Sourav Ganguly Biopic: ಲೀಕ್ ಆಗಿದ್ದೇ 2 ಫೋಟೊ.. ಸೌರವ್ ಗಂಗೂಲಿ ಬಯೋಪಿಕ್ ಹೀಗೆ ಟ್ರೋಲ್ ಆಗ್ಬೇಕಾ?

ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು. ಎರಡು ದಶಕಗಳ ಹಿಂದೆ ವಿಶ್ವ ಮಟ್ಟದಲ್ಲಿ ಪ್ರಬಲ ಪೈಪೋಟಿ ಕಟ್ಟುವಂತಹ ತಂಡ ಕಟ್ಟಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಕೊಲ್ಕತ್ತಾದ ದಾದಾ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಹೀಗಾಗಿ ಅವರ ಜೀವನವನ್ನು ಆಧರಿಸಿ ಕಳೆದ ಕೆಲವು ದಿನಗಳಿಂದ ಸದ್ದಿಲ್ಲದೆ ಬಯೋಪಿಕ್ ಶೂಟ್ ಆಗುತ್ತಿದೆ.

ಸೌರವ್ ಗಂಗೂಲಿ ಪಾತ್ರದಲ್ಲಿ ಬಾಲಿವುಡ್‌ನ ಟ್ಯಾಲೆಂಟೆಡ್ ನಟ ರಾಜ್‌ಕುಮಾರ್ ರಾವ್ ನಟಿಸುತ್ತಿದ್ದಾರೆ. ಈಗ ಈ ಸಿನಿಮಾದ ಮೇಕಿಂಗ್ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಅದ್ಯಾವಾಗ ಈ ಫೋಟೋ ಲೀಕ್ ಆಯ್ತೋ ಅಲ್ಲಿಂದ ನೆಟ್ಟಿಗರು ರಾಜ್‌ಕುಮಾರ್ ರಾವ್ ಹಾಗೂ ಸೌರವ್ ಗಂಗೂಲಿ ಬಯೋಪಿಕ್ ಅನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

Rajkummar Rao s leaked photo from Sourav Ganguly biopic triggered mixed response

ಸೌರವ್ ಗಂಗೂಲಿ ಬಯೋಪಿಕ್‌ಗೆ 'ದಾದಾ' ಅಂತ ಟೈಟಲ್ ಇಟ್ಕೊಂಡು ಮೇಕಿಂಗ್ ಶುರು ಮಾಡಿದ್ದಾರೆ. ಇಲ್ಲಿವರೆಗೂ ಚಿಕ್ಕದೊಂದು ಸುಳಿವನ್ನೂ ಕೂಡ ಬಿಟ್ಟು ಕೊಟ್ಟಿಲ್ಲ. ಆದ್ರೀಗ ಹೇಗೋ ಸಿನಿಮಾ ತಂಡದ ಕಣ್ತಪ್ಪಿ ಒಂದೆರಡು ಫೋಟೊಗಳು ಲೀಕ್ ಆಗಿದ್ದವು. ಅದು ಸಿನಿಮಾ ಬಗ್ಗೆ ಕುತೂಹಲ ಕೆರಳಿಸಬಹುದೆಂಬ ಊಹಿಸಲಾಗಿತ್ತು. ಆದರೆ, ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್‌ನ ಮತ್ತೊಬ್ಬ ಅದ್ಭುತ ನಟ ರಾಜ್‌ಕುಮಾರ್ ರಾವ್ ಈ ಬಯೋಪಿಕ್‌ನಲ್ಲಿ ಸೌರವ್ ಗಂಗೂಲಿ ಪಾತ್ರ ಮಾಡುತ್ತಿದ್ದಾರೆ. ಆದರೆ, ಲೀಕ್ ಆಗಿರುವ ಫೋಟೊದಲ್ಲಿ ಸೌರವ್ ಗಂಗೂಲಿಯ ಹಾಗೆ ರಾಜ್‌ಕುಮಾರ್ ರಾವ್ ಯಾವುದೇ ಆಂಗಲ್‌ನಲ್ಲೂ ಕಾಣಿಸುತ್ತಿಲ್ಲ ಅನ್ನೋದು ನೆಟ್ಟಿಗರ ವಾದ. ಹೀಗಾಗಿ ಫೋಟೊಗಳು ವೈರಲ್ ಆಗುತ್ತಿದ್ದಂತೆ ಟ್ರೋಲಿಗರಿಗೆ ಆಹಾರವಾಗಿಬಿಟ್ಟಿದೆ.

ರಾಜ್‌ಕುಮಾರ್ ರಾವ್ ಲುಕ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸೌರವ್ ಗಂಗೂಲಿಯವರನ್ನು ಹೋಲುತ್ತಿದ್ದಾರಾ? ಪ್ರಶ್ನೆ ಮಾಡುತ್ತಿದ್ದರೆ? ಇನ್ನು ಕೆಲವರು ರಾಜ್‌ಕುಮಾರ್ ರಾವ್ ಅವರ ಲುಕ್ ಅನ್ನು ಕಿಂಡಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸೌರವ್ ಗಂಗೂಲಿ ಲುಕ್ ಹಾಗೂ ಸ್ಟೈಲಿಂಗ್ ಅನ್ನು ಸರಿಯಾಗಿ ಮಾಡಿಲ್ಲ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಅಂದ್ಹಾಗೆ 'ದಾದಾ' ಸಿನಿಮಾ ತಂಡ ಕೊಲ್ಕತ್ತಾದ ಆರ್ಯನ್ ಕ್ಲಬ್ ಗ್ರೌಂಡ್ಸ್‌ನಲ್ಲಿ ಶೂಟಿಂಗ್ ಮಾಡುತ್ತಿದೆ. ಅಲ್ಲಿಂದಲೇ ಈ ಫೋಟೊ ಲೀಕ್ ಆಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಯಾವಾಗ ಫೋಟೊಗಳು ವೈರಲ್ ಆಗುವುದಕ್ಕೆ ಶುರುವಾಯ್ತೋ ಅಲ್ಲಿಂದ ಟ್ರೋಲಿಗರು ಅಲರ್ಟ್ ಆಗಿಬಿಟ್ಟಿದ್ದಾರೆ. ಒಬ್ಬರಂತೂ " ಇದು ಗಂಗೂಲಿದಾ? ಇಲ್ಲ ಗೌತಮ್ ಗಂಭೀರ್‌ದಾ? ಇದೆಂಥಾ ಲುಕ್?" ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರಂತೂ ಇದು " ಮಾರ್ಸ್‌ನಿಂದ ಬಂದ ಮುನಾಫ್ ಪಟೇಲ್" ಎಂದು ಕಾಲೆಳೆದಿದ್ದಾರೆ.

ಲೀಕ್ ಆದ ಫೋಟೊಗಳು ನೋಡಿ ಕೆಲ ನೆಟ್ಟಿಗರು ರಾಜ್‌ಕುಮಾರ್‌ ರಾವ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಸೌರವ್ ಗಂಗೂಲಿ ಬಯೋಪಿಕ್ ಅಂತಹ ಮತ್ತೊಂದು ಕಷ್ಟದ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ಇಂಡಿಯನ್ ಫಿಲ್ಮ್ ಮೇಕರ್ಸ್ ಸಮಸ್ಯೆನೇ ಅದು, ಬಯೋಪಿಕ್ ಮಾಡುವಾಗ ಸಬ್ಜೆಕ್ಟ್‌ಗಿಂತ ನಟರನ್ನು ಅವರಂತೆ ಕಾಣುವುದಕ್ಕೆ ಪ್ರಯತ್ನ ಪಡುತ್ತಾರೆ." ಎಂದು ಇನ್ನೊಬ್ಬರು ರಾಜ್‌ಕುಮಾರ್ ರಾವ್ ಬೆಂಬಲಕ್ಕೆ ನಿಂತಿದ್ದಾರೆ.

English summary
Rajkummar Rao’s leaked photo from Sourav Ganguly biopic triggered mixed response. Netizens trolling Rajkumar Rao appearance in the leaked pic.
Read more about: rajkumar rao biopic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X