ಒಂದು ಜಾಕೆಟ್‌ನಿಂದ ರಟ್ಟಾಯ್ತು ಪ್ರಿಯಾಂಕ ಮಾಜಿ ಬಾಯ್ ಫ್ರೆಂಡ್ ಗುಟ್ಟು?

By Suneel

ಬಾಲಿವುಡ್ ನಲ್ಲಿ ಸದಾ ಯಾರಾದರೊಬ್ಬರು ನಟ-ನಟಿ ಬಾಯ್ ಫ್ರೆಂಡ್ ಮತ್ತು ಗರ್ಲ್ ಫ್ರೆಂಡ್ ಅವರು ಇವರೆಂಬ ರೂಮರ್ಸ್ ಗಳಿಂದ ಸುದ್ದಿಯಲ್ಲಿರುತ್ತಾರೆ. ಆದರೆ ಈವರೆಗೂ ಸಹ ಬಾಯ್ ಫ್ರೆಂಡ್ ವಿಚಾರದಲ್ಲಿ ಹೆಚ್ಚು ಗಾಸಿಪ್ ಗೆ ಒಳಗಾಗದವರು ಕೃಷ್ಣ ಸುಂದರಿ ಪ್ರಿಯಾಂಕ ಚೋಪ್ರಾ. ಆದರೆ ಈಗ ಅವರು ಸಹ ಮಾಜಿ ಬಾಯ್ ಫ್ರೆಂಡ್ ಯಾರು ಎಂದು ಸುಳಿವು ನೀಡುವ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.[ಮಿಯಾಮಿ ಬೀಚಿನಲ್ಲಿ ಬಿಕಿನಿ ತೊಟ್ಟ ಪ್ರಿಯಾಂಕ ಚೋಪ್ರಾ ತಾಜಾ ಚಿತ್ರಗಳು!]

ಅಂದಹಾಗೆ ಇತ್ತೀಚೆಗೆ ಪ್ರಿಯಾಂಕ ಚೋಪ್ರಾ 'Dirty Laundry' ಎಂಬ ಶೋ ನಲ್ಲಿ ತಮ್ಮ ನೆಚ್ಚಿನ ಉಡುಗೆ-ತೊಡುಗೆಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಒಂದು ಜಾಕೆಟ್ ಬಗ್ಗೆ ಮಾತನಾಡಿ ಅದು ತಮ್ಮ ಮಾಜಿ ಪ್ರಿಯಕರನದು ಎಂದು ಹೇಳಿ ಸಂಪೂರ್ಣ ಬಿ ಟೌನ್ ಗಮನ ಸೆಳೆದಿದ್ದಾರೆ. ಹಾಗಿದ್ರೆ ಪಿಗ್ಗಿಯ ಎಕ್ಸ್ ಬಾಯ್ ಫ್ರೆಂಡ್ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ಯಾ? ಮುಂದೆ ಓದಿ..

ಬಿಟೌನ್ ಗಮನಸೆಳೆದ ಪ್ರಿಯಾಂಕ ಚೋಪ್ರಾ

ಬಿಟೌನ್ ಗಮನಸೆಳೆದ ಪ್ರಿಯಾಂಕ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಾವು ಇನ್ನು ಸಹ ತಮ್ಮ ಮಾಜಿ ಬಾಯ್ ಫ್ರೆಂಡ್ ಜಾಕೆಟ್ ಬಳಸುತ್ತಿರುವ ಬಗ್ಗೆ ಹೇಳಿ, ಬಿ ಟೌನ್ ಗಮನಸೆಳೆದಿದ್ದಾರೆ.

'Dirty Laundry' ಶೋನಲ್ಲಿ ಪ್ರಿಯಾಂಕ ಹೇಳಿದ್ದೇನು?

'Dirty Laundry' ಶೋನಲ್ಲಿ ಪ್ರಿಯಾಂಕ ಹೇಳಿದ್ದೇನು?

'Dirty Laundry' ಎಂಬ ಶೋನಲ್ಲಿ ಪ್ರಿಯಾಂಕ ಚೋಪ್ರಾ ತಮ್ಮ ನೆಚ್ಚಿನ ಜಾಕೆಟ್ ಒಂದರ ಬಗ್ಗೆ ಮಾತನಾಡುತ್ತ, "ಇದರ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ. ಆದರೆ ನಿಮ್ಮ ಶೋ ಹೆಸರು ಸಹ 'Dirty Laundry' ಎಂದು ಇರುವುದರಿಂದ ಹೇಳಲು ಹಿಂಜರಿಯುವುದಿಲ್ಲ. ಇದು ನಾನು ಅಕ್ಷರಶಃ ಬಳಸುತ್ತಿರುವ ಜಾಕೆಟ್. ಇದು ನನ್ನ ಏರ್‌ಪೋರ್ಟ್ ಜಾಕೆಟ್, ಆದರೆ ನನ್ನ ಮಾಜಿ ಬಾಯ್ ಫ್ರೆಂಡ್ ಗೆ ಸೇರಿದ್ದು" ಎಂದು ಹೇಳಿದ್ದರು.

ಹಾಗಿದ್ರೆ ಜಾಕೆಟ್ ಯಾರದಿರಬಹುದು?

ಹಾಗಿದ್ರೆ ಜಾಕೆಟ್ ಯಾರದಿರಬಹುದು?

ಪಿಗ್ಗಿ ತಾವು ಬಳಸುತ್ತಿರುವ ಜಾಕೆಟ್ ಮಾಜಿ ಬಾಯ್ ಫ್ರೆಂಡ್ ನದ್ದು ಎಂದು ಹೇಳಿದ್ದು ಬಾಲಿವುಡ್ ನವರ ಕಣ್ಣು ಕೆಂಪಗೆ ಮಾಡಿಸಿದೆ. ಕಾರಣ 'Dirty Laundry' ಶೋ ನಲ್ಲಿ ಅವರು ವಿವರಿಸಿದ ಜಾಕೆಟ್ ಶಾರುಖ್ ಖಾನ್ ರದ್ದು ಎಂದು ಹಲವರು ನೆನಪು ಮಾಡಿಕೊಂಡಿದ್ದಾರಂತೆ. ಅಲ್ಲದೇ ಈ ಹಿಂದೆ ಶಾರುಖ್ ಮತ್ತು ಪ್ರಿಯಾಂಕ ಚೋಪ್ರಾ ಇಬ್ಬರೂ ಡೇಟಿಂಗ್ ನಡೆಸಿರಬಹುದಾ ಎಂಬ ರೂಮರ್ಸ್ ಸಹ ಹಬ್ಬಿದೆ.

ಮಾಜಿ ಬಾಯ್ ಫ್ರೆಂಡ್ ಬಗ್ಗೆ ಸುಳಿವು ನೀಡಿದ ಪಿಗ್ಗಿ

ಮಾಜಿ ಬಾಯ್ ಫ್ರೆಂಡ್ ಬಗ್ಗೆ ಸುಳಿವು ನೀಡಿದ ಪಿಗ್ಗಿ

ಪ್ರಿಯಾಂಕ ಚೋಪ್ರಾ ತಮಗೆ ಬಾಯ್ ಫ್ರೆಂಡ್ ಇದ್ದರೂ ಎಂಬುದನ್ನು ಖಚಿತಪಡಿಸುವುದರ ಜೊತೆಗೆ ಅವರು ಯಾರು ಎಂಬುದರ ಬಗ್ಗೆಯೂ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ Inspiremaryam ಹೆಸರಿನ ಟ್ವಿಟರ್ ಬಳಕೆದಾರರು "ನಾನು ಪ್ರಿಯಾಂಕ ಚೋಪ್ರಾ, ಶಾರುಖ್ ಖಾನ್ ರೊಂದಿಗಿನ ರಿಲೇಶನ್‌ಶಿಪ್ ಬಗ್ಗೆ ಹೇಳಿದರು ಎಂದು ಟ್ವೀಟ್ ಮಾಡಿದ್ದೆ. ಆದನ್ನು ಪ್ರಿಯಾಂಕ ತಕ್ಷಣ ಲೈಕ್ ಮಾಡಿದ್ರು. ನಂತರ ಅನ್‌ಲೈಕ್ ಮಾಡಿದರು." ಎಂದು ಟ್ವೀಟ್ ಮಾಡಿದ್ದಾರೆ.

ಜಾಕೆಟ್ ನಿಜವಾಗಲೂ ಶಾರುಖ್ ಖಾನ್ ರದ್ದೇ?

ಜಾಕೆಟ್ ನಿಜವಾಗಲೂ ಶಾರುಖ್ ಖಾನ್ ರದ್ದೇ?

ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಯಾಕಂದ್ರೆ ಪ್ರಿಯಾಂಕ ಚೋಪ್ರಾ ಜಸ್ಟ್ ಜಾಕೆಟ್ ತಮ್ಮ ಮಾಜಿ ಬಾಯ್ ಫ್ರೆಂಡ್ ನದ್ದು ಎಂದಷ್ಟೇ ಹೇಳಿದ್ದು, ಅದು ಯಾರದ್ದು, ತಮ್ಮ ಎಕ್ಸ್ ಬಾಯ್ ಫ್ರೆಂಡ್ ಯಾರು ಎಂಬ ಬಗ್ಗೆ ತುಟಿ ಬಿಚ್ಚಿಲ್ಲ.

ಪಿಗ್ಗಿ ಇನ್ನೂ ಜಾಕೆಟ್ ಇಟ್ಟುಕೊಂಡಿರುವುದೇಕೆ?

ಪಿಗ್ಗಿ ಇನ್ನೂ ಜಾಕೆಟ್ ಇಟ್ಟುಕೊಂಡಿರುವುದೇಕೆ?

'Dirty Laundry' ಶೋ ಹೋಸ್ಟ್ ಲಾರಾ ಬ್ರೌನ್ ಈ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕ ಚೋಪ್ರಾ, " ವಸ್ತುಗಳು ವಿನಿಮಯವಾಗುತ್ತವೆ. ಜಾಕೆಟ್ ನನ್ನ ಬಳಿ ಉಳಿದ ಮೇಲೆ ಅವರೊಂದಿಗಿನ ಒಡನಾಟ ನಿಲ್ಲಿಸಿದೆ. ಅದನ್ನು ನಾನು ಧರಿಸುತ್ತಿದ್ದೆ. ಅವರು ಒಮ್ಮೆ ವಾಪಸ್ಸು ನೀಡುವಂತೆ ಕೇಳಿದರು. ನಾನು 'ನೊ' ಎಂದೇ." ಎಂದು ಹೇಳಿದ್ದರು.

More from Filmibeat

English summary
Priyanka Chopra recently attended a show, Dirty Laundry, where she talked about her favourite clothes and accessories. In this show she revealed that she still uses her ex-boyfriend's jacket. Now, there is a strong buzz that this jacket belongs to Shahrukh Khan. And guess what? Priyanka too, tried to tell the same.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X