"30ನೇ ವಯಸ್ಸಿನಲ್ಲೇ ನನ್ನ ಅಂಡಾಣುವನ್ನು ತೆಗೆದಿಟ್ಟಿದ್ದೆ.." ಪ್ರಿಯಾಂಕಾ ಚೋಪ್ರಾಗೆ ಅಮ್ಮನಿಂದಲೇ ಸಿಕ್ಕಿತ್ತು ಸಲಹೆ
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಹಾಗೂ ಹಾಲಿವುಡ್‌ನ ಜನಪ್ರಿಯ ನಟಿ. ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲು ಏರುತ್ತಾ ಬಂದಿದ್ದಾರೆ. ಅದರಲ್ಲೂ ವಿವಾಹದ ಬಳಿಕ ಪ್ರಿಯಾಂಕಾ ಚೋಪ್ರಾ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಅದೂ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿಯೇ ಹೆಚ್ಚು ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಒಂದು ಸಂದರ್ಶನವನ್ನು ನೀಡಿದ್ದರು. ಅದರಲ್ಲಿ ತಮ್ಮ ಜೀವನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಇದೇ ಮೊದಲ ಬಾರಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಂದು ಪ್ರಿಯಾಂಕಾ ಚೋಪ್ರಾ ತೆಗೆದುಕೊಂಡ ನಿರ್ಧಾರಗಳ ಬೋಲ್ಡ್ ಆಗಿದ್ದವು. ಅಲ್ಲದೆ ತಾಯಿಯೇ ಸಲಹೆ ನೀಡಿದ್ದರು ಅನ್ನೋದು ಮತ್ತೊಂದು ವಿಶೇಷ.

ಪ್ರಿಯಾಂಕಾ ಚೋಪ್ರಾ 30ರ ಹರೆಯದಲ್ಲಿ ತನ್ನ ಅಂಡಾಣುವನ್ನು ಶೇಖರಿಸಿಟ್ಟಿದ್ದೆ ಎಂದು ಹೇಳಿದ್ದಾರೆ. ಪ್ರಸೂತಿ ಮತ್ತು ಸ್ತ್ರೀ ರೋಗತಜ್ಞೆಯೂ ಆಗಿರುವ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಅವರೇ ಮಗಳಿಗೆ ಈ ಸಲಹೆಯನ್ನು ನೀಡಿದ್ದರೆಂದು ಹೇಳಿಕೆ ನೀಡಿದ್ದಾರೆ.
ಅಮ್ಮನ ಸಲಹೆಯಂತೆ ಅಂಡಾಣು ಶೇಖರಣೆ
ನಿಕ್ ಜೋನಸ್ ಭೇಟಿ ಮಾಡುವುದಕ್ಕೂ ಮುನ್ನ ಪ್ರಿಯಾಂಕಾ ಚೋಪ್ರಾ ಅಂಡಾಣುವನ್ನು ಶೇಖರಿಸಿ ಇಟ್ಟಿದ್ದಾಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ನನಗೆ ಆ ಸ್ವತಂತ್ರ್ಯವಿತ್ತು. ನನ್ನ 30ನೇ ಹರೆಯದಲ್ಲೇ ಈ ಕೆಲಸ ಮಾಡಿದ್ದೆ. ನಾನು ಮಹತ್ವಕಾಂಕ್ಷೆಯ ಹೋರಾಟವನ್ನು ಮುಂದುವರೆಸುತ್ತೇನೆ. ನಾನು ಇನ್ನೂ ಸಾಧನೆ ಮಾಡಬೇಕು. ನನ್ನ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೆ ಏರಬೇಕು ಅಂತಿತ್ತು." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇಂತಹ ಬೋಲ್ಡ್ ಸ್ಟೆಪ್ ಅನ್ನು ಪತಿ ನಿಕ್ ಜೋನಸ್ ಭೇಟಿ ಮಾಡುವುದಕ್ಕೂ ಮುನ್ನವೇ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. "ನಾನು ಯಾರೊಂದಿಗೆ ಮಕ್ಕಳನ್ನು ಪಡೆಯಬೇಕು ಎಂದು ಬಯಸಿದ್ದೆನೋ ಅವರನ್ನು ಇನ್ನೂ ಭೇಟಿ ಮಾಡಿರಲಿಲ್ಲ. ಆ ಆತಂಕದಲ್ಲಿರುವಾಗಲೇ ನನ್ನ ಪ್ರಸೂತಿ ಹಾಗೂ ಸ್ತ್ರೀತಜ್ಞೆಯಾಗಿರುವ ನನ್ನ ಅಮ್ಮನ ಸಲಹೆಯಂತೆಯೇ ಅಂಡಾಣು ಶೇಖರಣೆಗೆ ಮುಂದಾಗಿದ್ದೆ" ಎಂದು ಸಂದರ್ಶಕ ಡಾಕ್ಸ್ ಶೆಪರ್ಡ್‌ಗೆ ಪ್ರಿಯಾಂಕಾ ಹೇಳಿದ್ದಾರೆ.

35ರ ಬಳಿಕ ಗರ್ಭ ಧರಿಸುವುದು ಕಠಿಣ
ಪ್ರಿಯಾಂಕಾ ಚೋಪ್ರಾ ಅಮ್ಮನ ಸಲಹೆಯಂತೆಯೇ ಅಂಡಾಣುವಂತೆ ಶೇಖರಿಸಿ ಇಟ್ಟಿದ್ದರು. ಹಾಗೆಯೇ ಮಹಿಳೆಯರಿಗೆ ಸಲಹೆಯನ್ನೂ ನೀಡಿದ್ದು, 35ರ ಬಳಿಕ ಗರ್ಭ ಧರಿಸುವುದು ತುಂಬಾನೇ ಕಠಿಣವಾಗಿರುತ್ತೆ. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇಷ್ಟು ಕಷ್ಟಸಾಧ್ಯವೆಂದು ಪ್ರಿಯಾಂಕಾ ಚೋಪ್ರಾ ಸಲಹೆ ನೀಡಿದ್ದಾರೆ.
" ನನ್ನ ಯಂಗ್ ಫ್ರೆಂಡ್ಸ್‌ಗೆ ಬಯೋಲಾಜಿಕಲ್ ಕ್ಲಾಕ್ ರಿಯಲ್ ಅನ್ನೋದನ್ನು ಹೇಳುತ್ತೇನೆ. 35ರ ಬಳಿಕ ಗರ್ಭ ಧರಿಸುವುದು ತುಂಬಾನೇ ಕಠಿಣ. ನೀವು ಎಷ್ಟು ವರ್ಷದವರೆಗೆ ಬೇಕಾದರೂ ಕೆಲಸ ಮಾಡಬಹುದು. ಆದರೆ, ನೀವು ಶೇಖರಿಸಿ ಇಟ್ಟ ಅಂಡಾಣುಗಳು ಅಷ್ಟೇ ವಯಸ್ಸಿನದ್ದಾಗಿರುತ್ತೆ." ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಬಾಡಿಗೆ ತಾಯ್ತನದ ಮೊರೆ ಹೋದ ಪ್ರಿಯಾಂಕಾ
ಪ್ರಿಯಾಂಕಾ ಚೋಪ್ರಾ ಅಮೆರಿಕದ ಗಾಯಕ ನಿಕ್ ಜೋನಸ್‌ರನ್ನು ವಿವಾಹವಾಗಿದ್ದಾರೆ. ಮದುವೆಯಾದ ಮೂರು ವರ್ಷಗಳ ಬಳಿಕ ಅಂದ್ರೆ, ಜನವರಿ 2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾರೆ. ಮಗಳಿಗೆ ಮಾಲ್ತಿ ಅಂತಾನೂ ಹೆಸರು ಇಟ್ಟಿದ್ದಾರೆ.
ಪ್ರಿಯಾಂಕಾ ಚೋಪ್ರಾ ಆರೋಗ್ಯದ ಸಮಸ್ಯೆಯಿಂದಾಗ ಬಾಡಿಗೆ ತಾಯ್ತನದ ಮೊರೆ ಹೋಗಿದ್ದರು. ಹೀಗಾಗಿ ಪ್ರಿಯಾಂಕಾ ಚೋಪ್ರಾ ತನಗೆ ಆದ ಅನುಭವವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದು, ಯುವತಿಯರಿಗೆ ಸಲಹೆ ನೀಡಿದ್ದಾರೆ.


Click it and Unblock the Notifications











