For Quick Alerts
  ALLOW NOTIFICATIONS  
  For Daily Alerts

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು ಎಂದಿದ್ದ ವೈದ್ಯೆಯೇ ನಾಪತ್ತೆ!

  |

  ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮಾನಸಿಕ ಖಿನ್ನತೆ, ಬೈಪೊಲಾರ್ ಡಿಸಾರ್ಡರ್ ಇತ್ತು. ಅವರನ್ನು ರಿಯಾ ಚಕ್ರವರ್ತಿ ತಾಯಿಯಂತೆ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ರಿಯಾ ಅವರೇ ಸುಶಾಂತ್ ಚಿಕಿತ್ಸೆಯ ಸಂಗತಿಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಟಿವಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದ ಮನೋವೈದ್ಯೆ ಸುಸಾನ್ ವಾಲ್ಕರ್ ಮೊಫ್ಫತ್ ನಾಪತ್ತೆಯಾಗಿದ್ದಾರೆ.

  Sushant ತಂದೆ ಪ್ರಕಾರ ಕೊಲೆ , Police report ಪ್ರಕಾರ ಆತ್ಮಹತ್ಯೆ | Filmibeat Kannada

  ಸುಸಾನ್ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸುಶಾಂತ್ ಅವರಿಗೆ ಆಪ್ತರಾಗಿದ್ದ ಅನೇಕರು ಅವರಲ್ಲಿ ಯಾವುದೇ ಮಾನಸಿಕ ಸಮಸ್ಯೆ ಇರಲಿಲ್ಲ ಎಂದು ಹೇಳುತ್ತಿರುವಾಗ, ರಿಯಾ ಚಕ್ರವರ್ತಿ ಹಾಗೂ ಮುಂಬೈ ಪೊಲೀಸರು ಸೇರಿದಂತೆ ಅನೇಕರು ಅವರಲ್ಲಿ ಬೈಪೊಲಾರ್ ಡಿಸಾರ್ಡರ್ ಇತ್ತು. ಪರೋನಿಯಾ ಎಂಬ ಮತ್ತೊಂದು ಭೀಕರ ಸಮಸ್ಯೆಯೂ ಕಾಡುತ್ತಿತ್ತು ಎಂದು ಪ್ರತಿಪಾದಿಸುತ್ತಿದ್ದಾರೆ. ಅದಕ್ಕೆ ಬೆಂಬಲ ಎಂಬಂತೆ ವೈದ್ಯೆ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಅವರು ಮತ್ತೆ ಕಾಣಿಸಿಕೊಂಡಿಲ್ಲ. ಮುಂದೆ ಓದಿ...

  ವೈದ್ಯೆ ಬಗ್ಗೆ ಹೆಚ್ಚಿದ ಅನುಮಾನ

  ವೈದ್ಯೆ ಬಗ್ಗೆ ಹೆಚ್ಚಿದ ಅನುಮಾನ

  ಸುಶಾಂತ್ ಅವರಿಗೆ ಬೈಪೊಲಾರ್ ಡಿಸಾರ್ಡರ್ ಮತ್ತು ಮಾನಸಿಕ ಖಿನ್ನತೆ ಸೇರಿದಂತೆ ವಿವಿಧ ಸಮಸ್ಯೆಗಳು ಇದ್ದವು ಎಂದು ಹೇಳಿಕೆ ನೀಡಿದ್ದ ವೈದ್ಯೆ ಸುಸಾನ್ ಮೊಫತ್ ಅವರ ಲಿಂಕ್ಡ್ ಇನ್ ಖಾತೆಯನ್ನು ನೆಟ್ಟಿಗರು ಜಾಲಾಡಿದ್ದರು. ಆಕೆ ಈ ಚಿಕಿತ್ಸೆಗಳಿಗೆ ನೀಡುವಷ್ಟು ಪರಿಣತರಾಗಿರಲಿಲ್ಲ ಎಂದು ಆರೋಪಿಸಿದ್ದರು. ಸುಸಾನ್ ಅವರಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲ. ಅವರೊಬ್ಬ ಕೌನ್ಸಲರ್ ಅಷ್ಟೇ ಎಂದು ಹೇಳಿದ್ದರು.

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು, ರಿಯಾ ಅಮ್ಮನಂತೆ ನೋಡಿಕೊಳ್ಳುತ್ತಿದ್ದರು ಎಂದ ವೈದ್ಯೆಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು, ರಿಯಾ ಅಮ್ಮನಂತೆ ನೋಡಿಕೊಳ್ಳುತ್ತಿದ್ದರು ಎಂದ ವೈದ್ಯೆ

  ಲಿಂಕ್ಡ್ ಇನ್ ಖಾತೆ

  ಲಿಂಕ್ಡ್ ಇನ್ ಖಾತೆ

  ಈ ಸಂದರ್ಶನ ಪ್ರಸಾರವಾದ ಮರುದಿನವೇ ಸುಸಾನ್ ವಾಕರ್ ತಮ್ಮ ಲಿಂಕ್ಡ್ ಇನ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವುದಾಗಿ ಹೇಳಿರುವ ಸುಸಾನ್, ಮುಂಬೈನಲ್ಲಿ ನೆಲೆಸಿದ್ದಾರೆ. ಸುಶಾಂತ್ ಪ್ರಕರಣದಲ್ಲಿ ಹೇಳಿಕೆ ನೀಡಿದ ಮರುದಿನವೇ ಅವರು ಖಾತೆ ಡಿಲೀಟ್ ಮಾಡಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ. ಸುಸಾನ್ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

  ರಿಯಾ ವಿರುದ್ಧ ಸಂಚು ನಡೆಯುತ್ತಿದೆ

  ರಿಯಾ ವಿರುದ್ಧ ಸಂಚು ನಡೆಯುತ್ತಿದೆ

  ರಿಯಾ ವಿರುದ್ಧ ಎಲ್ಲರೂ ತಪ್ಪು ಮಾಹಿತಿ ಹರಡುತ್ತಿರುವಾಗ ಹಾಗೂ ಸಂಚು ಮಾಡುತ್ತಿರುವಾಗ ಸುಮ್ಮನೆ ಇರುವುದು ಸಾಧ್ಯವಿಲ್ಲ. ಹೀಗಾಗಿ ವಾಸ್ತವ ತಿಳಿಸುವುದು ನನ್ನ ಕರ್ತವ್ಯ. ಹಾಗಾಗಿ ಮಾಧ್ಯಮದ ಮುಂದೆ ಬಂದಿದ್ದೇನೆ. ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಸೈಕೋಥೆರಪಿಸ್ಟ್ ಆಗಿರುವ ನಾನು 2019ರ ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಸುಶಾಂತ್ ಹಾಗೂ ರಿಯಾ ಅವರನ್ನು ಭೇಟಿಯಾಗಿದ್ದೇನೆ ಎಂದು ಸುಸಾನ್ ಹೇಳಿದ್ದರು.

  ಈ ಎರಡು ಭೀಕರ ಕಾಯಿಲೆಗಳಿಂದ ಬಳಲುತ್ತಿದ್ದರೇ ಸುಶಾಂತ್ ಸಿಂಗ್ ರಜಪೂತ್?ಈ ಎರಡು ಭೀಕರ ಕಾಯಿಲೆಗಳಿಂದ ಬಳಲುತ್ತಿದ್ದರೇ ಸುಶಾಂತ್ ಸಿಂಗ್ ರಜಪೂತ್?

  ಅಮ್ಮನಂತೆ ನೋಡಿಕೊಂಡಿದ್ದರು

  ಅಮ್ಮನಂತೆ ನೋಡಿಕೊಂಡಿದ್ದರು

  ಸುಶಾಂತ್ ಖಿನ್ನತೆ ಹಾಗೂ ಹೈಪೋಮೇನಿಯಾದಿಂದ ಬಳಲುತ್ತಿದ್ದರು. ಅವರಿಗೆ ಬೆಂಬಲವಾಗಿ ರಿಯಾ ಇದ್ದರು. ಅಮ್ಮನ ಹಾಗೆ ಪ್ರೀತಿ ಮತ್ತು ಕಾಳಜಿ ತೋರಿಸುತ್ತಿದ್ದದ್ದನ್ನು ಕಂಡು ಅಚ್ಚರಿಯಾಗಿತ್ತು. ಸುಶಾಂತ್ ಚಿಕಿತ್ಸೆಗೆ ಭಯ ಪಡುವಾಗ ರಿಯಾ ಧೈರ್ಯ ತುಂಬುತ್ತಿದ್ದರು ಎಂದು ಸುಸಾನ್ ಹೇಳಿಕೆ ನೀಡಿದ್ದರು.

  English summary
  Psychotherapist Susan Walker Moffat who said Sushant Singh Rajput had bipolar disorder and depression has deleted her Linkdin account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X