ಬಿಗ್‌ಬಾಸ್ ಸೋಮಿ ಖಾನ್ ಜೊತೆ ರಾಖಿ ಸಾವಂತ್ ಮಾಜಿ ಪತಿ ಮದುವೆ; "ಇದೇ ನನ್ನ ಮೊದಲ ಮ್ಯಾರೇಜ್" ಎಂದ ಮೈಸೂರಿನ ಆದಿಲ್ ಖಾನ್

ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಹಾಗೂ ಮೈಸೂರಿನ ಆದಿಲ್ ಖಾನ್ ದುರಾನಿ ಮದುವೆ ಅವಾಂತರ ಕಳೆದ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ರಾಖಿ ಸಾವಂತ್ ತನ್ನ ಪತಿ ತನಗೆ ಮೋಸ ಮಾಡಿದ್ದಾನೆಂದು ಮೈಸೂರಿನವರೆಗೆ ಬಂದು ಹಂಗಾಮ ಸೃಷ್ಟಿಸಿದ್ದಳು. ಸದ್ಯ ಇಬ್ಬರ ನಡುವಿನ ವಿವಾದ ತಣ್ಣಗಾಗುತ್ತಿದ್ದಂತೆ ಆದಿಲ್ ಖಾನ್ ದುರಾನಿ ಮತ್ತೊಂದು ಮದುವೆ ಆಗಿದ್ದಾರೆ.

ಬಿಗ್‌ಬಾಸ್ ಹಿಂದಿ ಸೀಸನ್ 12ರ ಸ್ಪರ್ಧಿಯಾಗಿದ್ದ ಸೋಮಿ ಖಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ಎರಡು ಕುಟುಂಬದ ಆಪ್ತರ ಸಮ್ಮುಖದಲ್ಲಿ ಸದ್ದಿಲ್ಲದೆ ಮದುವೆಯಾಗಿದ್ದು, ಆ ಫೋಟೊಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗುರುವಾರ ರಾತ್ರಿ (ಮಾರ್ಚ್ 7) ಹಂಚಿಕೊಂಡಿದ್ದಾರೆ. ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ದುರಾನಿ ಹಾಗೂ ಸೋಮಿ ಖಾನ್ ಇಬ್ಬರೂ ಜಂಟಿಯಾಗಿ ಈ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Rakhi Sawant ex-husband Adil Khan Durrani Wedding with Bigg Boss 12 Somi Khan

ಕಳೆದ ವರ್ಷ ಮೈಸೂರಿನ ಆದಿಲ್ ಖಾನ್ ಹಾಗೂ ನಟಿ ರಾಖಿ ಸಾವಂತ್ ನಡುವಿನ ಕಿತ್ತಾಟ ಬೀದಿಗೆ ಬಂದಿತ್ತು. ಆದಿಲ್ ಖಾನ್ ದುರಾನಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ. ತನ್ನ ಬಳಿ ಹಣ ಪಡೆದು, ತಾಯಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಲಿಲ್ಲ. ಹೀಗಾಗಿ ಅವರು ನರಳಿ ಸಾವನ್ನಪ್ಪಿದ್ದಾರೆ. ತನ್ನ ಪತಿ ಆದಿಲ್ ಖಾನ್ ತನ್ನ ತಾಯಿಯನ್ನು ಕೊಂದಿದ್ದು ಎಂದು ಆರೋಪ ಮಾಡಿದ್ದರು. ಈ ಸಂಬಂಧ ಆದಿಲ್ ಖಾನ್ ವಿರುದ್ಧ ರಾಖಿ ಪೊಲೀಸರಿಗೆ ದೂರನ್ನೂ ನೀಡಿದ್ದರು.

ಆದಿಲ್ ಖಾನ್ ದುರಾನಿ ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎಂದು ಬಯಸಿದ್ದಾನೆ. ಹೀಗಾಗಿ ತನ್ನ ಬಳಸಿಕೊಳ್ಳಲು ಮದುವೆ ಆಗಿದ್ದಾನೆಂದು ರಾಖಿ ಸಾವಂತ್ ಆರೋಪ ಮಾಡಿದ್ದರು. ಈ ವೇಳೆ ರಾಖಿ ಸಾವಂತ್ ಹಾಗೂ ಆದಿಲ್ ಖಾನ್ ದುರಾನಿ ನಡುವೆ ಮದುವೆ ಬಗ್ಗೆನೇ ಒಂದಿಷ್ಟು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಆದಿಲ್ ಖಾನ್ ಮದುವೆ ಆಗಿಲ್ಲ ಅಂತ ವಾದ ಮಾಡಿದ್ದರೆ, ರಾಖಿ ಮದುವೆ ಆಗಿರೋ ಬಗ್ಗೆ ಮಾಹಿತಿ ಕೊಟ್ಟಿದ್ದರು.

Rakhi Sawant ex-husband Adil Khan Durrani Wedding with Bigg Boss 12 Somi Khan

ಈಗ ಆದಿಲ್ ಖಾನ್ ದುರಾನಿ ಬಿಗ್‌ಬಾಸ್ ಹಿಂದಿ ಸೀಸನ್ 12ರ ಸೋಮಿ ಖಾನ್‌ರನ್ನು ಮದುವೆ ಆಗಿದ್ದಾರೆ. ನ್ಯೂಸ್ 18ಗೆ ನೀಡಿದ ಪ್ರತಿಕ್ರಿಯೆಯಲ್ಲಿ " ಇದೇ ನನ್ನ ಮೊದಲ ಮದುವೆ. ನಾವಿಬ್ಬರು ಈಗ ಬೆಂಗಳೂರಿನಲ್ಲಿ ಇದ್ದೇವೆ. ನಾವು ನಾಳೆ ಮುಂಬೈಗೆ ಪ್ರಯಾಣ ಮಾಡುತ್ತಿದ್ದೇವೆ. ಆ ಬಳಿಕ ನಾವು ಅಧಿಕೃತವಾಗಿ ಅನೌನ್ಸ್‌ಮೆಂಟ್ ಮಾಡಲಿದ್ದೇವೆ. ನಾವು ಪ್ರತಿಯೊಂದನ್ನು ಡಿಟೈಲ್ ಆಗಿ ಹಂಚಿಕೊಳ್ಳುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಹಲವರು ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.

ರಾಖಿ ಸಾವಂತ್ ಕಳೆದ ವರ್ಷ ಆದಿಲ್ ಖಾನ್ ದುರಾನಿ ಜೊತೆ ಮದುವೆ ಆಗಿದೆಯೆಂದು ಅನೌನ್ಸ್ ಮಾಡಿದ್ದರು. ಕೆಲವು ವಾರಗಳ ಬಳಿಕ ಆದಿಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ದೈಹಿಕ ಹಿಂಸೆ, ಹಣದ ದುರಪಯೋಗ ಹಾಗೂ ಟಾರ್ಚರ್ ಕೊಟ್ಟಿದ್ದಾಗಿ ದೂರು ದಾಲಿಸಿದ್ದರು. ಈ ಸಂಬಂಧ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಆದಿಲ್ ಖಾನ್ ದುರಾನಿಯನ್ನು ಬಂಧಿಸಲಾಗಿತ್ತು. ಕಳೆದ ವಾರವಷ್ಟೇ ಆದಿಲ್‌ಗೆ ಜಾಮೀನು ಸಿಕ್ಕಿದೆ. ಈ ವೇಳೆ ರಾಖಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

ಇಷ್ಟೆಲ್ಲ ಹಂಗಾಮ ಬಳಿಕ 2023, ಜೂನ್ ತಿಂಗಳಲ್ಲಿ ರಾಖಿ ಸಾವಂತ್ ಒಂದು ವಿಡಿಯೋ ಮಾಡಿ ಕೊನೆಗೂ ತನಗೆ ವಿಚ್ಛೇದನ ಸಿಗುತ್ತಿದೆ ಎಂದು ಕುಣಿದಾಡಿದ್ದರು. ಅಲ್ಲದೆ ಬ್ರೇಕಪ್ ಪಾರ್ಟಿ ಕೂಡ ಮಾಡಿದ್ದರು. ಇದೆಷ್ಟೇ ಅಲ್ಲದೆ, ಇನ್‌ಸ್ಟಾಗ್ರಾಂನಲ್ಲೂ "ನಾನು ಸ್ವತಂತ್ರಳಾಗಬೇಕು. ಅವನು ಯಾರನ್ನು ಬೇಕಾದರೂ ಮದುವೆ ಆಗಲಿ" ಎಂದು ರಾಖಿ ಸಾವಂತ್ ಹೇಳಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

More from Filmibeat

English summary
Rakhi Sawant ex-husband Adil Khan Durrani Wedding with Bigg Boss 12 Somi Khan. He says its his first marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X