ಮಗನಿಗೆ ಪೊಲೀಸ್ ಖಾಕಿ ತೊಡಿಸಿ ಸಂಭ್ರಮಿಸಿದ ಪ್ರಕಾಶ್ ರೈ: ಕಾರಣ ಇದು

ನಟ ಪ್ರಕಾಶ್ ರೈ ಲಾಕ್ ಡೌನ್ ಸಮಯವನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ ಕಳೆಯುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿ ಶುರುವಾಗಿ ಲಾಕ್‌ಡೌನ್ ಆರಂಭವಾದ ದಿನಗಳಲ್ಲಿ ತಮ್ಮ ಸುತ್ತಲಿನ ಪ್ರದೇಶದ ಸಾವಿರಾರು ಮಂದಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.

ಫಾರ್ಮ್ ಹೌಸ್‌ನಲ್ಲಿ ಮಕ್ಕಳೊಂದಿಗೆ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಫೋಟೊಗಳನ್ನು ಪ್ರಕಾಶ್ ರೈ ಹಂಚಿಕೊಳ್ಳುತ್ತಿರುತ್ತಾರೆ. ಈ ಮಧ್ಯೆ ಮಗನಿಗೆ ಪೊಲೀಸ್ ಸಮವಸ್ತ್ರ ತೊಡಿಸಿ ಸಂಭ್ರಮಿಸಿದ್ದಾರೆ. ಮಗ ವೇದಾಂತ್ ಪೊಲೀಸ್ ಕ್ಯಾಸ್ಟ್ಯೂಮ್‌ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದು, ವಿಶೇಷ ಆಕ್ಷನ್ ಪೋಸ್ ನೀಡಿದ್ದಾನೆ. ಪ್ರಕಾಶ್ ರೈ ಈ ರೀತಿ ಮಗನೊಂದಿಗೆ ಪೋಸ್ ನೀಡಲು ಕಾರಣ 'ಸಿಂಗಂ' ಚಿತ್ರ. ಮುಂದೆ ಓದಿ.

9 ವರ್ಷದ ಸಂಭ್ರಮ

9 ವರ್ಷದ ಸಂಭ್ರಮ

ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ದೂಳೆಬ್ಬಿಸಿದ್ದ 'ಸಿಂಗಂ' ಚಿತ್ರ ಬಿಡುಗಡೆಯಾಗಿ ಜುಲೈ 22ಕ್ಕೆ ಒಂಬತ್ತು ವರ್ಷ ತುಂಬಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಅಜಯ್ ದೇವಗನ್ 'ಸಿಂಗಂ' ಆಗಿ ಕಾಣಿಸಿಕೊಂಡಿದ್ದರು. ಈ ಸಂಭ್ರಮವನ್ನು ಚಿತ್ರತಂಡ ಆಚರಿಸುತ್ತಿದೆ.

ಕೃತಜ್ಞತೆ ಸಲ್ಲಿಸಿದ ಪ್ರಕಾಶ್ ರೈ

ಕೃತಜ್ಞತೆ ಸಲ್ಲಿಸಿದ ಪ್ರಕಾಶ್ ರೈ

'ಸಿಂಗಂ' ಚಿತ್ರದಲ್ಲಿ ಪ್ರಕಾಶ್ ರೈ, ಜಯಕಾಂತ್ ಶಿಖ್ರೆ ಎಂಬ ಖಳನಾಯಕನ ಪಾತ್ರದಲ್ಲಿ ನಟಿಸಿದ್ದರು. ಸ್ಮರಣೀಯ ಅನುಭವ ನೀಡಿದ್ದಕ್ಕಾಗಿ ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಮತ್ತು ಪ್ರೇಕ್ಷಕರಿಗೆ ಪ್ರಕಾಶ್ ರೈ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗಾಗಿ ಮಗನಿಗೆ ಖಾಕಿ ತೊಡಿಸಿ ಖುಷಿ ಹಂಚಿಕೊಂಡಿದ್ದಾರೆ.

ಮೂಲ ಚಿತ್ರದಲ್ಲೂ ವಿಲನ್

ಮೂಲ ಚಿತ್ರದಲ್ಲೂ ವಿಲನ್

ತಮಿಳಿನ ಸಿಂಗಂ ಚಿತ್ರದ ಹಿಂದಿ ರೀಮೇಕ್ 2011ರ ಜುಲೈ 22ರಂದು ಬಿಡುಗಡೆಯಾಗಿತ್ತು. ಮೂಲ ಚಿತ್ರ 'ಸಿಂಗಂ'ನಲ್ಲಿ ಸೂರ್ಯ ಮತ್ತು ಅನುಷ್ಕಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. 2010ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿಯೂ ಪ್ರಕಾಶ್ ರೈ ವಿಲನ್ ಆಗಿದ್ದರು.

ಮುಂಚೂಣಿ ವಾರಿಯರ್‌ಗಳು

ಮುಂಚೂಣಿ ವಾರಿಯರ್‌ಗಳು

ಈ ಚಿತ್ರದ ಯಶಸ್ಸಿನ ಬಳಿಕ ರೋಹಿತ್ ಶೆಟ್ಟಿ 2014ರಲ್ಲಿ 'ಸಿಂಗಂ ರಿಟರ್ನ್ಸ್' ಚಿತ್ರವನ್ನೂ ಮಾಡಿದ್ದರು. ನಟ ಅಜಯ್ ದೇವಗನ್ ಕೂಡ 'ಸಿಂಗಂ'ಗೆ 9ರ ಪ್ರಾಯ ತುಂಬಿದ ಸಂತಸವನ್ನು ಹೇಳಿಕೊಂಡಿದ್ದಾರೆ. ಇಂದಿನ ಮುಂಚೂಣಿ ವಾರಿಯರ್‌ಗಳಾದ ಖಾಕಿ ಪಡೆಯ ಉತ್ಸಾಹ ಮತ್ತು ಧೈರ್ಯಕ್ಕೆ ಈ ಚಿತ್ರ ವಂದನೆ ಸಲ್ಲಿಸಿತ್ತು ಎಂದು ಅಜಯ್ ದೇವಗನ್ ಹೇಳಿಕೊಂಡಿದ್ದಾರೆ.

More from Filmibeat

English summary
Prakash Raj posed with his son in Khaki to celebrate the 9 years of Rohit Shetty directed Singham.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X