For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಿರ್ಮಾಪಕನ ಅವಳಿ ಹೆಣ್ಣುಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್!

  |

  ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದು ಚಿಕಿತ್ಸೆ ಪಡೆದು ಈಗ ಬಿಡುಗಡೆಯಾಗಿದ್ದಾರೆ. ಆದರೆ ಈಗ ಬಾಲಿವುಡ್ ನಂಟು ಹೊಂದಿರುವ ಇನ್ನಿಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

  ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿ ಅವರ ಇಬ್ಬರು ಅವಳಿ ಹೆಣ್ಣುಮಕ್ಕಳಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕರೀಮ್ ಮೊರಾನಿ ಅವರ ಮಗಳು ಶಾಜಾ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಸೋಮವಾರ ವರದಿಯಾಗಿತ್ತು. ಈಗ ಅವರ ಅವಳಿ ಸಹೋದರಿ, ನಟಿ ಜೋಯಾ ಮೊರಾನ ಅವರಲ್ಲಿ ಕೂಡ ಕೋವಿಡ್ 19 ಪಾಸಿಟಿವ್ ಕಂಡುಬಂದಿದೆ. ಮುಂದೆ ಓದಿ...

  ಶ್ರೀಲಂಕಾದಿಂದ ಬಂದಿದ್ದ ಶಾಜಾ

  ಶ್ರೀಲಂಕಾದಿಂದ ಬಂದಿದ್ದ ಶಾಜಾ

  ಮಾರ್ಚ್ ಮೊದಲ ವಾರದಲ್ಲಿ ಶ್ರೀಲಂಕಾದಿಂದ ಶಾಜಾ ವಾಪಸ್ ಆಗಿದ್ದರು. ಅವರಲ್ಲಿ ಯಾವುದೇ ಲಕ್ಷಣಗಳು ಕಂಡುಬರದೇ ಇದ್ದರೂ ಮುಂಬೈನ ನಾನಾವತಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು. ರಾಜಸ್ಥಾನದಿಂದ ಮಾರ್ಚ್ ಮಧ್ಯದಲ್ಲಿ ಮನೆಗೆ ಮರಳಿದ್ದ ಜೋಯಾ ಅವರಲ್ಲಿ ಕೂಡ ಕೊರನಾ ವೈರಸ್ ಇರುವುದು ದೃಢಪಟ್ಟಿದೆ.

  ದೀಪ ಹಚ್ಚಿ ಎಂದರೆ ಸಿಗರೇಟ್ ಹಚ್ಚಿ ವಿವಾದ ಸೃಷ್ಟಿಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾದೀಪ ಹಚ್ಚಿ ಎಂದರೆ ಸಿಗರೇಟ್ ಹಚ್ಚಿ ವಿವಾದ ಸೃಷ್ಟಿಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

  ಎಲ್ಲರೂ ತಪಾಸಣೆಗೆ

  ಎಲ್ಲರೂ ತಪಾಸಣೆಗೆ

  'ಜೋಯಾಳಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಸಂಜೆ ಆಕೆಯ ವೈದ್ಯಕೀಯ ವರದಿ ಬಂದಿದೆ. ಆಕೆ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿದ್ದಾಳೆ. ಶಾಜಾ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಎರಡು ದಿನಗಳ ಬಳಿಕ ಆಕೆಗೆ ಮತ್ತೆ ಪರೀಕ್ಷೆ ಮಾಡಲಾಗುತ್ತದೆ. ಸದ್ಯಕ್ಕೆ ನಮ್ಮ ಕುಟುಂಬದ ಸದಸ್ಯರು, ಮನೆಗೆಲಸದ ಸಹಾಯಕರು ಎಲ್ಲರೂ ತಪಾಸಣೆಗೆ ಒಳಪಡುತ್ತಿದ್ದೇವೆ. ಎಲ್ಲರೂ ಕ್ವಾರೆಂಟೀನ್‌ನಲ್ಲಿದ್ದಾರೆ' ಎಂದು ಕರೀಮ್ ಮೊರಾನಿ ತಿಳಿಸಿದ್ದಾರೆ.

  ಇಬ್ಬರೂ ಬೇರೆ ಆಸ್ಪತ್ರೆಯಲ್ಲಿ

  ಇಬ್ಬರೂ ಬೇರೆ ಆಸ್ಪತ್ರೆಯಲ್ಲಿ

  ಕರೀಮ್ ಅವರ ಮೊದಲ ಮಗಳು ಜೋಯಾ ಮುಂಬೈನ ಧೀರೂಬಾಯಿ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರೂ ಮಕ್ಕಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲು ಮಾಡಿರುವ ಕಾರಣವನ್ನು ಅವರು ತಿಳಿಸಿಲ್ಲ.

  ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮತ್ತೆ ಟ್ರೋಲಿಗರಿಗೆ ಆಹಾರಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮತ್ತೆ ಟ್ರೋಲಿಗರಿಗೆ ಆಹಾರ

  ಲಕ್ಷಣಗಳಿಲ್ಲ ಆದರೆ ಪಾಸಿಟಿವ್

  ಲಕ್ಷಣಗಳಿಲ್ಲ ಆದರೆ ಪಾಸಿಟಿವ್

  ಇದಕ್ಕೂ ಮುನ್ನ ತಮ್ಮ ಇಬ್ಬರೂ ಮಕ್ಕಳನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಕರೀಮ್ ಮೊರಾನಿ ತಿಳಿಸಿದ್ದರು. ಶಾಜಾಳಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಆಕೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ಮತ್ತೊಬ್ಬ ಮಗಳು ಜೋಯಾಳಲ್ಲಿ ಕೆಲವು ಲಕ್ಷಣಗಳು ಕಂಡುಬಂದಿರುವುದರಿಂದ ಇಬ್ಬರನ್ನೂ ತಪಾಸಣೆಗೆ ಒಳಪಡಿಸಿದ್ದೆವು.

  ನಾವೆಲ್ಲರೂ ಒಂದೇ ಕುಟುಂಬ, ಒಗ್ಗಟ್ಟಿನಿಂದ ಹೋರಾಡೋಣ ಎಂದ ಶಾರುಖ್ ಖಾನ್ನಾವೆಲ್ಲರೂ ಒಂದೇ ಕುಟುಂಬ, ಒಗ್ಗಟ್ಟಿನಿಂದ ಹೋರಾಡೋಣ ಎಂದ ಶಾರುಖ್ ಖಾನ್

  ಬಾಲಿವುಡ್ ನಟಿ ಜೋಯಾ

  ಬಾಲಿವುಡ್ ನಟಿ ಜೋಯಾ

  ಶಾರುಖ್ ಖಾನ್‌ಗೆ ಆಪ್ತರಾಗಿರುವ ಕರೀಮ್ ಮೊರಾನಿ, 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾವನ್ನು ನಿರ್ಮಿಸಿದ್ದರು. ಜೋಯಾ ಮೊರಾನಿ ಶಾರುಖ್ ಖಾನ್ ನಿರ್ಮಾಣದ 'ಆಲ್ವೇಸ್ ಕಭಿ ಕಭಿ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. 'ಭಾಗ್ ಜಾನಿ', 'ಮಸ್ತಾನ್' ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

  English summary
  Bollywood producer Karim Morani's twin daughters Shaza and Zoa both were tested coronavirus positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X