ಚೆನ್ನಾಗಿದೆ" ಎಂದು ಪೂನಂ ಪಾಂಡೆ ಪೋಟೊ ಹಾಕಿದ್ದರೆ. ಇನ್ನೊಬ್ಬರು "ಇದು ನೂರಾ ಫತೇಹಿ ಪೋಸ್ ಅಂತ ಅನಿಸುತ್ತಿದೆ." ಎಂದು ಬಾಲಿವುಡ್ ನಟಿಯ ಕಾಲೆಳೆದಿದ್ದಾರೆ.

ರಣ್‌ವೀರ್ ವಿಭಿನ್ನ ಕಾಸ್ಟ್ಯೂಮ್

ರಣ್‌ವೀರ್ ವಿಭಿನ್ನ ಕಾಸ್ಟ್ಯೂಮ್

ರಣ್‌ವೀರ್ ಸಿಂಗ್ ಬಾಲಿವುಡ್‌ನ ವಿಶಿಷ್ಟ ನಟ. ತನ್ನ ಮನಸ್ಸಿಗೆ ಇಷ್ಟ ಆದಂತಹ ಕಾಸ್ಟ್ಯೂಮ್‌ಗಳಲ್ಲಿ ರಣ್‌ವೀರ್ ಸಿಂಗ್ ಕಾಣಿಸಿಕೊಳ್ಳುತ್ತಾರೆ. ಆಗಾಗ ಇವರು ತಮ್ಮ ಕಾಸ್ಟ್ಯೂಮ್ ಸೆನ್ಸ್‌ನಿಂದಲೇ ಚರ್ಚೆಗೆ ಬಂದಿದ್ದೂ ಇದೆ. ಆದ್ರೀಗ ಬೆತ್ತಲೆಯಾಗಿ ಪೋಸ್ ಕೊಟ್ಟು ಎಚ್ಚರ ಅಚ್ಚರಿಗೆ ಕಾರಣರಾಗಿದ್ದಾರೆ. ಸದ್ಯ ರಣ್‌ವೀರ್ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಕೆಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Poonam Pandey Says Ranveer Singh Beat Her At Her Own Game About His Naked Photoshoots, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X