Ramayana: 4 ಸಾವಿರ ಕೋಟಿ ವೆಚ್ಚದ 'ರಾಮಾಯಣ' ಸಿನಿಮಾ.. ಯಾರಿಗೆ ಎಷ್ಟೆಷ್ಟು ಕೋಟಿ ಸಂಭಾವನೆ?

ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ರಾಮಾಯಣ'. ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳಿರುವ ಈ ಪೌರಾಣಿಕ ಸಿನಿಮಾದ ಟೀಸರ್ ರಿಲೀಸ್ ಈಗಾಗಲೇ ಆಗಿದೆ. ಕೆಲವರಿಗೆ ಟೀಸರ್ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಇನ್ನೊಂದು ಕಡೆ ಕೆಲವರಿಗೆ ಇಷ್ಟ ಆಗಿಲ್ಲ. ಎಐ ಬಳಸಿ ಟೀಸರ್ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ.

ಕೆಲವರು 'ರಾಮಾಯಣ'ದ ದೃಶ್ಯಗಳು ಅದ್ದೂರಿಯಾಗಿ ಇದ್ದರೂ, ಸಿನಿಮಾದಲ್ಲಿ ಕೆಲವು ಡಿಟೇಲಿಂಗ್‌ಗಳು ಮಿಸ್ ಆಗಿವೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಹಾಗೂ ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಮೇಲೆ ನಿರೀಕ್ಷೆಯಿದೆ. ಆದರೆ, ಟೀಸರ್‌ನಲ್ಲಿ ಕೊಂಚ ಮಟ್ಟಿಗೆ ಹಿನ್ನಡೆಯಾಗಿದ್ದರೂ, ಸಿನಿಮಾ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ.

Ramayana movie star cast Ranbir Kapoor Sai Pallavi Yash Sunny Deol and Ravi Dubey fees list

'ರಾಮಾಯಣ' ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿನಿಮಾದ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದೆ. 4 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಸಿನಿಮಾದಲ್ಲಿ ಯಾರಿಗೆ ಎಷ್ಟೆಷ್ಟು ಸಂಭಾವನೆ ಸಿಕ್ಕಿದೆ ಎಂದು ಚರ್ಚೆಯಾಗುತ್ತಿದೆ. ಈಗಾಗಲೇ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಟರಿಗೆ ಸಂಭಾವನೆ ಹೀಗಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ರಾವಣ ಪಾತ್ರದಲ್ಲಿ ಯಶ್, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ನಟಿಸುತ್ತಿದ್ದಾರೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಈ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ನಟರ ಸಂಭಾವನೆ ಈ ಕೆಳಗಿನಂತೆ ಇದೆ.

Ramayana movie star cast Ranbir Kapoor Sai Pallavi Yash Sunny Deol and Ravi Dubey fees list

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್‌ಗೆ ಮೊದಲ ಚಾಪ್ಟರ್‌ಗೆ ₹75 ಕೋಟಿ ರೂಪಾಯಿ ಹಾಗೇ 2ನೇ ಚಾಪ್ಟರ್‌ಗೆ ₹75 ಕೋಟಿ ರೂಪಾಯಿ. ಒಟ್ಟು ₹150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದು ಈ ಹಿಂದೆ ರಣ್‌ಬೀರ್ ಪಡೆದ ಸಂಭಾವನೆಗಿಂತ ಇದು ದುಪ್ಪಟ್ಟಾಗಿದೆ. ಇನ್ನು ಸೀತಾ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿಗೆ ಪ್ರತಿ ಅಧ್ಯಾಯಕ್ಕೆ 6 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ. ಒಟ್ಟು ಎರಡು ಅಧ್ಯಾಯಗಳಿಂದ 12 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.

ಇನ್ನು ರಾಕಿಂಗ್ ಸ್ಟಾರ್‌ ಯಶ್ ಈ ಮಹಾಕಾವ್ಯದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರತಿ ಅಧ್ಯಾಯಕ್ಕೆ ಯಶ್‌ಗೆ ₹50 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ. ಒಟ್ಟು ₹100 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. 'ಕೆಜಿಎಫ್ 2'ಗೆ 35 ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಹಾಗೇ ಸನ್ನಿ ಡಿಯೋಲ್ 'ರಾಮಾಯಣ'ದಲ್ಲಿ ಹನುಮಾನ್ ಪಾತ್ರ ಮಾಡುತ್ತಿದ್ದು, ಪ್ರತಿ ಅಧ್ಯಾಯಕ್ಕೆ ₹20 ಕೋಟಿ ರೂಪಾಯಿ ಅಂದರೆ, ಒಟ್ಟು ₹40 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. ಇನ್ನು ಲಕ್ಷ್ಮಣ್ ಪಾತ್ರದಲ್ಲಿ ನಟಿಸುತ್ತಿರುವ ಟಿವಿ ಸ್ಟಾರ್ ರವಿ ದುಬೆಗೆ ₹2 ರಿಂದ 4 ಕೋಟಿ ರೂಪಾಯಿ ಪಡೆದಿದ್ದಾರೆಂದು ಹೇಳಲಾಗಿದೆ.

English summary
Ramayana movie star cast Ranbir Kapoor, Sai Pallavi, Yash, Sunny Deol and Ravi Dubey fees list.
Read more about: ramayana ranbir kapoor yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X