"ನಾನು ಆಗ ಗರ್ಭಿಣಿ.. ಆದರೂ ಬಿಗಿಯಾದ ಬಟ್ಟೆ ಧರಿಸಲು ಒತ್ತಡ ಹಾಕಿದ್ದ ನಿರ್ಮಾಪಕ";'ಕಬಾಲಿ' ನಟಿ
ಭಾರತೀಯ ಚಿತ್ರರಂಗದಲ್ಲಿರುವ ಕೆಲವು ಅದ್ಭುತ ನಟಿಯರಲ್ಲಿ ರಾಧಿಕಾ ಆಪ್ಟೆ ಕೂಡ ಒಬ್ಬರು. ಈ ನಟಿ ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಸಿನಿಮಾ ಮಂದಿಯನ್ನು ಚರ್ಚೆಗೆ ಒಳಪಡಿಸುತ್ತವೆ. ಕಮರ್ಷಿಯಲ್ ಹಾಗೂ ಕಂಟೆಂಟ್ ಎರಡೂ ಪ್ರಕಾರದ ಸಿನಿಮಾಗಳಲ್ಲಿ ನಟಿಸಿದ ಸೈ ಎನಿಸಿಕೊಂಡಿದ್ದಾರೆ. ಹಿಂದಿ, ಮರಾಠಿ, ಬೆಂಗಾಲಿ, ತಮಿಳು ಹಾಗೂ ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ರಾಧಿಕಾ ಆಪ್ಟೆ ನಟಿಸಿದ್ದಾರೆ. ಇವರ ಕೆಲವು ಸಿನಿಮಾಗಳು ಭಾರತದಾದ್ಯಂತ ಚರ್ಚೆಯಾಗಿವೆ.
ದಕ್ಷಿಣ ಭಾರತದ ಜನರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಕಬಾಲಿ' ಸಿನಿಮಾದ ಮೂಲಕ ಹೆಚ್ಚು ಚಿರಪರಿಚಿತ. ರಜನಿಯ ಪತ್ನಿ ಕುಮುಧ ಪಾತ್ರದಲ್ಲಿ ನಟಿಸಿ ಸೌತ್‌ನಲ್ಲೂ ಮಾಸ್ ಆಡಿಯನ್ಸ್‌ಗೆ ಇಷ್ಟ ಆಗಿದ್ದರು. ಇತ್ತೀಚೆಗೆ ಇವರು ಬಾಲಿವುಡ್‌ನ ಮತ್ತೊಬ್ಬ ನಟಿ ನೇಹಾ ಧೂಪಿಯಾ ಅವರ 'ಫ್ರೀಡಂ ಟು ಫೀಡ್' ಸಂವಾದದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಾಧಿಕಾ ಗರ್ಭಿಣಿಯಾಗಿದ್ದಾಗ ಭಾರತದ ನಿರ್ಮಾಪಕರೊಬ್ಬರು ನಡೆದುಕೊಂಡು ರೀತಿಯನ್ನು ಹಂಚಿಕೊಂಡಿದ್ದಾರೆ.

ನಟಿಯೊಬ್ಬರು ಗರ್ಭಿಣಿ ಅಂತ ಗೊತ್ತಾದರೆ, ಭಾರತದ ಸಿನಿಮಾ ಮಂದಿಗೆ ಹೇಗೆ ನಡೆದುಕೊಳ್ಳುತ್ತಾರೆಂದು ಈ ಸಂವಾದದಲ್ಲಿ ವಿವರಿಸಿದ್ದಾರೆ. ಹಾಗೇ ಇದೇ ವೇಳೆ ಹಾಲಿವುಡ್ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದರು. ಆ ಸಿನಿಮಾದ ನಿರ್ದೇಶಕ ಇವರನ್ನು ನಡೆಸಿಕೊಂಡ ರೀತಿಯನ್ನು ಹೊಗಳಿದ್ದಾರೆ. ಅಷ್ಟಕ್ಕೂ ಭಾರತದ ನಿರ್ಮಾಪಕ ಕೊಟ್ಟ ಹಿಂಸೆಯನ್ನು ನಟಿ ರಾಧಿಕಾ ಆಷ್ಟೆ ವಿವರಿಸಿದ್ದಾರೆ.
ಮುಂದೆ ಓದಿ
ನೇಹಾ ಧೂಪಿಯಾ 'ಫ್ರೀಡಂ ಟು ಫೀಡ್' ಸಂವಾದದಲ್ಲಿ ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ ಗರ್ಭಿಣಿಯಾಗಿದ್ದು ನಿರ್ಮಾಪಕನಿಗೆ ಹಿಡಿಸಲಿಲ್ಲ
ಗರ್ಭಿಣಿಯಾಗಿದ್ದರೂ ಬಿಗಿ ಬಟ್ಟೆಗಳನ್ನು ಧರಿಸಲು ಒತ್ತಡ
ವೈದ್ಯರನ್ನೂ ಭೇಟಿ ಮಾಡುವುದಕ್ಕೂ ಬಿಟ್ಟಿರಲಿಲ್ಲ ನಿರ್ಮಾಪಕ
ರಾಧಿಕಾ ಆಪ್ಟೆ ತಮ್ಮ ಪ್ರಗ್ನೆನ್ಸಿಯ ಸುದ್ದಿಯನ್ನು ಹೊರ ಜಗತ್ತಿಗೆ ಬಿಟ್ಟುಕೊಟ್ಟಿರಲಿಲ್ಲ. ಕೆಲವು ತಿಂಗಳುಗಳ ಕಾಲ ಗೌಪ್ಯವಾಗಿಯೇ ಇಟ್ಟುಕೊಂಡಿದ್ದರು. ಆದರೆ, ಅವರೇ ನಟಿಸಿದ 'ಸಿಸ್ಟರ್ ಮಿಡ್‌ನೈಟ್' ಪ್ರೀಮಿಯರ್ ಶೋ ವೇಳೆ ಬೇಬಿ ಬಂಪ್ ಮೂಲಕ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗಿದ್ದರು. ಈ ಮೂಲಕ ಚಿತ್ರರಂಗಕ್ಕೆ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದರು. ಅಂದು ಖುಷಿಯೊಂದು ಜಗತ್ತಿಗೆ ತನ್ನ ತಾಯ್ತನದ ಬಗ್ಗೆ ನಟಿ ಸಂತೋಷವನ್ನು ಹಂಚಿಕೊಂಡಿದ್ದರು. ಆದರೆ, ಈ ಜರ್ನಿಯ ಹಿಂದೆ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದರು.
ನೇಹಾ ಧೂಪಿಯಾ 'ಫ್ರೀಡಂ ಟು ಫೀಡ್' ಸಂವಾದದಲ್ಲಿ ಪ್ರೆಗ್ನೆನ್ಸಿ ವೇಳೆ ಆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಒಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿರುವಾಗ ಅವರು ಗರ್ಭಿಣಿಯಾಗಿದ್ದಾರೆಂದು ಗೊತ್ತಾಗಿತ್ತು. ಈ ವಿಷಯ ಆ ಪ್ರಾಜೆಕ್ಟ್‌ನ ನಿರ್ಮಾಪಕನಿಗೆ ತಿಳಿದಾಗ ಆತ ಖುಷಿ ಪಟ್ಟಿರಲಿಲ್ಲ. ಬದಲಾಗಿ ನಟಿಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ. ಅದನ್ನು ಈ ಸಂವಾದದಲ್ಲಿ ರಿವೀಲ್ ಮಾಡಿದ್ದಾರೆ. "ನಾನು ಪ್ರೆಗ್ನೆಂಟ್ ಆಗಿದ್ದು ಆ ನಿರ್ಮಾಪಕನಿಗೆ ಖುಷಿ ಕೊಟ್ಟಿರಲಿಲ್ಲ. ಅಂತಹ ಸ್ಥಿತಿಯಲ್ಲೂ ಆತ ನನಗೆ ಬಿಗಿಯಾದ ಬಟ್ಟೆಯನ್ನು ಧರಿಸುವಂತೆ ಒತ್ತಡ ಹಾಕಿದ್ದ. ವೈದ್ಯರನ್ನು ಭೇಟಿ ಮಾಡುವುದಕ್ಕೂ ಅವಕಾಶ ಕೊಟ್ಟಿರಲಿಲ್ಲ. ಅದು ನಿಜವಾಗಿಯೂ ನನಗೆ ನೋವನ್ನುಂಟು ಮಾಡಿತ್ತು" ಎಂದು ನಟಿ ರಾಧಿಕಾ ಆಪ್ಟೆ ಹೇಳಿಕೊಂಡಿದ್ದಾರೆ.

ರಾಧಿಕಾ ಆಪ್ಟೆ ಗರ್ಭಿಣಿಯಾಗುವುದಕ್ಕೂ ಮುನ್ನ ಕೆಲವು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದರು. ಅವುಗಳನ್ನು ಅವರು ಮುಗಿಸಿಕೊಡಲೇಬೇಕಿತ್ತು. ಹೀಗಾಗಿ ಕಷ್ಟ ಆಗುತ್ತಿದ್ದರೂ ಅವರು ಕೆಲಸ ಮಾಡಲೇಬೇಕಿತ್ತು. ಭಾರತದ ಪ್ರಾಜೆಕ್ಟ್‌ನಲ್ಲಿ ನಟಿಸುವಾಗ ಕಹಿ ಅನುಭವ ಆದರೆ, ಅಂತರಾಷ್ಟ್ರೀಯ ಪ್ರಾಜೆಕ್ಟ್‌ನಲ್ಲಿ ಅವರಿಗೆ ಬೆಂಬಲ ಸಿಕ್ಕಿತ್ತು. ಆ ಅನುಭವವನ್ನೂ ಹಂಚಿಕೊಂಡಿದ್ದಾರೆ.
"ಅಂತರಾಷ್ಟ್ರೀಯ ಪ್ರಾಜೆಕ್ಟ್‌ನ ನಿರ್ದೇಶಕರು ಸುಲಭವಾಗಿ ತೆಗೆದುಕೊಂಡರು. ಶೂಟಿಂಗ್ ಮುಗಿಯುವ ವೇಳೆಗೆ ನನ್ನ ದೇಹದಲ್ಲಿ ಬದಲಾವಣೆಗಳಾಗಬಹುದು ಎಂದು ನಾನು ಹೇಳಿದ್ದೆ. ಆಗ ಅವರು ನಗುತ್ತಾ, ಪರ್ವಾಗಿಲ್ಲ.. ನೀವು ಗರ್ಭಿಣಿಯಾಗಿದ್ದೀರಿ ಎಂದು ಹೇಳಿದರು. ಆ ಒಂದು ವಾಕ್ಯ ನನಗೆ ಸಾಕಾಗಿತ್ತು" ಎಂದು ರಾಧಿಕಾ ಆಪ್ಟೆ ಈ ಸಂವಾದದಲ್ಲಿ ಹೇಳಿಕೊಂಡಿದ್ದಾರೆ. ಹಾಗೇ ತನಗೆ ವಿಶೇಷವಾದ ಸೌಲಭ್ಯ ಬೇಕಾಗಿರಲಿಲ್ಲ. ಕನಿಷ್ಠ ಸಹಾನುಭೂತಿ ಇರಬೇಕೆಂದು ನಿರೀಕ್ಷೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ರಾಧಿಕಾ ಅಪ್ಟೆ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅನ್ನು ವಿವಾಹವಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಕೆಲಸದ ಒತ್ತಡದ ನಡುವೆ ತಾಯ್ತನವನ್ನೂ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











