ಇಂದಿರಾ ಕೆನ್ನೆಗೆ ಸಂಜಯ್ ಗಾಂಧಿ ಬಾರಿಸಲು ಗುಂಡೂರಾವ್ ಕಾರಣ? 'ಧುರಂಧರ್ 2'ಗೆ ಕನೆಕ್ಟ್ ಮಾಡಿದ ಆರ್‌ಜಿವಿ

'ಧುರಂಧರ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಈ ಮಧ್ಯೆ ಸಿನಿಮಾದಲ್ಲಿ ತೋರಿಸಲಾದ ಸನ್ನಿವೇಶಗಳ ಬಗ್ಗೆ ಪ್ರಶ್ನೆ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ಈ ಮಧ್ಯೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಧುರಂಧರ್ 2' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. ಆದಿತ್ಯ ಧರ್ ಫಿಲ್ಮ್ ಮೇಕಿಂಗ್ ಶೈಲಿಗೆ ಮರುಳಾಗಿದ್ದಾರೆ.

'ಧುರಂಧರ್ 2' ಸಿನಿಮಾವನ್ನು ಸಮರ್ಥಿಸಿಕೊಂಡಿರುವ ಆರ್‌ಜಿವಿ ಕರ್ನಾಟಕದಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿದ ಘಟನೆಯ ಬಗ್ಗೆ ನೆನಪಿಸಿಕೊಂಡಿದ್ದಾರೆ. ಕರ್ನಾಟಕದ ರಾಜಕೀಯ ಮುಖಂಡ ಹಾಗೂ ಉದ್ಯಮಿ ಅವರಿಗೆ ಹೇಳಿದ ಕಥೆಯನ್ನು 'ಧುರಂಧರ್ 2' ಸಿನಿಮಾಗೆ ವ್ಯಕ್ತವಾಗುತ್ತಿರುವ ಟೀಕೆಗೆ ಕನೆಕ್ಟ್ ಮಾಡಿದ್ದಾರೆ. ಇತ್ತೀಚೆಗೆ ಗಲಾಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಇಂಟ್ರೆಸ್ಟಿಂಗ್ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅದೇನು ಅಂತ ನೋಡುವುದಾರೇ,

Ram Gopal Varma connected Sanjay Gandhi slapped Indira Gandhi incident to Dhurandhar 2 propaganda

"ನಾನು ಚಿಕ್ಕವನಿದ್ದಾಗಿನಿಂದ ಸಂಜಯ್ ಗಾಂಧಿ ತನ್ನ ತಾಯಿ ಇಂದಿರಾ ಗಾಂಧಿ ಕೆನ್ನೆಗೆ ಬಾರಿಸಿದ್ದ ಅನ್ನೋ ಈ ಒಂದು ವಿಷಯವನ್ನು ಕೇಳುತ್ತಿದ್ದೆ. ಇದು ತುಂಬಾ ಜನಪ್ರಿಯವಾಗಿತ್ತು. ಯಾಕಂದ್ರೆ, ಸಂಜಯ್ ಗಾಂಧಿ ತುಂಬಾನೇ ಕೋಪದ ವ್ಯಕ್ತಿಯಾಗಿದ್ದ. ಬೇಡ ವಿಷಯಗಳನ್ನು ಮಾತಾಡುತ್ತಿದ್ದ. ಒಂದು ದಿನ ನಾನು ಕರ್ನಾಟಕದಲ್ಲಿ ರಾಜಕೀಯ ಮುಖಂಡರೊಂದಿಗೆ ಸಂಪರ್ಕವಿರುವ ಉದ್ಯಮಿಯೊಂದಿಗೆ ಮಧ್ಯ ಸೇವಿಸುತ್ತಾ ಕುಳಿತಿದ್ದೆ. ಎಮರ್ಜೆನ್ಸಿ ಬಳಿಕ ಇಂದಿರಾ ಗಾಂಧಿ ತುಂಬಾನೇ ಹೆದರಿದ್ದರು. ಆಗ ದೇವರಾಜ್ ಅರಸ್ ತಮ್ಮ ನಾಯಕಿ ಇಂದಿರಾ ಗಾಂಧಿಗೆ ನಾನು ನಿಮ್ಮನ್ನು ಚಿಕ್ಕಮಗಳೂರಿನಿಂದ ಗೆಲ್ಲಿಸುತ್ತೇನೆ ಎಂದು ಹೇಳಿದ್ದರು. ಅವರ ಮಾತನ್ನು ಇಂದಿರಾ ಗಾಂಧಿ ನಂಬಿದ್ದರು ಎಂದು ಅವರು ಹೇಳಿದ್ದರು" ಎಂದು ರಾಮ್‌ ಗೋಪಾಲ್ ವರ್ಮಾ ಈ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

Also Read
ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ 'ಧುರಂಧರ್- 2'
ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ 'ಧುರಂಧರ್- 2'

ದೇವರಾಜ್ ಅರಸ್ ಮಾತನ್ನು ಇಂದಿರಾ ಗಾಂಧಿ ನಂಬಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದಿದ್ದರು. ಹೀಗಾಗಿ ತನ್ನ ಕ್ಷೇತ್ರದ ಜನರಿಗೆ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ತಮ್ಮ ಪುತ್ರ ಸಂಜಯ್ ಗಾಂಧಿಯನ್ನು ಕಳುಹಿಸಿದ್ದರು. ಆ ವೇಳೆ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಹಾಗೂ ಕರ್ನಾಟಕದ ಇಬ್ಬರು ಕಾಂಗ್ರೆಸ್ ಮುಖಂಡರ ನಡುವೆ ನಡೆದ ಘಟನೆಯನ್ನು ಉದ್ಯಮಿ ವಿವರಿಸಿದ್ದನ್ನು ರಾಮ್‌ ಗೋಪಾಲ್ ವರ್ಮಾ ರಿವೀಲ್ ಮಾಡಿದ್ದಾರೆ.

Ram Gopal Varma connected Sanjay Gandhi slapped Indira Gandhi incident to Dhurandhar 2 propaganda

"ಸಂಜಯ್ ಗಾಂಧಿ ಚಿಕ್ಕಮಗಳೂರಿನ ಜನರಿಗೆ ಧನ್ಯವಾದಗಳನ್ನು ಹೇಳುವುದಕ್ಕೆ ಬಂದಿದ್ದ ವೇಳೆ ಕ್ರಾಂಗೆಸ್ ಮುಖಂಡ ದಿವಂಗತ ಗುಂಡೂರಾವ್ ಜೊತೆಯಾಗಿದ್ದರು. ಈ ವೇಳೆ ತನ್ನಿಂದಲೇ ಇಷ್ಟೆಲ್ಲ ಆಗಿದ್ದು ಎಂದು ಗುಂಡುರಾವ್ ಸಂಜಯ್ ಗಾಂಧಿ ಬಳಿ ಹೇಳಿದ್ದರು. ಈ ಮಾತನ್ನು ಸಂಜಯ್ ಗಾಂಧಿ ನಂಬಿ ಬಿಟ್ಟರು. ಬಳಿಕ ಸಂಜಯ್ ಗಾಂಧಿ ಹಿಂತಿರುಗಿದ ಬಳಿಕ ಇಂದಿರಾ ಗಾಂಧಿ ಬಳಿ ಬಂದು ನಿಮ್ಮನ್ನು ಗೆಲ್ಲಿಸಿದ್ದು ಗುಂಡೂರಾವ್ ಸುಮ್ಮನೆ ದೇವರಾಜ್ ಅರಸ್‌ರನ್ನು ಹೊಗಳುತ್ತಿದ್ದೇವೆ. ಅದಕ್ಕೆ ನೀವು ಗುಂಡೂರಾವ್ ಅನ್ನು ಸಿಎಂ ಮಾಡಬೇಕು ಅಂತ ಹೇಳಿದ್ದರು. ಆದರೆ, ನನಗೆ ಬಂದು ಹೇಳಿದ್ದು ದೇವರಾಜ್ ಅರಸ್, ನಾನು ಹೇಗೆ ಗುಂಡೂರಾವ್ ಅನ್ನು ಸಿಎಂ ಮಾಡಲಿ ಎಂದು ಇಂದಿರಾ ಗಾಂಧಿ ಹೇಳಿದರು." ಎಂದು ಆರ್‌ಜಿವಿ, ಉದ್ಯಮಿ ಹೇಳಿದ ಮಾತನ್ನು ವಿವರಿಸಿದ್ದಾರೆ.

ಇನ್ನು ಇಂದಿರಾ ಗಾಂಧಿ ಕೆನ್ನೆಗೆ ಸಂಜಯ್ ಗಾಂಧಿ ಬಾರಿಸಿದ ಘಟನೆಯನ್ನೂ ವಿವರಿಸಿದ್ದಾರೆ. "ತಾಯಿ ಜೊತೆ ಮಾತಾಡಿದ ಬಳಿಕ ಸಂಜಯ್ ಗಾಂಧಿ ಮತ್ತೆ ಗುಂಡೂರಾವ್‌ಗೆ ಫೋನ್ ಮಾಡಿ ಹೇಳಿದ್ದರು. ಆಗ ಗುಂಡೂರಾವ್ ನಿಮ್ಮ ತಾಯಿ ಹಾಗೂ ದೇವರಾಜ್ ಅರಸ್ ನಡುವೆ ಏನೋ ಇದೆ ಎಂದು ಹೇಳಿದಾಗ, ಸಂಜಯ್ ಗಾಂಧಿ ನೇರವಾಗಿ ಬಂದು ಇಂದಿರಾ ಗಾಂಧಿ ಬಳಿ ಕೇಳುತ್ತಾರೆ. ಆಗ ಕೋಪದಲ್ಲಿ ಇಂದಿರಾ ಗಾಂಧಿ ತನ್ನ ಮಗನ ಕೆನ್ನೆಗೆ ಬಾರಿಸುತ್ತಾರೆ. ಆಗ ಸಿಟ್ಟಿಗೆದ್ದ ಸಂಜಯ್ ಗಾಂಧಿ ತನ್ನ ತಾಯಿ ಇಂದಿರಾ ಗಾಂಧಿ ಕೆನ್ನೆಗೆ ಬಾರಿಸಿದರು" ಎಂಬ ಕಥೆಯನ್ನು ಉದ್ಯಮಿ ತಮಗೆ ಹೇಳಿದ್ದಾಗಿ ಆರ್‌ಜಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಕತೆಯನ್ನು ಆ ಉದ್ಯಮಿ ಹೇಳಿದಾಗ ಸಂಪೂರ್ಣವಾಗಿ ತಾನು ನಂಬಿದ್ದೆ. ಯಾಕಂದ್ರೆ, ಅವರು ಹೇಳಿದ್ದು ಅಷ್ಟು ರಿಯಲಿಸ್ಟಿಕ್ ಆಗಿತ್ತು. ಆದರೆ, ಈ ವ್ಯಕ್ತಿ ಆ ಸಮಯದಲ್ಲಿ ಅಲ್ಲಿ ಇರಲಿಲ್ಲ. ಆದರೆ, ಅವರು ಹೇಳಿದ್ದ ಸ್ಕ್ರೀನ್ ಪ್ಲೇ ತುಂಬಾನೇ ಪರ್ಫೆಕ್ಟ್ ಆಗಿತ್ತು. ಹೀಗಾಗಿ ತನ್ನನ್ನು ನಂಬುವಂತೆ ಮಾಡಿತ್ತು. ಬಾಲ್ಯದಲ್ಲಿ ಈ ಘಟನೆಯ ಬಗ್ಗೆ ಕೇಳಿದಾಗ ಇಂಟ್ರೆಸ್ಟಿಂಗ್ ಅನಿಸಿರಲಿಲ್ಲ. ಆದರೆ, ಉದ್ಯಮಿ ಹೇಳಿದ ರೀತಿ ನಂಬುವಂತೆ ಮಾಡಿತ್ತು. "ನಾನು 'ಧುರಂಧರ್ 2' ಅನ್ನು ನೋಡಿದಾಗ ನನಗೆ ಪಾಕಿಸ್ತಾನ ಗ್ಯಾಂಗ್ ಯಾವುದೂ ಗೊತ್ತಿರಲಿಲ್ಲ. ಆ ಸಿನಿಮಾದಲ್ಲಿದ್ದ ಯಾವುದೇ ಪಾತ್ರವೂ ನನಗೆ ಗೊತ್ತಿರಲಿಲ್ಲ. ಸಿನಿಮಾ ಬಂದ್ಮೇಲೆ ನಾನು ಚೆಕ್ ಮಾಡಿದೆ. ನನಗೆ ಗೊತ್ತಿಲ್ಲದೇ ಇದ್ದಿದ್ದನ್ನು ನಾನು ಯಾಕೆ ನಂಬಬಾರದು ಎಂದು ಅನಿಸಿತು. ಎರಡನೆಯದು ನನಗೆ ನಂಬಲೇಬೇಕು ಅಂತ ಅನಿಸಿತು" ಎಂದು ಆರ್‌ಜಿವಿ ಹೇಳಿದ್ದಾರೆ.

More from Filmibeat

English summary
Ram Gopal Varma connected Sanjay Gandhi slapped Indira Gandhi incident to Dhurandhar 2 propaganda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X