»   » ಮಿಯಾಮಿ ಬೀಚಿನಲ್ಲಿ ಬಿಕಿನಿ ತೊಟ್ಟ ಪ್ರಿಯಾಂಕ ಚೋಪ್ರಾ ತಾಜಾ ಚಿತ್ರಗಳು!

ಮಿಯಾಮಿ ಬೀಚಿನಲ್ಲಿ ಬಿಕಿನಿ ತೊಟ್ಟ ಪ್ರಿಯಾಂಕ ಚೋಪ್ರಾ ತಾಜಾ ಚಿತ್ರಗಳು!

Posted By:
Subscribe to Filmibeat Kannada

ಪ್ರಿಯಾಂಕ ಚೋಪ್ರಾ ಸದ್ಯದಲ್ಲಿ ತಮ್ಮ ಹಾಲಿವುಡ್ 'ಬೇವಾಚ್' ಸಿನಿಮಾದ ಪ್ರೆಸ್ ಕಾನ್ಫರೆನ್ಸ್ ಮತ್ತು ಪ್ರಮೋಷನ್ ನಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಪಿಗ್ಗಿ ಅಮೇರಿಕದ ಫ್ಲೋರಿಡಾ ರಾಜ್ಯದಲ್ಲಿನ ಮಿಯಾಮಿ ಬೀಚ್ ನಲ್ಲಿ ಬ್ರೆಜಿಲ್ ಮೂಲದ ರೂಪದರ್ಶಿ ಮತ್ತು ನಟಿ ಅಡ್ರಿಯಾನ ಲಿಮಾ ಜೊತೆ ಕಾಣಿಸಿಕೊಂಡಿದ್ದು ಸುದ್ದಿಯಾಗಿದ್ದಾರೆ.['ನಿರ್ಭಯಾ' ತೀರ್ಪಿಗೆ ಭಾವುಕಳಾದ ಪ್ರಿಯಾಂಕ ಚೋಪ್ರಾ ಹೇಳಿದ್ದೇನು?]

ಕೃಷ್ಣ ಸುಂದರಿ ಪ್ರಿಯಾಂಕ ಚೋಪ್ರಾ ಮಿಯಾಮಿ ಬೀಚ್ ನಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ಬಿಕಿನಿ ಡ್ರೆಸ್ ನಲ್ಲಿ ಕಂಗೊಳಿಸಿದ್ದಾರೆ. ಪಿಗ್ಗಿಯ ಈ ಬಿಕಿನಿ ಅವತಾರವನ್ನು ನೀವೇ ಒಮ್ಮೆ ನೋಡಿ ಹೇಗಿದೆ...

ಹಾಟ್ ಲುಕ್ ನಲ್ಲಿ ಪ್ರಿಯಾಂಕ ಹೇಗಿದ್ದಾರೆ ನೋಡಿ..

ಫ್ಲೋರಿಡಾದ ಮಿಯಾಮಿ ಬೀಚ್ ನಲ್ಲಿ ಪ್ರಿಯಾಂಕ ಚೋಪ್ರಾ ಬಿಕಿನಿ ಡ್ರೆಸ್ ನಲ್ಲಿ ಕಾಣಿಸಿಕೊಂಡ ಹಾಟ್ ಲುಕ್ ಇದು.[ಪ್ರಿಯಾಂಕ ಚೋಪ್ರಾ ಬಾಯ್ ಫ್ರೆಂಡ್ ಆಗುವ ಅವಕಾಶ ಯಾರಿಗೆ?]

ಫೋಟೋಗಾಗಿ ವಿವಿಧ ಭಂಗಿಯಲ್ಲಿ ಪಿಗ್ಗಿ ಪೋಸ್

'ಮಿಯಾಮಿ' ಬೀಚ್ ನಲ್ಲಿ ಬಿಕಿನಿ ಉಡುಗೆಯಲ್ಲಿ ನೀರಿನಲ್ಲಿ ಆಟವಾಡುವ ವೇಳೆ ಪ್ರಿಯಾಂಕ ಚೋಪ್ರಾ ಹಲವು ಭಂಗಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.

ಪ್ರಿಯಾಂಕ ಚೋಪ್ರಾ ಮತ್ತು ಅಡ್ರಿಯಾನ ಲಿಮಾ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಬ್ರೆಜಿಲ್ ರೂಪದರ್ಶಿ ಹಾಗೂ ನಟಿ ಅಡ್ರಿಯಾನ ಲಿಮಾ ಮಿಯಾಮಿ ಬೀಚ್ ನಲ್ಲಿ ಜೊತೆಯಲ್ಲಿ ಫೋಟೋ ತೆಗೆಸಿಕೊಂಡರು. ಬಿಕಿನಿ ಡ್ರೆಸ್ ನಲ್ಲಿ ನೀರಿನಲ್ಲಿ ಆಡವಾಡುತ್ತಾ ಇಬ್ಬರು ಸಹ ಪರಸ್ಪರ ತುಂಟತನದ ಕ್ಷಣಗಳನ್ನು ಶೇರ್ ಮಾಡಿಕೊಂಡರು.

ಬೇಸಿಗೆಯ ದಣಿವಿಗಾಗಿ ಬೀಚ್ ಗೆ ಭೇಟಿ

ಪ್ರಿಯಾಂಕ ಜಸ್ಟ್ ಬೇಸಿಗೆಯ ದಣಿವನ್ನು ನೀಗಿಸಿಕೊಳ್ಳಲು ಮಿಯಾಮಿ ಬೀಚ್ ಗೆ ಹೋಗಿದ್ದರು.

ಫೋಟೋಶೂಟ್ ಗಾಗಿ ನೀಡಿದ ಪೋಸ್ ನಂತಿರುವ ಚಿತ್ರ

ಪ್ರಿಯಾಂಕ ರ ಈ ಕ್ಯಾಂಡಿಡ್ ಚಿತ್ರ ಎಂತಹವರನ್ನು ಬಾಯಿ ಬಿಟ್ಟು ನೋಡುವಂತೆ ಮಾಡುತ್ತದೆ.

'ಬೇವಾಚ್' ರಿಲೀಸ್ ಗಾಗಿ ಮುನ್ನೂಡುತ್ತಿರುವ ಪಿಗ್ಗಿ

ಬಾಲಿವುಡ್ ಅಂಗಳದಲ್ಲಿ ಯಶಸ್ಸು ಕಂಡಿರುವ ಪ್ರಿಯಾಂಕ ಚೋಪ್ರಾ ಈಗ 'ಬೇವಾಚ್' ಚಿತ್ರದ ಮೂಲಕ ಹಾಲಿವುಡ್ ಸಿನಿಮಾ ಅಂಗಳ ಪ್ರವೇಶ ಮಾಡಿದ್ದಾರೆ.

ಪ್ರಿಯಾಂಕ ಮಿಂಚಿಂಗ್

ಪ್ರಿಯಾಂಕ ಚೋಪ್ರಾ ಮಿಯಾಮಿ ಬೀಚ್ ನಲ್ಲಿ ಬಿಕಿನಿ ಡ್ರೆಸ್ ಉಡುಗೆಯಲ್ಲಿ ತಮ್ಮ ನೋಟದಿಂದ ಪಡ್ಡೆ ಹುಡುಗರ ಹೃದಯದಲ್ಲಿ ಕಚಗುಳಿ ಇಟ್ಟಿದ್ದಾರೆ. ಜೊತೆಗೆ 'ಬೇವಾಚ್' ಚಿತ್ರದ ಪ್ರೋಮೋಸ್ ಮತ್ತು ಪೋಸ್ಟರ್ ಗಳಿಂದ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದ್ದಾರೆ.

ನೆಗೆಟಿವ್ ರೋಲ್ ನಲ್ಲಿ ಪ್ರಿಯಾಂಕ

ಬಹು ನಿರೀಕ್ಷೆ ಹುಟ್ಟಿಸಿರುವ ಹಾಲಿವುಡ್ 'ಬೇವಾಚ್' ಚಿತ್ರದಲ್ಲಿ ಪ್ರಿಯಾಂಕ ನೆಗೆಟಿವ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದು, ವಿಕ್ಟೋರಿಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡ್ವೇನ್ ಜಾನ್ಸನ್ ಮತ್ತು ಪ್ರಿಯಾಂಕ ಚೋಪ್ರಾ

ಪಿಗ್ಗಿ ಅಭಿನಯದ ಮೊಟ್ಟ ಮೊದಲ ಹಾಲಿವುಡ್ ಸಿನಿಮಾ ಕುರಿತಂತೆ, ಪ್ರಿಯಾಂಕ ಚೋಪ್ರಾ ಗೆ ಸಂತೋಷದ ವಿಷಯ ಅಂದ್ರೆ ಈ ಚಿತ್ರದಲ್ಲಿ ಅವರು ಹಾಲಿವುಡ್ ಆಕ್ಷನ್ ಸಿನಿಮಾಗಳ ಖ್ಯಾತ ನಟ ಡ್ವೇನ್ ಜಾನ್ಸನ್ ರೊಂದಿಗೆ ತೆರೆಹಂಚಿಕೊಂಡಿದ್ದಾರೆ.

English summary
These latest pictures of Priyanka Chopra, donning a bikini at Miami beach, are going viral for all the right reasons..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada