ಪ್ರಿಯಾಂಕಾ ಚೋಪ್ರಾ ಚಿಕ್ಕಪ್ಪನಿಗೆ ಚಾಕು ತೋರಿಸಿ ದೋಚಿದ ದುಷ್ಕರ್ಮಿಗಳು

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಚಿಕ್ಕಪ್ಪ, ನಟಿ ಮೀರಾ ಚೋಪ್ರಾ ಅವರ ತಂದೆಗೆ ದೆಹಲಿಯಲ್ಲಿ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ ಮೊಬೈಲ್ ಫೋನ್ ದೋಚಿರುವ ಘಟನೆ ನಡೆದಿದೆ.

Recommended Video

Nick Jonas Celebrates First Holi with Priyanka Chopra

ದೆಹಲಿಯ ಪೊಲೀಸ್ ಕಾಲೋನಿ ಸಮೀಪ ಮಂಗಳವಾರ ಈ ಘಟನೆ ನಡೆದಿದ್ದು, ಅದರ ಕುರಿತು ನಟಿ ಮೀರಾ ಚೋಪ್ರಾ ಮಾಹಿತಿ ನೀಡಿದ್ದಾರೆ. ಮೀರಾ ಚೋಪ್ರಾ ತಂದೆ ಸಂಜೆ ವಾಯು ವಿಹಾರಕ್ಕೆ ತೆರಳಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

'ಪೊಲೀಸ್ ಕಾಲೋನಿಯಲ್ಲಿ ನನ್ನ ತಂದೆ ವಾಕ್ ಮಾಡುತ್ತಿದ್ದರು. ಸ್ಕೂಟರ್‌ನಲ್ಲಿ ಬಂದ ಇಬ್ಬರು ಪುರುಷರು ಅವರಿಗೆ ಚಾಕು ತೋರಿಸಿ ಮೊಬೈಲ್ ದೋಚಿದ್ದಾರೆ. ನೀವು ಹೇಳುವಂತೆ ದೆಹಲಿ ಎಷ್ಟು ಸುರಕ್ಷಿತ ಎಂಬುದನ್ನು ಇದು ತೋರಿಸುತ್ತದೆ' ಎಂದು ಮೀರಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

ಎಫ್‌ಐಆರ್ ಮಾಹಿತಿ ಕೊಟ್ಟ ಮೀರಾ

ಎಫ್‌ಐಆರ್ ಮಾಹಿತಿ ಕೊಟ್ಟ ಮೀರಾ

ಮತ್ತೊಂದು ಟ್ವೀಟ್‌ನಲ್ಲಿ ಮೀರಾ, ಎಫ್‌ಐಆರ್ ನೋಂದಣಿಯ ಸಂಖ್ಯೆಯನ್ನು ಕೂಡ ನೀಡಿದ್ದಾರೆ. 'ಎಫ್‌ಐಆರ್ ನಂಬರ್: NWD-MT-000568 ಪಿಸಿಆರ್ ಪೊಲೀಸ್ ಲೈನ್ ಸಮೀಪದ ಪ್ರಿನ್ಸ್ ರಸ್ತೆ, ಮಾಡೆಲ್ ಟೌನ್. ನಿಮಗೆ ನೇರ ಸಂದೇಶ ಅಥವಾ ಇಮೇಲ್ ಮೂಲಕ ಸಂಪರ್ಕ ಸಂಖ್ಯೆಯನ್ನು ನೀಡುತ್ತೇನೆ' ಎಂದು ಉತ್ತರ ದೆಹಲಿಯ ಡಿಸಿಪಿ ಕೇಳಿರುವ ಮಾಹಿತಿಗೆ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ಬಗ್ಗೆ ಹೆಮ್ಮೆಯಾಗುತ್ತದೆ

ಪೊಲೀಸರ ಬಗ್ಗೆ ಹೆಮ್ಮೆಯಾಗುತ್ತದೆ

ದೆಹಲಿ ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡಿದ್ದಕ್ಕೆ ಮೀರಾ ಧನ್ಯವಾದ ಸಲ್ಲಿಸಿದ್ದಾರೆ. 'ಇಷ್ಟು ತ್ವರಿತವಾಗಿ ಕ್ರಮ ಕೈಗೊಂಡಿದ್ದಕ್ಕೆ ಉತ್ತರ ದೆಹಲಿ ಪೊಲೀಸರಿಗೆ ಧನ್ಯವಾದಗಳು. ನಮ್ಮ ಪೊಲೀಸ್ ಇಲಾಖೆಯಿಂದ ರಕ್ಷಣೆ ಸಿಗುತ್ತದೆ ಎಂಬ ಭಾವನೆ ಉಂಟಾದಾಗ ಹೆಮ್ಮೆಯಾಗುತ್ತದೆ' ಎಂದಿದ್ದಾರೆ.

ಹಿರಿಯನ್ನು ರಕ್ಷಿಸಿಕೊಳ್ಳಬೇಕು

ಹಿರಿಯನ್ನು ರಕ್ಷಿಸಿಕೊಳ್ಳಬೇಕು

'ಇದು ಯಾವುದನ್ನು ಕಳವು ಮಾಡಲಾಗಿದೆ ಎಂಬ ವಿಷಯಕ್ಕಿಂತಲೂ ನಮ್ಮ ಹಿರಿಯರನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ದೆಹಲಿ ಪೊಲೀಸರನ್ನು ಗೌರವಿಸುತ್ತೇನೆ' ಎಂದು ಮೀರಾ ಚೋಪ್ರಾ ತಿಳಿಸಿದ್ದಾರೆ.

ಕನ್ನಡದಲ್ಲಿಯೂ ನಟನೆ

ಕನ್ನಡದಲ್ಲಿಯೂ ನಟನೆ

ಪ್ರಿಯಾಂಕಾ ಚೋಪ್ರಾ ಅವರ ಕಸಿನ್ ಸಿಸ್ಟರ್‌ಗಳಾದ ಪರಿಣೀತಿ ಚೋಪ್ರಾ, ಮೀರಾ ಚೋಪ್ರಾ ಹಾಗೂ ಮನ್ನರಾ ಚೋಪ್ರಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಲ್ಲಿ ಮೀರಾ ಚೋಪ್ರಾ, ಅಕ್ಕನಿಂದ ಹೆಚ್ಚು ಬೆಂಬಲ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ 'ಅರ್ಜುನ್' ಎಂಬ ಚಿತ್ರದಲ್ಲಿಯೂ ಅವರು ನಟಿಸಿದ್ದರು. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೇ ಹೆಚ್ಚು ಅಭಿನಯಿಸಿದ್ದಾರೆ.

More from Filmibeat

English summary
Bollywood actress Priyanka Chopra's cousin Meera Chopra's father was robbed at knifepoint in Delhi's police colony on Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X