ಬಾಹುಬಲಿ ಸಿರೀಸ್ ಹಾಗೂ 3 ಈಡಿಯಟ್ಸ್‌ಗಿಂತೂ 'ಪುಷ್ಪ' ಗ್ರೇಟ್ ಎಂದ ಬಾಲಿವುಡ್ ನಟ ಆಮಿರ್ ಖಾನ್

ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಕಪ್ಪು ಕುದುರೆ ಎಂದು ಸಾಭೀತಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ ಅನ್ನು ಚಿಂದಿ ಉಡಾಯಿಸಿದೆ. ಅದರಲ್ಲೂ ಹಿಂದಿಗೆ ಡಬ್ ಮಾಡಿದ ಸಿನಿಮಾವಂತೂ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ವಿಶೇಷ ಅಂದರೆ, 'ಪುಷ್ಪ' ಗಳಿಕೆ ಬಾಲಿವುಡ್ ನಟ ಆಮಿರ್ ಖಾನ್‌ಗೆ ಅಚ್ಚರಿ ಮೂಡಿಸಿದೆ.

'ಪುಷ್ಪ' ಸಿನಿಮಾ ಬಿಡುಗಡೆಯಾದಾಗ ಸಾಕಷ್ಟು ಸವಾಲು ಎದುರಾಗಿತ್ತು. ಹಾಲಿವುಡ್ ಸಿನಿಮಾ ಸ್ಪೈಡರ್ ಮ್ಯಾನ್ ಭಾರತ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಇನ್ನೊಂದು ಕಡೆ ರಣ್‌ವೀರ್ ಸಿಂಗ್ ಅಭಿನಯದ 83 ಕೂಡ ಕ್ಯೂನಲ್ಲಿತ್ತು. ಇಷ್ಟೊಂದು ಕಾಂಪಿಟೇಷನ್‌ಗಳ ಮಧ್ಯೆ 'ಪುಷ್ಪ' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ. ಈ ಕಾರಣಕ್ಕೆ ಆಮಿರ್ ಖಾನ್ ಬಾಹುಬಲಿ, 3 ಈಡಿಯಟ್ಸ್‌ಗಿಂತೂ ಗ್ರೇಟ್ ಎಂದಿದ್ದಾರೆ.

 ಬಾಹುಬಲಿ- 3 ಈಡಿಯಟ್ಸ್‌ಗಿಂತಲೂ 'ಪುಷ್ಪ' ಗ್ರೇಟ್

ಬಾಹುಬಲಿ- 3 ಈಡಿಯಟ್ಸ್‌ಗಿಂತಲೂ 'ಪುಷ್ಪ' ಗ್ರೇಟ್

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ಗೆದ್ದಿದ್ದಕ್ಕೆ ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗುತ್ತಿದೆ. ಕೆಲವೆಡೆ ಥಿಯೇಟರ್ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿತ್ತು. ಇನ್ನೊಂದು ಕಡೆ ಕಾಂಪಿಟೇಷನ್. ಇವೆಲ್ಲವುಗಳ ಹೊರತಾಗಿಯೂ 'ಪುಷ್ಪ' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 80 ಕೋಟಿ ಕಲೆ ಹಾಕಿತ್ತು. ಅಲ್ಲು ಅರ್ಜುನ್ ಮೊದಲ ಫ್ಯಾನ್ ಇಂಡಿಯಾ ಸಿನಿಮಾ ಹಿಂದಿಯಲ್ಲಿ ದೊಡ್ಡ ಮೊತ್ತ ಕಲೆ ಹಾಕಿದ್ದು ಆಮಿರ್ ಖಾನ್ ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಬಾಹುಬಲಿ ಸಿರೀಸ್ ಹಾಗೂ 3 ಈಡಿಯಟ್ಸ್ ಗಿಂತಲೂ ಹೆಚ್ಚು ಯಶಸ್ಸು ಸಿಕ್ಕಿದೆ ಎಂದಿದ್ದಾರೆ.

 ಪುಷ್ಪ ಬಗ್ಗೆ ಆಮಿರ್ ಖಾನ್ ಫಾರ್ಮೂಲವೇನು?

ಪುಷ್ಪ ಬಗ್ಗೆ ಆಮಿರ್ ಖಾನ್ ಫಾರ್ಮೂಲವೇನು?

ಬಾಕ್ಸಾಫೀಸ್ ಬಗ್ಗೆ ಆಮಿರ್ ಖಾನ್ ಫಾರ್ಮೂಲ ಬೇರೆನೇ ಹೇಳುತ್ತೆ. " ಯಶಸ್ಸನ್ನು ಅಳೆಯಲು ವೀಕೆಂಡ್ ಗಳಿಕೆ ಜೊತೆಗೆ ಒಟ್ಟು ಗಳಿಕೆಯನ್ನು ಹೋಲಿಕೆ ಮಾಡಬೇಕಾಗುತ್ತೆ. 3 ಈಡಿಯಟ್ಸ್ ವೀಕೆಂಡ್‌ನಲ್ಲಿ 40 ಕೋಟಿ ಗಳಿಸಿತ್ತು. ಒಟ್ಟು 202 ಕೋಟಿ ಬ್ಯುಸಿನೆಸ್ ಮಾಡಿತ್ತು. 'ಪುಷ್ಪ' ಸಿನಿಮಾದ ಗಳಿಕೆಯನ್ನು ವೀಕೆಂಡ್‌ಗಳನ್ನು 5 ರಿಂದ ಗುಣಾಕಾರ ಮಾಡಿದರೆ, ಅದರ ಗಳಿಕೆ ಅತ್ಯುತ್ತಮ. ಇದರ ಪ್ರಕಾರ, ಸಿನಿಮಾ ನೋಡಲು ಜನರು ಪದೇ ಪದೇ ಚಿತ್ರಮಂದಿರಕ್ಕೆ ಹೋಗಿದ್ದಾರೆ ಎಂದರ್ಥ. ಸಿನಿಮಾ ಮೂರು ದಿನದಲ್ಲಿ ನೂರು ಕೋಟಿ ಮಾಡಿದ್ದು, ಅದರ ಒಟ್ಟು ಗಳಿಕೆ 200 ಕೋಟಿ ಆದರೆ ಆ ಸಿನಿಮಾ ಚೆನ್ನಾಗಿಲ್ಲ ಎಂದರ್ಥ. ಎಂಬುದು ಆಮಿರ್ ಖಾನ್ ವಾದ.

 ಓಟಿಟಿಗೆ ಲಗ್ಗೆ ಇಟ್ಟ ಅಲ್ಲು 'ಪುಷ್ಪ'

ಓಟಿಟಿಗೆ ಲಗ್ಗೆ ಇಟ್ಟ ಅಲ್ಲು 'ಪುಷ್ಪ'

'ಪುಷ್ಪ' ಸಿನಿಮಾ ಥಿಯೇಟರ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಕಾಣುತ್ತಿತ್ತು. ಹೀಗಿರುವಾಗಲೇ ಸಿನಿಮಾ ಓಟಿಟಿಯಲ್ಲಿ ತೆರೆಕಂಡಿತ್ತು. ಸಿನಿಮಾದ ಗಳಿಕೆ ಚೆನ್ನಾಗಿರುವಾಗಲೇ ಆಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. ಪುಷ್ಪ ಬಾಕ್ಸಾಫೀಸ್‌ನಲ್ಲಿ ಸುಮಾರು 300 ಕೋಟಿ ಗಳಿಕೆ ಕಂಡಿತ್ತು. ಹೀಗಿದ್ದರೂ ಮೊದಲೇ ಕಮಿಟ್ಮೆಂಟ್ ಮಾಡಿಕೊಂಡಿದ್ದರಿಂದ ಅನಿವಾರ್ಯವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕಾಗಿ ಬಂದಿದೆ.

 ಅಲ್ಲು, ಸಮಂತಾ, ರಶ್ಮಿಕಾ ಗೆಲುವಿನ ರೂವಾರಿಗಳು

ಅಲ್ಲು, ಸಮಂತಾ, ರಶ್ಮಿಕಾ ಗೆಲುವಿನ ರೂವಾರಿಗಳು

ಆಮಿರ್ ಖಾನ್ ಮೆಚ್ಚಿದ ಈ ಸಿನಿಮಾದ ರೂವಾರಿಗಳು ಅಲ್ಲು ಅರ್ಜುನ್. ಇದೇ ಮೊದಲ ಬಾರಿಗೆ ಇಂತಹದ್ದೊಂದು ಪಾತ್ರದಲ್ಲಿ ಸ್ಟೈಲಿಷ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಡಿಗ್ಲಾಮರ್ ರೋಲ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಸಮಂತಾ ಐಟಂ ಸಾಂಗ್ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಅದರಂತೆಯೇ ಆಂಧ್ರ, ತೆಲಂಗಾಣದಲ್ಲಿ 'ಪುಷ್ಪ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ.

More from Filmibeat

English summary
Pushpa collection is bigger than Baahubali and 3idoits says Aamir Khan. According to Aamir Khan’s Box Office Formula, Pushpa is now a bigger success than Baahubali - The Beginning, Baahubali - The Conclusion and 3 Idiots.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X