ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಶ್ರದ್ಧಾ ಕಪೂರ್ ಹಿಂದಿಕ್ಕಿದ ಪ್ರಿಯಾಂಕಾ ಚೋಪ್ರಾ
ಭಾರತದ ಸೆಲೆಬ್ರೆಟಿಗಳು ಸಿನಿಮಾ ಬೇಕಾದರೂ ಬಿಟ್ಟು ಇರುತ್ತಾರೆ. ಆದರೆ, ಸೋಶಿಯಲ್ ಮೀಡಿಯಾವನ್ನು ಮಾತ್ರ ಬಿಡುವುದಿಲ್ಲ. ಅದರಲ್ಲೂ ಬಾಲಿವುಡ್ ಸೆಲೆಬ್ರೆಟಿಗಳು ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನಿಮಾ ಬಗ್ಗೆ, ತಮ್ಮ ಅಭಿಪ್ರಾಯಗಳು, ವಿಶ್ ಮಾಡುವುದಕ್ಕೆ ಭಾರತದ ತಾರೆಯರು ಇನ್‌ಸ್ಟಾಗ್ರಾಂ ಅನ್ನೇ ಹೆಚ್ಚಾಗಿ ಬಳಸುತ್ತಾರೆ. ಭಾರತದ ಪ್ರತಿಯೊಬ್ಬ ತಾರೆಯೂ ಕೂಡ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದಾರೆ.
ಭಾರತದ ಸೂಪರ್‌ಸ್ಟಾರ್‌ಗಳಿಗೆ ಇದೇ ಇನ್‌ಸ್ಟಾಗ್ರಾಂನಲ್ಲಿ ದೊಡ್ಡ ಅಭಿಮಾನಿ ಬಳಗವೇ ಫಾಲೋ ಮಾಡುತ್ತಿರುತ್ತಾರೆ. ತಮ್ಮ ನೆಚ್ಚಿನ ತಾರೆಯರ ಒಂದೊಂದು ನಡೆಯನ್ನೂ ಗಮನಿಸುತ್ತಿರುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುಕ್ಕೆಂದು ಆರಂಭವಾಗಿದ್ದ ಇನ್‌ಸ್ಟಾಗ್ರಾಂ ಸಲೆಬ್ರೆಟಿಗಳ ಪಾಲಿಗೆ ಈಗ ಪ್ರತಿಷ್ಟೆಯ ವಿಷಯವಾಗಿದೆ. ಹೀಗಾಗಿ ಈ ಭಾರಿ ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವ ಅಭಿಮಾನಿಗಳ ಪಟ್ಟಿಯಲ್ಲಿ ದೀಪಿಕಾ, ಕತ್ರಿನಾ, ಶ್ರದ್ಧಾ ಕಪೂರ್ ಅನ್ನು ಪ್ರಿಯಾಂಕಾ ಚೋಪ್ರಾ ಹಿಂದಿಕ್ಕಿದ್ದಾರೆ. ಯಾರಿಗೆ ಎಷ್ಟೆಷ್ಟು ಮಂದಿ ಫಾಲೋವರ್ಸ್ ಇದ್ದಾರೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಮೊದಲ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ
ಬಾಲಿವುಡ್‌ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋ ಮಾಡುವ ಮತ್ತು ಪಾಪುಲರ್ ಸೆಲೆಬ್ರೆಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಟಿಯಾದ ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್‌ರನ್ನು ಇನ್‌ಸ್ಟಾಗ್ರಾಂನಲ್ಲಿ ಹಿಂದಿಕ್ಕಿದ್ದಾರೆ. ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಂನಲ್ಲಿ ಸದಾ ಆಕ್ಟೀವ್ ಆಗಿ ಇರುತ್ತಾರೆ. ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಪತಿ ನಿಕ್ ಜೊನಸ್ ಜೊತೆಗಿನ ಫೋಟೊಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಾರೆ. 2021ರಲ್ಲಿ ಪ್ರಿಯಾಂಕಾ ಹಾಲಿವುಡ್ ಸಿನಿಮಾ ಮ್ಯಾಟ್ರಿಕ್ಸ್ ಕೂಡ ಬಿಡುಗಡೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ಫಾಲೋವರ್‌ಗಳ ಸಂಖ್ಯೆ ಹೆಚ್ಚಾಗಿದ್ದು, 72.4 ಮಂದಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಮೂಲಕ ದೀಪಿಕಾ, ಕತ್ರಿನಾ, ಶ್ರದ್ಧಾರನ್ನು ಹಿಂದಿಕ್ಕಿದ್ಧಾರೆ.

2ನೇ ಸ್ಥಾನದಲ್ಲಿ ಶ್ರದ್ಧಾ ಕಪೂರ್
ಪ್ರಿಯಾಂಕಾ ಹಿಂದೆನೇ ಅತೀ ಫಾಲೋವರ್‌ಗಳನ್ನು ಹೊಂದಿರುವ ಮತ್ತೊಬ್ಬ ನಟಿ ಶ್ರದ್ಧಾ ಕಪೂರ್. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಜೊತೆ ಶ್ರದ್ಧಾ ಕಪೂರ್ ನಟಿಸುವ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ಸಿನಿಮಾ ಶೂಟಿಂಗ್ ಸೆಟ್ಟಿನ ಫೋಟೋಗಳು ಹಾಗೂ ಕುಟುಂಬದೊಂದಿಗೆ ಕಳೆದ ಫೋಟೊಗಳನ್ನೇ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 68.6 ಮಿಲಿಯನ್ ಮಂದಿ ಫಾಲೋವರ್ಸ್ ಇದ್ದಾರೆ.

3ನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ
ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಮತ್ತೊಬ್ಬ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ. ಹೆಚ್ಚಾಗಿ ತನ್ನ ಫೋಟೊ ಶೂಟ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದರೊಂದಿಗೆ ತಮ್ಮ ಸಿನಿಮಾದ ಬಗ್ಗೆ ಮಾಹಿತಿ, ನಟಿಸಿದ ಜಾಹೀರಾತುಗಳನ್ನೂ ದೀಪಿಕಾ ಪಡುಕೋಣೆ ಶೇರ್ ಮಾಡುತ್ತಿರುತ್ತಾರೆ. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 63.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

4ನೇ ಸ್ಥಾನದಲ್ಲಿ ಕತ್ರಿನಾ ಕೈಫ್
ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಕತ್ರಿನಾ ಫಿಟ್ನೆಸ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗೇ ಫೋಟೊಶೂಟ್‌ಗಳನ್ನು, ಸಿನಿಮಾದ ಬಗ್ಗೆ ಮಾಹಿತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ವಿಕ್ಕಿ ಕೌಶಲ್ ಜೊತೆ ಮದುವೆ ಆಗಿರುವ ಫೋಟೊಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಕತ್ರಿನಾ ಕೈಫ್ ಅನ್ನು ಇನ್‌ಸ್ಟಾಗ್ರಾಂನಲ್ಲಿ 60.5 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ.


Click it and Unblock the Notifications











