ಉಪ್ಪಿ ಸಿನಿಮಾದ ಖಳನಾಯಕ ಮುಕುಲ್ ದೇವ್ ಸಾವಿಗೆ ಕಾರಣ ಬಿಚ್ಚಿಟ್ಟ ಸಹೋದರ ರಾಹುಲ್ ದೇವ್; ಏನದು?

ಬಾಲಿವುಡ್‌ ನಟ ಮುಕುಲ್ ದೇವ್ ಇತ್ತೀಚೆಗೆ ನಿಧನ ಹೊಂದಿದ್ದರು. ಭಾರತದ ಹಲವು ಭಾಷೆಗಳಲ್ಲಿ ನಟಿಸಿದ್ದ ಮುಕುಲ್ ದೇವ್ ಜನಪ್ರಿಯ ನಟನಾಗಿದ್ದರು. ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ 'ರಜನಿ' ಸಿನಿಮಾದಲ್ಲಿ ಮುಕುಲ್ ದೇವ್ ಖಳನಾಯಕನಾಗಿ ನಟಿಸಿದ್ದರು. ಇತ್ತೀಚೆಗೆ ಸಿನಿಮಾದಿಂದ ದೂರವಿದ್ದ ನಟ ದಿಢೀರನೇ ಕೊನೆಯುಸಿರೆಳೆದಿದ್ದು ಸಿನಿಮಾ ಮಂದಿಗೆ ದೊಡ್ಡ ಅಘಾತ ನೀಡಿತ್ತು. ಫಿಟ್ ಆಗಿದ್ದ ನಟ ಅಗಲುವುದಕ್ಕೆ ಕಾರಣವೇನು? ಅನ್ನೋದು ಬೆಳಕಿಗೆ ಬಂದಿರಲಿಲ್ಲ.

ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟಿ ಮುಕುಲ್ ದೇವ್ ಅಗಲಿಕೆಯ ಬಳಿಕ ಒಂದಿಷ್ಟು ಸುದ್ದಿಗಳು ಓಡಾಡಿದ್ದವು. ಕೊನೆಯ ದಿನಗಳಲ್ಲಿ ಮುಕುಲ್ ದೇವ್ ಖಿನ್ನತೆಯಿಂದ ಬಳಲುತ್ತಿದ್ದರೆಂದು ಸುದ್ದಿ ಹಬ್ಬಿತ್ತು. ಮುಕುಲ್ ದೇವ್ ನಿಧನರಾದ ಹಲವು ದಿನಗಳ ಬಳಿಕ ಅವರ ಸಹೋದರ ರಾಹುಲ್ ದೇವ್ ತಮ್ಮನ ಸಾವಿಗೆ ಅಸಲಿ ಕಾರಣಗಳೇನು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಸಹೋದರ ಮುಕುಲ್ ದೇವ್ ಖಿನ್ನತೆಯಿಂದ ಸಾವನ್ನಪ್ಪಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

Rahul Dev revealed his brother Mukul Dev death reason that he was lonely and lost interest in life

ಮುಕುಲ್ ದೇವ್ ಅಗಲಿದ ಹಲವು ದಿನಗಳ ಬಳಿಕ ರಾಹುಲ್ ದೇವ್ ಟೈಮ್ಸ್ ಆಫ್ ಇಂಡಿಯಾಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ರಾಹುಲ್ ದೇವ್ ತನ್ನ ಸಹೋದರನಿಗೆ ಏನಾಗಿತ್ತು? ಅವರ ಸಾವಿಗೆ ಅಸಲಿ ಕಾರಣವೇನು? ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಅದೇನು ಅಂತ ನೋಡುವುದಾದರೇ.

ಆರು ವರ್ಷಗಳಿಂದ ದೆಹಲಿಯಲ್ಲಿ ವಾಸ

ಮುಕುಲ್ ದೇವ್ 2019ರಿಂದ ದೆಹಲಿಯಲ್ಲಿ ವಾಸವಿದ್ದರು. ಅಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪೋಷಕರನ್ನು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಬಾಲಿವುಡ್ ನಟ ಮುಕುಲ್ ದೇವ್ ಒಂಟಿಯಾಗಿದ್ದರು. ಸರಿಯಾದ ಸಮಯಕ್ಕೆ ಊಟವನ್ನು ಮಾಡುತ್ತಿರಲಿಲ್ಲ. ಈ ಕಾರಣದಿಂದಲೇ ಮುಕುಲ್ ದೇವ್ ಆರೋಗ್ಯ ಹದಗೆಟ್ಟಿತ್ತು ಎಂದು ಸಹೋದರ ರಾಹುಲ್ ದೇವ್ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ

ಸುಮಾರು ಮೂರು ದಶಕಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದ ಮುಕುಲ್ ದೇವ್ ಹಿಂದಿ, ಕನ್ನಡ, ತೆಲುಗು, ಪಂಜಾಬಿ, ಹಿಂದಿ, ಪಂಜಾಬಿ, ಗುಜರಾತಿ, ಬಂಗಾಳಿ, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಮೂರು ವರ್ಷ ಗ್ಯಾಪ್ ಕೊಟ್ಟು 2022ರಲ್ಲಿ 'ಅಂತ್ ದಿ ಎಂಡ್' ಎನ್ನುವ ಸ್ಮಾಲ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಸಿನಿಮಾದಿಂದ ದೂರ ಉಳಿದಿದ್ದರು. ಅಜಯ್ ದೇವಗನ್, ಸಂಜಯ್ ದತ್ ನಟಿಸಿರುವ 'ಸನ್ ಆಫ್ ಸರ್ದಾರ್ 2' ಮುಕುಲ್ ನಟಿಸಿದ ಕೊನೆಯ ಸಿನಿಮಾ. ಇದು ಇನ್ನೂ ಬಿಡುಗಡೆಯಾಗಬೇಕಿದೆ.

Rahul Dev revealed his brother Mukul Dev death reason that he was lonely and lost interest in life

ಮುಕುಲ್‌ಗೆ ಕಾಡುತ್ತಿತ್ತು ಒಂಟಿತನ

ಮುಕುಲ್ ದೇವ್ ಸಾವಿನ ಕುರಿತು ರಾಹುಲ್ ದೇವ್ ನೀಡಿದ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ತಂದೆಯ ಸಾವು ಮುಕುಲ್ ದೇವ್ ಮೇಲೆ ಪರಿಣಾಮ ಬೀರಿತ್ತು. ಇದರ ಹಿಂದೇನೆ ತಾಯಿಯ ಅಗಲಿಕೆ ಕೂಡ ಕಾಡಿತ್ತು. ಅದರಕ್ಕೂ ಹೆಚ್ಚಾಗಿ ಪತ್ನಿಯಿಂದ ಬೇರೆಯಾದ ಬಳಿಕ ಮುಕುಲ್ ದೇವ್ ಮತ್ತಷ್ಟು ಇನ್ನಷ್ಟು ಕುಸಿದು ಹೋಗಿದ್ದರು ಎಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಒಳ್ಳೊಳ್ಳೆ ಆಫರ್‌ಗಳು ಬಂದರೂ ಅವುಗಳೆಲ್ಲವನ್ನೂ ಮುಕುಲ್ ದೇವ್ ಕೈ ಬಿಟ್ಟಿದ್ದರು. ಹೆಚ್ಚಾಗಿ ಒಂಟಿಯಾಗಿ ಇರುವುದಕ್ಕೆ ಬಯಸಿದ್ದರು ಎಂದು ರಾಹುಲ್ ದೇವ್ ರಿವೀಲ್ ಮಾಡಿದ್ದಾರೆ.

ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿಲ್ಲ

ಸರಿಯಾದ ಸಮಯಕ್ಕೆ ಊಟ ಮಾಡುತ್ತಿರಲಿಲ್ಲ. ಅವರು ಜೀವನದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದರು ಎಂದು ರಾಹುಲ್ ದೇವ್ ಹೇಳಿದ್ದಾರೆ. ಅವರು ಫಿಟ್ ಆಗಿಲ್ಲ ಎಂದು ಹಲವು ಆರೋಪಗಳನ್ನು ಮಾಡಿದ್ದಾರೆ. ಅದ್ಯಾವುದೂ ನಿಜವಲ್ಲ. ಅವನಿಗೆ ಹಾಫ್ ಮ್ಯಾರಥಾನ್ ಓಡುವ ಸಾಮರ್ಥ್ಯವಿತ್ತು. ಆದರೆ, ಕೊನೆಯ ದಿನಗಳಲ್ಲಿ ಅವನ ಪರವಾಗಿ ಯಾರೂ ಇರಲಿಲ್ಲ. ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಇದ್ದಾಗ ಕನಿಷ್ಠ ಪಕ್ಷ ಯಾರೂ ಆಸ್ಪತ್ರೆಗೂ ಬಂದು ಭೇಟಿನೂ ಆಗಲಿಲ್ಲ. ವೈದ್ಯರು ಕೂಡ ಮುಕುಲ್ ದೇವ್ ಊಟ ಮಾಡದೆ ಮತ್ತು ಸರಿಯಾದ ಆಹಾರ ಪದ್ಧತಿ ಇಲ್ಲದ ಕಾರಣ ನಿಧನರಾಗಿದ್ದಾರೆಂದು ಹೇಳಿದ್ದಾಗಿ ರಾಹುಲ್ ದೇವ್ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Rahul Dev revealed his brother Mukul Dev death reason that he was lonely and lost interest in life.
Read more about: actor mukul dev death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X