ಒಂದೇ ವಿಡಿಯೋದಲ್ಲಿ ರಾಮ್ ಚರಣ್ -ರಣವೀರ್, ದೀಪಿಕಾ-ತ್ರಿಶಾ: ಸಿನಿಮಾನಾ? ಪ್ರಚಾರನಾ? ರಹಸ್ಯವೇನು?
RRR ಸಿನಿಮಾ ಬಳಿಕ ರಾಮ್ ಚರಣ್ ಗ್ಲೋಬರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಅದೇ ಇನ್ನೊಂದು ಕಡೆ ರಣ್‌ವೀರ್ ಸಿಂಗ್ ಗ್ಲೋಬಲ್ ಲೆವೆಲ್‌ನಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಹಾಗೂ ತ್ರಿಶಾ ಇಬ್ಬರ ಬಗ್ಗೆ ಅಂತೂ ವಿಶೇಷವಾಗೇನೂ ಹೇಳಬೇಕಿಲ್ಲ.
ಈ ನಾಲ್ಕೂ ಮಂದಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತೆ? ಅಭಿಮಾನಿಗಳಿಗೆ ಇಂತಹದ್ದೊಂದು ಆಸೆಯಂತೂ ಇದ್ದೇ ಇರುತ್ತೆ. ಅದಕ್ಕೆ ತಕ್ಕಂತೆ ಸೋಶಿಯಲ್ ಮೀಡಿಯಾದಲ್ಲಿ ಈ ನಾಲ್ಕೂ ಮಂದಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.

ರಾಮ್ ಚರಣ್ ಹಾಗೂ ರಣ್‌ವೀರ್ ಸಿಂಗ್ ಒಟ್ಟಿಗೆ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಒಂದು ಕಿಕ್. ಆ ಕಿಕ್ ಅನ್ನು ಡಬಲ್ ಮಾಡೋಕೆ ದೀಪಿಕಾ ಪಡುಕೋಣೆ-ತ್ರಿಶಾ. ಈ ನಾಲ್ಕೂ ಮಂದಿ ಸದ್ಯ ಒಟ್ಟಿಗೆ ಬಂದಿದ್ದಂತೂ ನಿಜ. ಆದರೆ, ಇದು ಸಿನಿಮಾಗಾಗಿಯೋ.. ಇಲ್ಲ ಯಾವುದೇ ಜಾಹೀರಾತಿಗಾ? ಅನ್ನೋ ಬಗ್ಗೆ ಚರ್ಚೆಯಾಗುತ್ತಿದೆ.
ದೀಪಿಕಾ ಪತಿಯಾಗಿ ರಾಮ್ ಚರಣ್?
ಹೌದು.. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಒಂದು ವಿಡಿಯೋ ಇಂತಹದ್ದೊಂದು ಸಂದೇಹ ಹುಟ್ಟಾಕಿದೆ. ರಾಮ್ ಚರಣ್ ಹಾಗೂ ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸುತ್ತಿರಬಹುದೇ?.. ಯಾಕಂದ್ರೆ ಈ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತನ್ನ ಪತಿ ಕಾಣೆಯಾಗಿದ್ದಾರೆ ಅಂತ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ.
ಅತ್ತ ರಿಯಲ್ ಲೈಫ್ ಪತಿ ರಣ್‌ವೀರ್ ಸಿಂಗ್ ಡಿಟೆಕ್ಟಿವ್ ಲುಕ್ ಕೊಟ್ಟಿದ್ದಾರೆ. ಬಳಿಕ ಚೇಸಿಂಗ್ ಸೀನ್. ಅಲ್ಲಿ ರಾಮ್ ಚರಣ್ ಅಸ್ಪಷ್ಟವಾಗಿ ಕಾಣಿಸುತ್ತಾರೆ. ಹಾಗೇ ಮುಂದಕ್ಕೆ ಹೋದರೆ, ತ್ರಿಶಾ. ಇದೆಲ್ಲವನ್ನು ನೋಡಿದರೆ, ಇಲ್ಲಿ ದೀಪಿಕಾ ಪತಿ ರೋಲ್‌ನಲ್ಲಿ ರಾಮ್ ಚರಣ್ ಅನ್ನೋ ಗುಮಾನಿ ಮೂಡಿದೆ.
ಶೀಘ್ರವೇ ಎಲ್ಲವೂ ಬಹಿರಂಗ
ಅಷ್ಟಕ್ಕೂ ಈ ವಿಡಿಯೋ ಏನು? ಸಿನಿಮಾನಾ? ಸಿನಿಮಾದ ಅನೌನ್ಸ್‌ಮೆಂಟಾ? ಇಲ್ಲಾ ಜಾಹೀರಾತು ಇರಬಹುದಾ? ಬ್ರ್ಯಾಂಡ್ ಲಾಂಚ್ ಮಾಡುತ್ತಿದ್ದಾರಾ? ಹೀಗೆ ನೂರೆಂಟು ಪ್ರಶ್ನೆಗಳಂತೂ ಕುಟ್ಟಿಕೊಂಡಿವೆ.
ಈ ವಿಡಿಯೋವನ್ನು ರಣ್‌ವೀರ್ ಸಿಂಗ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಲ್ಲದೆ "ಶೀಘ್ರವೇ ಬಹಿರಂಗಗೊಳ್ಳಲಿದೆ" ಎಂದು ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ.
ಎಲ್ಲವೂ ಪ್ರಚಾರಕ್ಕಾಗಿಯೇ?
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ವಿಡಿಯೋದ ಅಸಲಿ ಕಥೆಯನ್ನು ಹುಡುಕಲು ಹೊರಟಿದ್ದಾರೆ. ಆದರೆ, ಅವರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ತಮ್ಮದೇ ರೀತಿಯಲ್ಲಿ ಅಂದಾಜು ಮಾಡುತ್ತಿದ್ದಾರೆ.
ಕೆಲವರು ಇದು ಹೊಸ ವೆಬ್ ಸೀರಿಸ್ ಇರಬಹುದು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಯಾವುದೋ ಸಿನಿಮಾದ ಪ್ರಚಾರವಿರಬಹುದು ಎಂದೂ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ ಇದು ಪಕ್ಕಾ ಜಾಹೀರಾತು ಎನ್ನುತ್ತಿದ್ದಾರೆ. ಆದರೆ, ಪಕ್ಕಾ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.


Click it and Unblock the Notifications











