ಅಮೀರ್ ಖಾನ್‌ ಜತೆ ಸೀಕ್ರೇಟ್ ಮದುವೆಯಾಗಿದ್ದರೇ ಗುಳಿಕೆನ್ನೆ ಹುಡುಗಿ?: ಪ್ರೀತಿ ಜಿಂಟಾ ಹೇಳಿದ ಸತ್ಯ

ಬಾಲಿವುಡ್ ಎಂದರೆ ಗಾಸಿಪ್ ಲೋಕ. ನಟ ನಟಿಯರು ತಮ್ಮ ಸಿನಿಮಾಗಳ ಅಭಿನಯಕ್ಕಿಂತಲೂ ಗಾಸಿಪ್‌ಗಳ ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ ನಟ-ನಟಿಯರ ನಡುವೆ ಅದೇನೋ ನಡೆಯುತ್ತಿದೆ ಎಂಬ ಮಾತುಗಳು ಸರ್ವೇ ಸಾಮಾನ್ಯ. ಇದರಿಂದ ಮದುವೆಯಾದ ಕಲಾವಿದರೂ ಹೊರತಲ್ಲ. ಬಾಲಿವುಡ್ ಮಂದಿಯೂ ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿ ಬ್ರೇಕಪ್‌ಗಳು, ಹೊಸ ಬೆಸುಗೆಗಳು ಕೂಡ ಅಷ್ಟೇ ಮಾಮೂಲು.

Recommended Video

Chandan Shetty and Niveditha Gowda to tie knot tomorrow | Chandan Weds Niveditha | Filmibeat Kannada

ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ವೈವಾಹಿಕ ಬದುಕು 2002ರಲ್ಲಿ ಮುರಿದುಬಿದ್ದಾಗ ಎಲ್ಲರ ಕಣ್ಣು ನೆಟ್ಟಿದ್ದೇ ಪ್ರೀತಿ ಜಿಂಟಾ ಕಡೆಗೆ. ಎಲ್ಲರೂ ಪ್ರೀತಿ ಜಿಂಟಾ ಕಡೆಗೆ ಕೈತೋರಿಸತೊಡಗಿದ್ದರು. ಅಷ್ಟೇ ಅಲ್ಲ, ಅಮೀರ್ ಮತ್ತು ಪ್ರೀತಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

ಅಮೀರ್ 'ರಹಸ್ಯ ಮದುವೆ' ಸುದ್ದಿ

ಅಮೀರ್ 'ರಹಸ್ಯ ಮದುವೆ' ಸುದ್ದಿ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರೀತಿ ಜಿಂಟಾ ತಮ್ಮ 'ರಹಸ್ಯ ಮದುವೆ' ಬಗ್ಗೆ ಹರಿದಾಡಿದ ಗಾಳಿಮಾತುಗಳ ಕುರಿತು ಮಾತನಾಡಿದ್ದಾರೆ. 'ಅಮೀರ್ ಖಾನ್ ನನ್ನ ಬಹಳ ಆತ್ಮೀಯ ಸ್ನೇಹಿತ. 'ದಿಲ್ ಚಹ್ತಾ ಹೈ' ಚಿತ್ರದಲ್ಲಿ ನಾವಿಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೆವು. ಅವರ ಖಾಸಗಿ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಂತಾದಾಗ, ಜನರಿಗೆ ಕಾಣಿಸಿದ್ದೇ ನನ್ನ ಹೆಸರು.

ಮಿಸೆಸ್ ಅಮೀರ್ ಎಂದರು

ಮಿಸೆಸ್ ಅಮೀರ್ ಎಂದರು

ಅಮೀರ್ ಜತೆಗೆ ಹೆಸರು ತಳಕು ಹಾಕಲು ಹತ್ತಿರದಲ್ಲಿ ಇದ್ದ ವ್ಯಕ್ತಿಯೆಂದರೆ ಅದು ನಾನು. ಏಕೆಂದರೆ ಅವರು ಆಗ ಕೊನೆಯ ಸಿನಿಮಾವನ್ನು ನನ್ನ ಜತೆಗೆ ಮಾಡಿದ್ದರು. ಹೀಗಾಗಿ ನಾನು ಇದ್ದಕ್ಕಿದ್ದಂತೆ ಮಿಸೆಸ್ ಅಮೀರ್ ಖಾನ್ ಆಗಿಬಿಟ್ಟೆ. ನಾನು ಹೋದ ಎಲ್ಲ ಕಡೆಯೂ 'ನನಗೆ ಮದುವೆಯಾಗಿಲ್ಲ' ಎಂದೇ ಹೇಳತೊಡಗಿದೆ ಎಂದು ಪ್ರೀತಿ ನೆನಪಿಸಿಕೊಂಡಿದ್ದಾರೆ.

ಸಂಜಯ್ ದತ್ ತಂದೆಯಂತೆ

ಸಂಜಯ್ ದತ್ ತಂದೆಯಂತೆ

ಹಾಗೆಯೇ ಸಂಜಯ್ ದತ್ ಜತೆಗೂ ಪ್ರೀತಿ ಹೆಸರು ಥಳಕು ಹಾಕಿಕೊಂಡಿತ್ತು. 'ನನಗೆ ನಿಜಕ್ಕೂ ಆಘಾತವಾಗಿತ್ತು. ಅಷ್ಟೇ ಅಲ್ಲ ಈ ಸುದ್ದಿ ವಾಕರಿಕೆ ತರಿಸಿತ್ತು. ನಾನು ಸಂಜು ಅವರನ್ನು ಪ್ರೀತಿಸುತ್ತೇನೆ. ನಾನು ಚಿಕ್ಕ ಮಗುವಾಗಿದ್ದಾಗಿನಿಂದಲೂ ಅವರನ್ನು ಪ್ರೀತಿಸುತ್ತಿದ್ದೇನೆ. ಅವರು ನನಗೆ ತಂದೆ ಇದ್ದಂತೆ' ಎಂದು ಬೇಸರದಿಂದ ಹೇಳಿದ್ದಾರೆ.

ಪುಟ್ಟ ತಂಗಿಯಂತೆ ನೋಡುತ್ತಾರೆ

ಪುಟ್ಟ ತಂಗಿಯಂತೆ ನೋಡುತ್ತಾರೆ

'ಅವರು ನನ್ನನ್ನು ಪ್ರೀತಿ ಎಂಬ ಹೆಸರಿನಿಂದಲೂ ಕರೆಯುವುದಿಲ್ಲ. ಯಾಕು ಎಂದೇ ಕರೆಯುತ್ತಾರೆ. ನನ್ನನ್ನು ಅವರ ಚಿಕ್ಕ ತಂಗಿಯಂತೆ ನೋಡಿಕೊಳ್ಳುತ್ತಾರೆ. ನನ್ನ ಸುತ್ತಲೂ ತೋಳು ಬಳಸಿ ಹೇಗಿದ್ದೀಯಾ ಎಂದು ಕೇಳುತ್ತಾರೆ. ಅಂತಹವರ ಜತೆಗೆ ನನ್ನ ಹೆಸರು ಲಿಂಕ್ ಮಾಡಿದ್ದು ಅಸಹ್ಯ ಮೂಡಿಸಿತ್ತು' ಎಂದಿದ್ದಾರೆ.

ಸಹ ನಟರು ಎಂದಿಗೂ ಗೆಳೆಯರು

ಸಹ ನಟರು ಎಂದಿಗೂ ಗೆಳೆಯರು

ಎಂದಿಗೂ ತಾವು ಸಹ ನಟರೆಡೆಗೆ ಆಕರ್ಷಿತರಾಗಿದ್ದೇ ಇಲ್ಲ ಎಂದು ಪ್ರೀತಿ ಹೇಳಿಕೊಂಡಿದ್ದಾರೆ. 'ನನ್ನ ಎಲ್ಲ ಸಹ ನಟರನ್ನೂ ಪ್ರೀತಿಸುತ್ತೇನೆ. ಅವರೆಲ್ಲರೂ ನನ್ನ ಗೆಳೆಯರು. ಅವರಲ್ಲಿ ಅರ್ಧದಷ್ಟು ಜನರು ವಿವಾಹಿತರು ಎಂಬ ಸತ್ಯವನ್ನೂ ಗೌರವಿಸುತ್ತೇನೆ ಎಂದಿರುವ ಪ್ರೀತಿ, ತಾವು ಎಂದಿಗೂ ಮನೆ ಮುರಿಯುವವರಲ್ಲ ಎಂದು ಹೇಳಿದ್ದಾರೆ.

ಒಂದೇ ದೋಣಿಯ ಪಯಣಿಗರು

ಒಂದೇ ದೋಣಿಯ ಪಯಣಿಗರು

'ನಾನು ಯಾವತ್ತೂ ನನ್ನ ಸಹ ನಟರ ಕಡೆಗೆ ಆಕರ್ಷಿತಳಾಗಲೇ ಇಲ್ಲ. ಏಕೆಂದರೆ ಹೆಚ್ಚಿನ ಸಮಯದಲ್ಲಿ ಅವರು, 'ನನ್ನ ತಲೆಗೂದಲು ಸರಿ ಕಾಣಿಸುತ್ತದೆಯೇ? ನನ್ನ ಷರ್ಟ್ ಚೆನ್ನಾಗಿ ಕಾಣಿಸುತ್ತದೆಯೇ? ಎಂದು ಕೇಳುವಂತಹವರು. ನಾನು 'ನನ್ನ ಮೂಗಿನ ಮೇಲೆ ದೊಡ್ಡ ಮೊಡವೆಯಾಗಿದ್ದು ಕಾಣಿಸುತ್ತದೆಯೇ' ಎಂದು ಕೇಳುವಂತಹವಳು. ನಮ್ಮ ನಡುವಿನ ಸಂಬಂಧ ಹೀಗಿತ್ತು. ಇದು ಒಂದೇ ದೋಣಿಯಲ್ಲಿರುವ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧದಂತೆ' ಎಂದು ತಿಳಿಸಿದ್ದಾರೆ.

More from Filmibeat

English summary
In 2002 there was a rumour on Aamir Khan and Preity Zinta sectretly got married.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X