9ನೇ ದಿನ 'ಸೂರ್ಯವಂಶಿ' ಬೀಟ್ ಮಾಡಿದ 'ಬ್ರಹ್ಮಾಸ್ತ್ರ': 'ಕಾಶ್ಮೀರ್ ಫೈಲ್ಸ್' ಹಿಂದಿಕ್ಕಲು ಎಷ್ಟು ಬೇಕು?
ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬ್ರಹ್ಮಾಸ್ತ್ರ' ಬಿಡುಗಡೆಯಾಗಿ ಎರಡು ವಾರ ಕಂಡಿದೆ. ಎರಡನೇ ವಾರವೂ ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿಗೆ ಸದ್ದು ಮಾಡುತ್ತಿದೆ. ಈ ಹಿಂದೆ ತೆರೆಕಂಡ ಸಿನಿಮಾಗಳ ರೆಕಾರ್ಡ್ ಅನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ.
ನಿನ್ನೆಗೆ (ಸೆಪ್ಟೆಂಬರ್ 17) 'ಬ್ರಹ್ಮಾಸ್ತ್ರ' ಬಿಡುಗಡೆಯಾಗಿ 9 ದಿನಗಳಾಗಿವೆ. ಸಿನಿಮಾ ಬಗ್ಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್ ಕಲೆಕ್ಷನ್ ಉತ್ತಮವಾಗಿದೆ. ಹೀಗೆ ಬಾಕ್ಸಾಫೀಸ್ ಬೇಟೆ ಮುಂದುವರೆದರೆ, ಇನ್ನೆರಡು ವಾರಗಳಲ್ಲಿ ಹಾಕಿದ ಬಂಡವಾಳವನ್ನು ಹಿಂಪಡೆಯುವ ಸಾಧ್ಯತೆಯಿದೆ. ಆದರೆ, ಅದು ಸಾಧ್ಯಾನಾ? ಅನ್ನೋದು ಬಾಲಿವುಡ್ ಮಂದಿಯನ್ನು ಕಾಡುತ್ತಿದೆ.
ಆದರೆ, 9ನೇ ದಿನ ಎರಡನೇ ವೀಕೆಂಡ್ ಆರಂಭ ಆಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಸಖತ್ತಾಗಿಯೇ ಇದೆ. ಅಲ್ಲದೆ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ'ಯನ್ನು ಬೀಟ್ ಮಾಡಿದೆ. ಇನ್ನೊಂದು ಕಡೆ 'ಕಾಶ್ಮೀರ್ ಫೈಲ್ಸ್' ಕಲೆಕ್ಷನ್ ಅನ್ನೂ ಬೀಟ್ ಮಾಡಲಿದೆ ಭವಿಷ್ಯ ನುಡಿಯುತ್ತಿದ್ದಾರೆ.

9ನೇ ದಿನ 'ಬ್ರಹ್ಮಾಸ್ತ್ರ' ಕಲೆಕ್ಷನ್ ಎಷ್ಟು?
ರಣ್‌ಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್ ಹಾಗೂ ವಿಶೇಷ ಅತಿಥಿಯಾಗಿ ಶಾರುಖ್ ಖಾನ್ ನಟಿಸಿರುವ ಸಖತ್ ಹೈಫ್ ಕ್ರಿಯೇಟ್ ಮಾಡಿತ್ತು. ಆದರೆ, ರಿಲೀಸ್ ಆದ ದಿನವೇ ಸಿನಿಮಾ ರಿಪೋರ್ಟ್ ನೆಗೆಟಿವ್ ಬಂದಿತ್ತು. ಹೀಗಿದ್ದರೂ ಮೊದಲ ದಿನವೇ 70+ ಕೋಟಿ ರೂ. ಕಲೆಹಾಕಿತ್ತು. ಶನಿವಾರ (ಸೆಪ್ಟೆಂಬರ್ 17) 'ಬ್ರಹ್ಮಾಸ್ತ್ರ' ಕಲೆಕ್ಷನ್ ಶೇ. 50ರಷ್ಟು ಏರಿಕೆಯಾಗಿದೆ. 9ನೇ ಸಿನಿಮಾ ಬರೋಬ್ಬರಿ 16 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಕಲೆಹಾಕಿದೆ ಎಂದು ವರದಿಯಾಗಿದೆ.

'ಸೂರ್ಯವಂಶಿ' ಹಿಂದಿಕ್ಕಿದ 'ಬ್ರಹ್ಮಾಸ್ತ್ರ'
ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 196 ಕೋಟಿ ರೂ. ಈ ಕಲೆಕ್ಷನ್ ಅನ್ನು 'ಬ್ರಹ್ಮಾಸ್ತ್ರ' ಸಿನಿಮಾ 9ನೇ ದಿನವೇ ಹಿಂದಿಕ್ಕಿದೆ. ಶನಿವಾರ ಈ ಸಿನಿಮಾ 16 ಕೋಟಿ ರೂ. ಗಳಿಸಿದ ಬಳಿಕ 'ಬ್ರಹ್ಮಾಸ್ತ್ರ' ಕಲೆಕ್ಷನ್ ಅಂದಾಜು 197 ಕೋಟಿ ರೂ.ದಾಟಿದೆ. ಈ ಮೂಲಕ 'ಸೂರ್ಯವಂಶಿ' ಬಾಕ್ಸಾಫೀಸ್ ಕಲೆಕ್ಷನ್ ಹಿಂದಿಕ್ಕಿ 'ಬ್ರಹ್ಮಾಸ್ತ್ರ' ಮುನ್ನುಗ್ಗುತ್ತಿದೆ. ಆದರೆ, 'ಸೂರ್ಯವಂಶಿ' ಬಿಡುಗಡೆಯಾದಾಗ, ಶೇ.50ರಷ್ಟು ಆಸನ ವ್ಯವಸ್ಥೆ ಇತ್ತು. ಹೀಗಾಗಿ ಈ ಸಿನಿಮಾದೊಂದಿಗೆ ಹೋಲಿಕೆ ಸರಿಯಿಲ್ಲ ಎನ್ನಲಾಗಿದೆ.

'ಕಾಶ್ಮೀರ್ ಫೈಲ್ಸ್' ಬೀಟ್ ಮಾಡುತ್ತಾ?
'ಬ್ರಹ್ಮಾಸ್ತ್ರ' ಒಂದು ಸಿನಿಮಾದ ದಾಖಲೆಯನ್ನು ಉಡೀಸ್ ಮಾಡುತ್ತಾ ಮುನ್ನುಗ್ಗುತ್ತಿದೆ. ಲೆಕ್ಕಚಾರದ ಪ್ರಕಾರ, ಭಾನುವಾರ (ಸೆಪ್ಟೆಂಬರ್ 18) ಕೂಡ ಕಲೆಕ್ಷನ್ ಉತ್ತಮವಾಗಿರುತ್ತೆ ಎಂದು ಅಂದಾಜಿಸಲಾಗಿದೆ. 'ಬ್ರಹ್ಮಾಸ್ತ್ರ' ಭಾರತದಲ್ಲಿ 200 ಕೋಟಿ ರೂ. ಕಲೆ ಹಾಕಿದೆ. ಅಲ್ಲದೆ ವಿಶ್ವದಾದ್ಯಂತ 350 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಇತ್ತ 'ಕಾಶ್ಮೀರ್ ಫೈಲ್ಸ್' ವಿಶ್ವದಾದ್ಯಂತ ಗಳಿಸಿದ್ದು 340 ಕೋಟಿ ರೂ. ಹಾಗೇ ನೋಡಿದರೆ, 'ಬ್ರಹ್ಮಾಸ್ತ್ರ' ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಅನ್ನೂ ಹಿಂದಿಕ್ಕಾಗಿದೆ. ಆದರೆ, ಭಾರತದಲ್ಲಿ 'ಕಾಶ್ಮೀರ್ ಫೈಲ್ಸ್' 252 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ದಾಖಲೆಯನ್ನು 'ಬ್ರಹ್ಮಾಸ್ತ್ರ' ಇನ್ನೂ ಮುರಿದಿಲ್ಲ.

ಹಿಟ್ ಲಿಸ್ಟ್ ಸೇರಿಸಬಹುದಾ?
ರಣ್‌ಬೀರ್ ಕಪೂರ್, ಆಲಿಯಾ ಭಟ್ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಚೆನ್ನಾಗಿದೆ. ಆದರೆ, ಅದು ಸಾಲುತ್ತಿಲ್ಲ. ಈ ವಾರ ಬರೋಬ್ಬರಿ 40 ಕೋಟಿ ರೂ. ಕಲೆಹಾಕಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ವಾರದವರೆಗೂ 'ಬ್ರಹ್ಮಾಸ್ತ್ರ'ಗೆ ಟಕ್ಕರ್ ಕೊಡೋ ಸಿನಿಮಾ ರಿಲೀಸ್ ಆಗುತ್ತಿಲ್ಲ. 'ವಿಕ್ರಂ ವೇದ',' ಪೊನ್ನಿಯನ್ ಸೆಲ್ವನ್' ಸಿನಿಮಾ ರಿಲೀಸ್ ಆಗೋವರೆಗೂ ಬಾಕ್ಸಾಫೀಸ್‌ನಲ್ಲಿ ಆರ್ಭಟ ಮುಂದುವರೆಸಲಿದೆ. ಆದರೂ, 300 ಕೋಟಿ ಕ್ಲಬ್ ಸೇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, 410 ಕೋಟಿ ರೂ. ಬಜೆಟ್ ರೀಚ್ ಆಗುತ್ತಾ? ಅನ್ನೋ ಅನುಮಾನವಿದೆ.


Click it and Unblock the Notifications











