ವೇದಿಕೆ ಮೇಲೆ ಬೆವರುತ್ತಿದ್ದ ಪ್ರಭಾಸ್‌ಗೆ ದುಪ್ಪಟ್ಟ ಕೊಟ್ಟ ಕೃತಿ ಸನನ್: ಫ್ಯಾನ್ಸ್‌ಗೆ ಅನುಮಾನ!

ಪ್ರಭಾಸ್ ಮತ್ತು ಕೃತಿ ಸನಸ್ ಇತ್ತೀಚೆಗೆ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದರು. 'ಆದಿಪುರುಷ್' ಸಿನಿಮಾದ ಟೀಸರ್ ಲಾಂಚ್‌ನಲ್ಲಿ ಭಾಗಿಯಾಗಿದ್ದರು. ಓಂ ಪ್ರಕಾಶ್ ರಾವ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಈಗಾಗಲೇ ಟೀಸರ್ ರಿಲೀಸ್ ಮಾಡಲಾಗಿದೆ.

'ಆದಿಪುರುಷ್' ಟೀಸರ್ ಸಿನಿಪ್ರಿಯರಿಗೆ ಇಷ್ಟ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಟೀಸರ್ ನೆಟ್ಟಿಗರ ಕಣ್ಣುಗಳು ಕೆಂಪಗೆ ಮಾಡಿವೆ. ಈ ಮಧ್ಯೆ ಅಭಿಮಾನಿಗಳಿಗೆ ಪಾಸಿಟಿವ್ ಸುದ್ಡಿಯೊಂದು ಸಿಕ್ಕಿದೆ. ಪ್ರಭಾಸ್ ಹಾಗೂ ಕೃತಿ ಸನನ್ ಇಬ್ಬರ ಕೆಮಿಸ್ಟ್ರಿ ಬಗ್ಗೆ ಟಾಕ್ ಶುರುವಾಗಿದೆ.

'ಆದಿಪುರುಷ್' ಟೀಸರ್ ರಿಲೀಸ್‌ಗೂ ಮುನ್ನ ಪ್ರಭಾಸ್ ಹಾಗೂ ಕೃತಿ ಸನನ್ ಡೇಟಿಂಗ್ ಮಾಡುತ್ತಿರೋ ಬಗ್ಗೆ ಸುದ್ದಿ ಹರಿದಾಡಿತ್ತು. ಅದಕ್ಕೆ ಅಭಿಮಾನಿಗಳು ಅಯೋಧ್ಯೆಯಲ್ಲಿ ಉತ್ತರ ಕಂಡುಕೊಂಡಿದ್ದಾರೆ. ಅಷ್ಟಕ್ಕೂ ಅಯೋಧ್ಯೆಯಲ್ಲಿ ಆಗಿದ್ದೇನು?

 ಆಫ್‌ ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಥ್ರಿಲ್

ಆಫ್‌ ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಥ್ರಿಲ್

'ಆದಿಪುರುಷ್' ಟೀಸರ್‌ನಲ್ಲಿ ಪ್ರಭಾಸ್ ಹಾಗೂ ಕೃತಿ ಸನನ್ ಇಬ್ಬರೂ ಕೆಮಿಸ್ಟ್ರಿ ನೋಡಿ ಕಳೆದ ಹೋಗಿದ್ದವರಿಗೆ ಫ್ಯಾನ್ಸ್ ಆಫ್ ಸ್ಕ್ರೀನ್ ಕೆಮಿಸ್ಟ್ರಿ ತೋರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಜೊತೆಗಿರುವ ವಿಡಿಯೋಗಳನ್ನು ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಟೀಸರ್ ಲಾಂಚ್ ವೇಳೆ ವೇದಿಕೆ ಮೇಲೆ ಪ್ರಭಾಸ್ ಹಾಗೂ ಕೃತಿ ಸನನ್ ಜೋಡಿ ಕ್ಲೋಸ್‌ ಆಗಿರುವುದನ್ನು ನೋಡಿ ಫ್ಯಾನ್ಸ್ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

 ರೂಮರ್‌ಗೆ ಸಾಕ್ಷಿ ಕೊಟ್ಟ ಫ್ಯಾನ್ಸ್

ರೂಮರ್‌ಗೆ ಸಾಕ್ಷಿ ಕೊಟ್ಟ ಫ್ಯಾನ್ಸ್

ಕೆಲವು ದಿನಗ ಹಿಂದಷ್ಟೇ ಪ್ರಭಾಸ್ ಹಾಗೂ ಕೃತಿ ಸನನ್ ಡೇಟಿಂಗ್ ಬಗ್ಗೆ ಸುದ್ದಿ ಹಬ್ಬಿತ್ತು. ಇಬ್ಬರೂ ಲವ್‌ನಲ್ಲಿ ಬಿದ್ದಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ಈ ಸುದ್ದಿ ಹಬ್ಬಿದ ಬಳಿಕ ಇಬ್ಬರೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ. ಆದರೆ, ಆಯೋಧ್ಯೆಯಲ್ಲಿ 'ಆದಿಪುರುಷ್' ಟೀಸರ್ ಲಾಂಚ್ ವೇಳೆ ಪ್ರಭಾಸ್ ಹಾಗೂ ಕೃತಿ ಜೋಡಿಯ ಕೆಮಿಸ್ಟ್ರಿಗೆ ಫ್ಯಾನ್ಸ್ ಸಾಕ್ಷಿ ಕೊಟ್ಟಿದ್ದಾರೆ. ಇಬ್ಬರೂ ಕೈ ಕೈ ಹಿಡಿದುಕೊಂಡ ಓಡಾಡಿದ ವಿಡಿಯೋಗಳನ್ನೇ ಸಾಕ್ಷಿ ನೀಡಿದ್ದಾರೆ.

 ಪ್ರಭಾಸ್‌ಗೆ ದುಪ್ಪಟ್ಟ ಕೊಟ್ಟ ಕೃತಿ

ಪ್ರಭಾಸ್‌ಗೆ ದುಪ್ಪಟ್ಟ ಕೊಟ್ಟ ಕೃತಿ

ಅಸಲಿಗೆ ಅಭಿಮಾನಿಗಳ ಅನುಮಾನ ಮತ್ತಷ್ಟು ಹೆಚ್ಚಾಗುವುದಕ್ಕೆ ಕಾರಣವಿದೆ. ಟೀಸರ್ ಲಾಂಚ್ ಮಾಡಲು ವೇದಿಕೆ ಮೇಲಿದ್ದ ಪ್ರಭಾಸ್‌ ಬೆವರುತ್ತಿದ್ದರು. ಅದನ್ನು ನೋಡಿದ ಕೃತಿ ಸನನ್ ಬೇವರು ಓರೆಸಿಕೊಳ್ಳಲು ದುಪ್ಪಟ್ಟ ಕೊಟ್ಟಿದ್ದರು. ಇದು ತಕ್ಷಣಕ್ಕೆ ನೆಟ್ಟಿಗರ ಗಮನ ಸೆಳೆದಿದೆ. ಇಂತಹದ್ದೇ ಒಂದು ವಿಡಿಯೋಗಳನ್ನು ಅಭಿಮಾನಿಗಳು ಹುಡುಕಿ ತೆಗೆದಿದ್ದಾರೆ. ಈ ಜೋಡಿ ಕೆಮಿಸ್ಟ್ರಿ ನೀಡಿ ಡೇಟಿಂಗ್ ಕನ್ಫರ್ಮ್ ಅಂತಿದ್ದಾರೆ.

 'ಆದಿಪುರುಷ್' ಕಥೆಯೇನು?

'ಆದಿಪುರುಷ್' ಕಥೆಯೇನು?

'ಆದಿಪುರುಷ್' ಕಥೆ ಸಿನಿಮಾ ವಾಲ್ಮೀಕಿ 'ರಾಮಾಯಣ'ವನ್ನು ಆಧರಿಸಿದೆ. ಸುಮಾರು 7 ಸಾವಿರ ವರ್ಷಗಳ ಹಿಂದೆ ನಡೆದ ಕಥೆಯನ್ನೇ ತೆರೆಮೇಲೆ ತರಲಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್‌ರನ್ನು ರಾಮ್ ಎನ್ನುವುದಿಲ್ಲ. ಬದಲಾಗಿ ರಾಘವ (ಇನ್ನೊಂದು ಹೆಸರು) ಎಂದು ಹೆಸರಿಡಲಾಗಿದೆ. ಕೃತಿ ಸನನ್‌ರನ್ನು ಜಾನಕಿ ಎಂದು ಕರೆಯಲಾಗಿದೆ. ಸೈಫ್ ಅಲಿಖಾನ್‌ರನ್ನು ರಾಘವ ಎಂದು ಕರೆಯಲಾಗಿದೆ. ಅಂದ್ಹಾಗೆ ಇಲ್ಲಿ 'ಅದಿಪುರುಷ್' ಅಂದರೆ ಫಸ್ಟ್ ಮ್ಯಾನ್ ಎಂದು ಕರೆಯುತ್ತಾರೆ.

More from Filmibeat

English summary
Prabhas Kriti Sanon Together At Adipurush Teaser Launch Fan Guessing Dating Rumours, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X