5ನೇ ದಿನವೂ ಬಾಕ್ಸಾಫೀಸ್‌ನಲ್ಲಿ 'ಬ್ರಹಾಸ್ತ್ರ' ಭಯಂಕರ: ಅದೇ ಕರ್ನಾಟಕದಲ್ಲಿ...?

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಿಗ್ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತೆ. ಈ ಸಿನಿಮಾ ಗೆದ್ದೇ ಗೆಲುತ್ತೆ ಅನ್ನೋ ನಿರೀಕ್ಷೆ ಎಲ್ಲಾ ತಲೆಕೆಳಗಾಯ್ತು ಅಂತ ಅಂದ್ಕೊಂಡವರೇ ಹೆಚ್ಚು. 'ಬ್ರಹ್ಮಾಸ್ತ್ರ' ಈ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿದೆ.

'ಬ್ರಹ್ಮಾಸ್ತ್ರ' ಬಿಡುಗಡೆಯಾಗಿ ಐದು ದಿನಗಳಾಗಿವೆ. ಐದೂ ದಿನವೂ ಸಿನಿಮಾದ ಕಲೆಕ್ಷನ್ ಚೆನ್ನಾಗಿಯೇ ಇದೆ. ಆದರೂ, ಇದು ಬಾಕ್ಸಾಫೀಸ್‌ನಲ್ಲಿ ಲಾಭ ಗಳಿಸುತ್ತೆ ಅನ್ನೋ ಕಾನ್ಫಿಡೆನ್ಸ್ ಇಲ್ಲ. ಸಿನಿಮಾ ಬಜೆಟ್‌ಗೂ ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡುತ್ತಿರುವ ವೇಗಕ್ಕೂ ತಾಳೆಯಾಗುತ್ತಿಲ್ಲ. ಹೀಗಾಗಿ ಲಾಭ ಮಾಡುತ್ತಾ? ಅನ್ನೋ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ, ಕಲೆಕ್ಷನ್ ನೋಡಿ ಖುಷಿ ಪಡುವ ವಾತಾವರಣ ಬಾಲಿವುಡ್‌ನಲ್ಲಿ ಸೃಷ್ಟಿಯಾಗಿದೆ.

'ಬ್ರಹಾಸ್ತ್ರ' ಕಳೆದ ಐದು ದಿನಗಳಲ್ಲಿ ವಿಶ್ವದಾದ್ಯಂತ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದು ಕುತೂಹಲವಿದೆ. ಹಾಗೇ ಬಾಲಿವುಡ್‌ ಪ್ಯಾನ್ ಇಂಡಿಯಾ ಸಿನಿಮಾ ದಕ್ಷಿಣ ಭಾರತದಲ್ಲಿ ಗಳಿಸಿದ್ದೆಷ್ಟು? ಅದರಲ್ಲೂ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

'ಬ್ರಹ್ಮಾಸ್ತ್ರ' 5ನೇ ದಿನ ಬಾಕ್ಸಾಫೀಸ್ ಕಲೆಕ್ಷನ್!

'ಬ್ರಹ್ಮಾಸ್ತ್ರ' 5ನೇ ದಿನ ಬಾಕ್ಸಾಫೀಸ್ ಕಲೆಕ್ಷನ್!

'ಬ್ರಹ್ಮಾಸ್ತ್ರ' ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿದ್ದರಿಂದ ವಿಮರ್ಶೆಗಳು ನಿರಾಸೆಯನ್ನುಂಟು ಮಾಡಿತ್ತು. ಆದರೆ, ಮೊದಲ ವಾರವೇ ಈ ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಸೂಪರ್‌ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲಿಂದ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 5ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಸೂಪರ್‌ ಕಲೆಕ್ಷನ್ ಮಾಡಿದೆ. 14 ರಿಂದ 15 ಕೋಟಿ ರೂ. 5ನೇ ದಿನ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಆದರೆ, 5ನೇ ದಿನ ಬಾಕ್ಸಾಫೀಸ್‌ ಗಳಿಕೆಯಲ್ಲಿ ಸುಮಾರು ಶೇ.23ರಷ್ಟು ಇಳಿಕೆ ಕಂಡಿದೆ ಎನ್ನಲಾಗಿದೆ.

5 ದಿನಗಳಲ್ಲಿ 'ಬ್ರಹ್ಮಾಸ್ತ್ರ' ಗಳಿಸಿದ್ದೆಷ್ಟು?

5 ದಿನಗಳಲ್ಲಿ 'ಬ್ರಹ್ಮಾಸ್ತ್ರ' ಗಳಿಸಿದ್ದೆಷ್ಟು?

'ಬ್ರಹ್ಮಾಸ್ತ್ರ' ವಿಶ್ವದಾದ್ಯಂತ ಕಲೆಕ್ಷನ್ ಜೋರಾಗಿಯೇ ಇದೆ. ಆದರೆ, ಈ ಗಳಿಕೆ ಸಾಲೋದಿಲ್ಲ ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ವಾದ. 5 ದಿನಗಳಲ್ಲಿ ಸುಮಾರು 150 ರಿಂದ 151 ಕೋಟಿ ರೂ. ಕಲೆ ಹಾಕಿದೆ. ಇದರಲ್ಲಿ ಡಬ್ ವರ್ಷನ್‌ಗಳಿಂದಲೇ 17.50 ಕೋಟಿ ರೂ. ಗಳಿಕೆ ಕಂಡಿದೆ. ಅಂದರೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 132.50 ಕೋಟಿ ರೂ. ಕಲೆಕ್ಷನ್ ಆಗಿದೆ. ಮುಂದಿನ ಶನಿವಾರ ಹಾಗೂ ಭಾನುವಾರ ಈ ಎರಡೂ ದಿನಗಳಲ್ಲಿ ಕಲೆಕ್ಷನ್ ಅದ್ಭುತವಾಗಿದ್ದರೂ ಲೈಫ್‌ ಟೈಮ್ ಕಲೆಕ್ಷನ್ 250 ಕೋಟಿ ರೂ. ದಾಟಬಹುದು ಎಂದು ಹೇಳುತ್ತಿದ್ದಾರೆ. ಅಂದ್ಹಾಗೆ ಇದು ಭಾರತದ ಕಲೆಕ್ಷನ್ ಅಷ್ಟೇ.

ಕರ್ನಾಟಕದಲ್ಲಿ ಸಿನಿಮಾ ಗಳಿಸಿದ್ದೆಷ್ಟು?

ಕರ್ನಾಟಕದಲ್ಲಿ ಸಿನಿಮಾ ಗಳಿಸಿದ್ದೆಷ್ಟು?

ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಕನ್ನಡಕ್ಕೂ ಡಬ್ ಆಗಿತ್ತು. ಐದು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿತ್ತು. ಅದರಂತೆ ಕರ್ನಾಟಕದಲ್ಲೂ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅಂದ್ಹಾಗೆ ಕರ್ನಾಟಕದಲ್ಲಿ 5 ದಿನಗಳಲ್ಲಿ 6 ರಿಂದ 8 ಕೋಟಿ ರೂ. ಕಲೆಕ್ಷನ್ ಆಗಿದೆ ಅನ್ನೋದು ವಿತರಕರ ವಲಯದಲ್ಲಿ ಹರಿದಾಡುತ್ತಿರೋ ಸುದ್ದಿ. ಹೀಗಾಗಿ 'ಬ್ರಹ್ಮಾಸ್ತ್ರ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಸದ್ಯ ಪರ್ಫಾಮೆನ್ಸ್ ಚೆನ್ನಾಗಿದೆ.

ಹಿಟ್ ಲಿಸ್ಟ್ ಸೇರಿದ ಸಿನಿಮಾಗಳಿವು

ಹಿಟ್ ಲಿಸ್ಟ್ ಸೇರಿದ ಸಿನಿಮಾಗಳಿವು

'ಬ್ರಹ್ಮಾಸ್ತ್ರ' ಬಾಲಿವುಡ್ ಕೊಂಚ ಮಟ್ಟಿಗೆ ರಿಲೀಫ್ ಕೊಟ್ಟಿದ್ದರೂ, ಇದು ಸಾಲುತ್ತಿಲ್ಲ. ಆದರೂ, ಏನಾದರೂ ಒಂದು ದಾಖಲೆ ಬರೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅಂತೆಯೆ ಆಲಿಯಾ ಭಟ್ ನಟಿಸಿದ 'ಗಂಗೂಬಾಯಿ ಕಾಠಿಯಾವಾಡಿ', 'ದಿ ಕಾಶ್ಮೀರ್ ಫೈಲ್ಸ್', 'ಭೂಲ್ ಭುಲಯ್ಯ 2' ಸಿನಿಮಾ ಬಾಕ್ಸಾಫೀಸ್‌ ಸಕ್ಸಸ್ ಎಂದು ಸಾಬೀತಾಗಿದೆ. ಈ ಸಾಲಿಗೆ 'ಬ್ರಹ್ಮಾಸ್ತ್ರ' ಸಿನಿಮಾ ಕೂಡ ಸೇರುತ್ತಾ ಅನ್ನೋದು ಇನ್ನು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Ranbir Kapoor, Alia Bhatt Starrer Brahmastra Box Office Collection Day 5, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X