"ನಾನಿನ್ನೂ ಕ್ಷಮಿಸಿಲ್ಲ.. ನನ್ನ ಸಂಸಾರ ಹಾಳಾಗಲು ಪ್ರೀತಿ ಜಿಂಟಾ ಕಾರಣ": ಮತ್ತೆ ಗುಡುಗಿದ ಗಾಯಕಿ!

ಬಾಲಿವುಡ್ ನಟಿ ಪ್ರೀತಿ ಜಿಂಟಾ ಬಗ್ಗೆ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು. ತನ್ನ ಸಂಸಾರ ಹಾಳಾಗುವುದಕ್ಕೆ ಈ ನಟಿಯೇ ಕಾರಣವೆಂದು ಹೇಳಿದ್ದರು. ಆಗ ಇಬ್ಬರ ನಡುವೆ ಹೇಳಿಕೆ ಪ್ರತಿಹೇಳಿಕೆ ಕೊಡುವುದು ನಡೆದಿತ್ತು. ಗಾಯಕಿ ವಿರುದ್ಧ ಪ್ರೀತಿ ಜಿಂಟಾ ಕೂಡ ಕಿಡಿಕಾರಿದ್ದರು.

ಅಷ್ಟಕ್ಕೂ 90 ದಶಕದ ಸಿನಿಮಾಗಳನ್ನು, ಹಾಡುಗಳನ್ನು ಇಷ್ಟು ಪಡುವವರಿಗೆ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಚೆನ್ನಾಗಿಯೇ ಪರಿಚಯವಿರುತ್ತೆ. ಶಾರುಖ್ ಖಾನ್ ನಟಿಸಿದ 'ಕಭಿ ಹಾ ಕಭಿ ನಾ' ಅನ್ನೋ ಸಿನಿಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದೇ ನಟಿ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಶೇಖರ್ ಕಪೂರ್‌ರನ್ನು ವಿವಾಹವಾಗಿದ್ದರು.

Preity Zinta- Suchitra Krishnamoorthi-Shekhar Kapur

ಇವರಿಬ್ಬರ ವಿವಾಹ ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಇಬ್ಬರ ನಡುವೆ ಸುಮಾರು 30 ವರ್ಷಗಳ ವಯಸ್ಸಿನ ಅಂತರವಿತ್ತು. ಆದರೆ, ಮದುವೆಯಾದ ಕೇವಲ 9 ವರ್ಷಗಳಲ್ಲೇ ಇಬ್ಬರೂ ವಿಚ್ಛೇದನ ಪಡೆದರು. ಇದಕ್ಕೆ ಕಾರಣ ನಟಿ ಪ್ರೀತಿ ಜಿಂಟಾ ಅಂತ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಆರೋಪ ಮಾಡಿದ್ದರು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪ್ರೀತಿ ಜಿಂಟಾಳನ್ನು ನಾನೆಂದು ಕ್ಷಮಿಸುವುದಿಲ್ಲ ಎಂದು ಮತ್ತೆ ಗುಡುಗಿದ್ದಾರೆ.

"ಶೇಖರ್ ಕಪೂರ್ ನನಗೆ ಮೋಸ ಮಾಡಿದ್ರು"

ಸುಚಿತ್ರಾ ಕೃಷ್ಣಮೂರ್ತಿ ಆಗ ತಾನೇ ಶಾರುಖ್ ಖಾನ್ ಜೊತೆ ನಟಿಸಿ ಲೈಮ್‌ ಲೈಟ್‌ಗೆ ಬಂದಿದ್ದರು. ಬಾಲಿವುಡ್‌ನಲ್ಲಿ ಈಕೆ ದಿಢೀರನೇ ಫೇಮಸ್ ಆಗಿಬಿಟ್ಟರು. ಆದರೆ, ಆಗಿನ್ನೂ ಈಕೆಯ ವಯಸ್ಸು 19 ವರ್ಷ. ಹೆಸರು ಮಾಡಿದ್ದೇನೋ ಸರಿ ಆದರೆ, ಈಕೆಗೊಂದು ಗೀಳು ಇತ್ತು. ಪಾಕಿಸ್ತಾನದ ಅಂದಿನ ಸ್ಟಾರ್ ಕ್ರಿಕೆಟರ್ ಇಮ್ರಾನ್ ಖಾನ್, ಇಲ್ಲವೇ ಫಿಲ್ಮ್ ಮೇಕರ್ ಶೇಖರ್ ಕಪೂರ್ ಅನ್ನು ಮದುವೆ ಆಗಬೇಕು ಎಂದಿತ್ತು.

Preity Zinta- Suchitra Krishnamoorthi-Shekhar Kapur

ತನ್ನ ಆಸೆಯಂತೆ ಶೇಖರ್ ಕಪೂರ್ ಭೇಟಿ ಮಾಡಿ, ಮೂರು ವರ್ಷಗಳ ಕಾಲ ಕಾಡಿಬೇಡಿ ಮದುವೆ ಆಗಿದ್ದರು. 1997ರಲ್ಲಿ ತನಗಿಂತ ವಯಸ್ಸಿನಲ್ಲಿ 30 ವರ್ಷ ದೊಡ್ಡವರಾಗಿದ್ದ ಶೇಖರ್ ಕಪೂರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಈ ಮದುವೆ 2007ರಲ್ಲಿ ಕೊನೆ ಆಯ್ತು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸುಚಿತ್ರಾ ಕೃಷ್ಣಮೂರ್ತಿ "ಮಾಜಿ ಪತಿ ತನಗೆ ಮೋಸ ಮಾಡಿದ. ಸಂಸಾರ ಮುರಿದು ಬೀಳುವುದಕ್ಕೆ ಗೌರವ ಇಲ್ಲದ್ದೇ ಇರುವುದೇ ಕಾರಣ" ಎಂದಿದ್ದರು.

ಪ್ರೀತಿ ಜಿಂಟಾಗಳನ್ನು ಇನ್ನೂ ಕ್ಷಮಿಸಿಲ್ಲ

ಇದೇ ಸಂದರ್ಶನಲ್ಲಿ ಗಾಯಕಿ ಹಾಗೂ ನಟಿ ಸುಚಿತ್ರಾ ಕೃಷ್ಣಮೂರ್ತಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ. " ಪ್ರೀತಿ ಜಿಂಟಾಳನ್ನು ನಾನಿನ್ನೂ ಕ್ಷಮಿಸಿಲ್ಲ." ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಸುಚಿತ್ರಾ ಕೃಷ್ಣಮೂರ್ತಿ ತನ್ನ ಸಂಸಾರ ಮುರಿದು ಬೀಳುವುದಕ್ಕೆ ಬಾಲಿವುಡ್ ನಟಿ ಪ್ರೀತಿ ಜಿಂಟಾನೇ ಕಾರಣವೆಂದು ಹೇಳಿದ್ದರು.

ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಈ ಆರೋಪದ ವಿರುದ್ಧ ತಿರುಗಿಬಿದ್ದಿದ್ದರು. ಸುಚಿತ್ರಾ ಕೃಷ್ಣಮೂರ್ತಿ ವಿರುದ್ಧ ಕಿಡಿಕಾರಿದ್ದರು. ಆ ಬಳಿಕ ಇಬ್ಬರ ನಡುವೆ ವಾದ ವಿವಾದಗಳು ಕೂಡ ನಡೆದಿದ್ದವು. ಈ ಮತ್ತೆ ನ್ಯೂಸ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರೀತಿ ಜಿಂಟಾ ಹೆಸರು ತೆಗೆದಿದ್ದಾರೆ.

"ನಾನು ನಂಬರ್ 1 ನಟಿ ಎಂದಿದ್ದ ಪ್ರೀತಿ ಜಿಂಟಾ"

ಸುಚಿತ್ರಾ ಕೃಷ್ಣಮೂರ್ತಿ ಬಾಲಿವುಡ್ ನಟಿ ಪ್ರೀತಿ ವಿರುದ್ಧ ಆರೋಪ ಮಾಡುತ್ತಿದ್ದಂತೆ "ನಾನು ಬಾಲಿವುಡ್‌ನ ನಂ 1 ನಟಿ. ನೀನೂ ಸರಿಯಾಗಿ ಕೆಲಸ ಕೂಡ ಮಾಡಿಲ್ಲ. ನೀನು ಗೃಹಿಣಿಯಷ್ಟೇ. ಸುಚಿತ್ರಾ ನೀನು ನನ್ನ ಬಗ್ಗೆ ಹೀಗೆಲ್ಲ ಮಾತಾಡಬೇಡ. ನೀನು ಮಾನಸಿಕ ತಜ್ಞರನ್ನು ಭೇಟಿಯಾಗುವ ಅವಶ್ಯಕತೆಯಿದೆ. ನಿನ್ನ ಮನಸ್ಸು ಸರಿಯಾದ ಜಾಗದಲ್ಲಿ ಇಲ್ಲ" ಎಂದು ಪ್ರೀತಿ ಜಿಂಟಾ ಕಿಡಿಕಾರಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಸುಚಿತ್ರಾ " ಈ ವಿಶ್ವದಲ್ಲಿ ಎಲ್ಲರೂ ಆರಾಮಾಗಿ ಮಾತಾಡಬಹುದು. ಆಕೆ ಏನು ಅನಿಸುತ್ತೋ ಅದನ್ನು ಮಾತಾಡಲಿ. ನಾನು ಗೃಹಿಣಿಯಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ" ಎಂದು ತಿರುಗೇಟು ಕೊಟ್ಟಿದ್ದರು.

More from Filmibeat

English summary
Preity Zinta is the reason for Suchitra Krishnamoorthi filmmaker Shekhar Kapur divorce, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X