ಸಲ್ಲು ಜೊತೆ 'ರೇಸ್' ಗಿಳಿದ ಬಾಲಿವುಡ್ ಬಿಗ್ ಸ್ಟಾರ್ಸ್
ರೇಸ್, ರೇಸ್ 2 ನಂತರ ರೇಸ್ 3 ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಹಿಂದೆ ಎರಡು ಸಿನಿಮಾಗಳು ಹುಟ್ಟಿಸಿದಷ್ಟೇ ನಿರೀಕ್ಷೆ ಟ್ರೇಲರ್ ನೋಡಿದಾಗ ಪ್ರೇಕ್ಷಕರಲ್ಲಿ ಮೂಡುತ್ತದೆ. ಸಲ್ಮಾನ್ ಖಾನ್ ರೇಸ್ 3 ಚಿತ್ರದ ನಾಯಕನಾಗಿದ್ದು ಪ್ರತಿ ವರ್ಷದಂತೆ ಈದ್ ಹಬ್ಬಕ್ಕೆ ಸಲ್ಲು ಅಭಿನಯದ ಸಿನಿಮಾ ಬಿಡುಗಡೆ ಆಗಲಿದೆ.
ರೆಮೋ ಡಿಸೋಜಾ ಚಿತ್ರವನ್ನ ನಿರ್ದೇಶನ ಮಾಡಿದ್ದು ಚಿತ್ರದಲ್ಲಿ ಹೆಚ್ಚು ಆಕ್ಷನ್ ಸೀನ್ ಗಳಿವೆ ಎನ್ನುವ ಸೂಚನೆಯನ್ನು ನೀಡಿದೆ ಚಿತ್ರತಂಡ. ಸಲ್ಲು ಜೊತೆಯಾಗಿ ಜಾಕ್ವಲಿನ್ ಫರ್ನಾಂಡಿಸ್ ಅಭಿನಯ ಮಾಡುತ್ತಿದ್ದು 'ರೇಸ್ 3' ಸಿನಿಮಾದಲ್ಲಿ ಅದ್ದೂರಿ ತಾರಾಬಳಗವಿದೆ.

ಅನಿಲ್ ಕಪೂರ್ ಡಿಫ್ರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಬಾಬಿ ಡಿಯೋಲ್, ಡೈಸಿ ಶಾ, ಸಾಕಿಬ್ ಸಲೀಂ ಇನ್ನು ಅನೇಕರು ರೇಸ್ 3 ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ. ಅಬು-ದಾಬಿ, ಕಾಶ್ಮೀರಾ, ಲೇ ಲಡಾಕ್, ಮುಂಬೈ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರೇಸ್ 3 ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಈಗಾಗಲೇ ನಾಲ್ಕು ಚಿತ್ರಗಳನ್ನ ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿರುವ ರೆಮೋ ಡಿಸೋಜಾ ಇದೇ ಮೊದಲ ಬಾರಿಗೆ ಸಲ್ಮಾನ್ ಕಾನ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











