Rakul Preet Singh: ಸೌತ್ ಬಿಟ್ಟು ಬಿಟೌನ್‌ಗೆ ಹಾರಿದ್ದ ರಕುಲ್.. 7 ಫ್ಲಾಪ್ ಸಿನಿಮಾ ಕೊಟ್ಮೇಲೆ ಬಂತು ಬುದ್ದಿ!
ಒಂದು ಕಾಲದಲ್ಲಿ ರಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ಬ್ಯುಸಿಯಲ್ಲಿರೋ ನಟಿಯರಲ್ಲಿ ಒಬ್ಬರಾಗಿದ್ದರು. ಉತ್ತರ ಭಾರತದಿಂದ ಬಂದವರಾಗಿದ್ದರೂ, ತೆಲುಗು-ತಮಿಳು ಭಾಷೆಯ ಸಿನಿಮಾಗಳಲ್ಲಿ ಮಿಂಚಿದ್ದೇ ಹೆಚ್ಚು. ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ರಕುಲ್‌ಗೆ ಬೇಡಿಕೆ ಹೆಚ್ಚಿತ್ತು.
ಒಂದಿಷ್ಟು ವರ್ಷ ದಕ್ಷಿಣ ಭಾರತದಲ್ಲಿ ನಟಿಸಿದ ಬಳಿಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು ಅಂತ ಹೋಗಿದ್ದರು. ಒಂದಿಷ್ಟು ಅವಕಾಶಗಳು ಕೂಡ ಸಿಕ್ಕಿದ್ದವು. ರಕುಲ್‌ಗೆ ಆರಂಭದಲ್ಲಿ ಒಳ್ಳೊಳ್ಳೆ ಅವಕಾಶಗಳೇನೋ ಸಿಕ್ಕಿದ್ದವು. ಆದರೆ, ಅದೃಷ್ಟ ಹೆಚ್ಚು ದಿನ ರಕುಲ್ ಬಳಿ ಇರಲಿಲ್ಲ.

ರಕುಲ್ ಪ್ರೀತ್ ಸಿಂಗ್ ಬಾಲಿವುಡ್‌ನಲ್ಲಿ ಸಂಪೂರ್ಣವಾಗಿ ನೆಲೆಯೂರಿದ್ದೇನೋ ನಿಜ. ಆದರೆ, ಅಷ್ಟೊಂದು ಯಶಸ್ಸು ಸಿಗಲೇ ಇಲ್ಲ. ಬ್ಯಾಕ್ ಟು ಬ್ಯಾಕ್ 7 ಸೋಲುಗಳನ್ನು ಕಂಡ ಬಳಿಕ ಈಗ ಬುದ್ಧಿ ಬಂದಂತೆ ಇದೆ. ಮತ್ತೆ ದಕ್ಷಿಣದ ಸಿನಿಮಾಗಳ ಕಡೆ ಮುಖ ಮಾಡುತ್ತಿದ್ದಾರೆ. ಅಷ್ಟಕ್ಕೂ ಬ್ಯಾಕ್ ಟು ಬ್ಯಾಕ್ ಸೋಲುಂಡ ಆ 7 ಸಿನಿಮಾಗಳು ಯಾವುವು? ದಕ್ಷಿಣ ಭಾರತದ ಯಾವ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ? ತಿಳಿಯಲು ಮುಂದೆ ಓದಿ.
7 ಪ್ಲಾಪ್ ಸಿನಿಮಾ ಕೊಟ್ಟ ರಕುಲ್ ಪ್ರೀತ್ ಸಿಂಗ್
ದಕ್ಷಿಣ ಭಾರತದಲ್ಲಿ ರಕುಲ್ ಪ್ರೀತ್ ಸಿಂಗ್ ನಂಬರ್ 1 ನಟಿಯಾಗಿ ಮಿಂಚುತ್ತಿದ್ದರು. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಬಾಲಿವುಡ್‌ನಲ್ಲಿ ನಟಿಸುವ ಆಸೆಯಿಂದ ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಆದರೆ, ದುರಾದೃಷ್ಟ ರಕುಲ್‌ಗೆ ಬಾಲಿವುಡ್‌ನಲ್ಲಿ ಅಷ್ಟೊಂದು ಸಕ್ಸಸ್ ಸಿಗಲಿಲ್ಲ. ಇತ್ತೀಚೆಗೆ ರಕುಲ್ ನಟಿಸಿದ 7 ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿವೆ.
ಸೋಲುಂಡ ಆ 7 ಸಿನಿಮಾಗಳು ಇವೇನೆ
ರಕುಲ್ ಪ್ರೀತ್ ಸಿಂಗ್ 2014ರಿಂದಲೇ ಬಾಲಿವುಡ್ ಸಿನಿಮಾಗಳಲ್ಲಿ ನೆಲೆಯೂರಲು ಯತ್ನಿಸುತ್ತಿದ್ದರು. ಆದರೆ, ನಾಲ್ಕು ವರ್ಷಗಳ ಬಳಿಕ ಅವಕಾಶಗಳು ಹೆಚ್ಚು ಸಿಗಲು ಆರಂಭ ಆಗಿತ್ತು. ಇನ್ನು2022ರಲ್ಲಿ ಬರೋಬ್ಬರಿ 5 ಬಾಲಿವುಡ್ ಸಿನಿಮಾ ತೆರೆಕಂಡಿದ್ದವು. 'ಅಟ್ಯಾಕ್', 'ರನ್‌ವೇ 34', 'ಕಟ್‌ಪುತ್ಲಿ', 'ಡಾಕ್ಟರ್ ಜಿ', 'ಥ್ಯಾಂಕ್ ಗಾಡ್', 'ಐ ಲವ್ ಯೂ', 'ಛತ್ರಿವಾಲಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಈ ಎಲ್ಲಾ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ.

ಮತ್ತೆ ದಕ್ಷಿಣ ಭಾರತಕ್ಕೆ ಮರಳಿದ ರಕುಲ್
ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡಿರೋ ರಕುಲ್ ಪ್ರೀತ್ ಸಿಂಗ್ ನಿಧಾನವಾಗಿ ಮತ್ತೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ವರ್ಷ 'ಬೂ' ಅನ್ನೋ ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಇದು ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಸದ್ಯ ಶಿವಕಾರ್ತಿಕೇಯನ್ ನಟನೆಯ 'ಅಲಾಯನ್' ಏಲಿಯನ್) ಸಿನಿಮಾ ಮುಗಿದಿದ್ದು, ಪ್ಯಾನ್ ಇಂಡಿಯಾ ರಿಲೀಸ್‌ಗೆ ರೆಡಿಯಾಗಿದೆ. ಹಾಗೇ ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ರಕುಲ್ ನಟಿಸುತ್ತಿರುವ ಬಿಗ್ ಬಜೆಟ್ ಸಿನಿಮಾ.
ಕನ್ನಡದಲ್ಲೂ ನಟಿಸಿರೋ ರಕುಲ್
ರಕುಲ್ ಪ್ರೀತ್ ಸಿಂಗ್ ಕನ್ನಡ ಸಿನಿಮಾದಿಂದಲೇ ವೃತ್ತಿ ಜೀವನ ಆರಂಭ ಮಾಡಿದ್ದರು. 2009ರಲ್ಲಿ ತೆರೆಕಂಡಿದ್ದ 'ಗಿಲ್ಲಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಈ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಆ ಬಳಿಕ ರಕುಲ್ ಪ್ರೀತ್ ಸಿಂಗ್ ಮತ್ತೆ ಕನ್ನಡ ಚಿತ್ರರಂಗದ ಕಡೆಗೂ ಮುಖ ಮಾಡಲಿಲ್ಲ. ಸದಾ ಬಾಲಿವುಡ್ ಕನಸು ಕಾಣುತ್ತಿದ್ದ ರಕುಲ್ ಅಲ್ಲಿಗೆ ಹೋಗಿ ಸೋಲುಂಡು ಬಂದಿದ್ದಾರೆ.


Click it and Unblock the Notifications











