ರಶ್ಮಿಕಾ ಮಂದಣ್ಣ ಬಿಡಿ, ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿರೋದ್ದು ರಣಬೀರ್ ಕಪೂರ್ -ತೃಪ್ತಿ ಡಿಮ್ರಿ ಬೆತ್ತಲೆ ಸೀನ್!
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಡಿಸೆಂಬರ್ 1 ರ ಶುಕ್ರವಾರದಂದು ದೇಶಾದ್ಯಂತ ಬಿಡುಗಡೆಯಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಕೇವಲ ಎರಡೇ ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾದ ಸುಮಾರು 236 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಅನಿಮಲ್ ಸಿನಿಮಾ ಯಶಸ್ಸಿನತ್ತ ಹೋಗುತ್ತಿರುವಾಗಲೇ, ಚಿತ್ರದಲ್ಲಿನ ಹಾಟ್, ಬೋಲ್ಡ್ ಸೀನ್‌ಗಳು ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಹಬ್ಬಿಸಿದೆ. ಚಿತ್ರದ ನಾಯಕ ನಟಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ಇನ್‌ಟಿಮೇಟ್ ದೃಶ್ಯಗಳು, ಕಿಸ್ಸಿಂಗ್ ಸೀನ್‌ಗಳು ವೈರಲ್ ಆದ ಬೆನ್ನಲ್ಲೇ ಸಿನಿಮಾದ ಇನ್ನೊಬ್ಬ ನಟಿ ತೃಪ್ತಿ ಡಿಮ್ರಿ ಮತ್ತು ರಣಬೀರ್ ಅವರ ಬೆತ್ತಲೆ ದೃಶ್ಯ ವೈರಲ್ ಆಗುತ್ತಿದೆ.

ವೈರಲ್ ಆಯ್ತು ತೃಪ್ತಿ ಡಿಮ್ರಿ ಮತ್ತು ರಣಬೀರ್ ಕಪೂರ್ ಹಾಟ್ ಸೀನ್!
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ದೃಶ್ಯಗಳು, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೈಪ್ ಕ್ರಿಯೆಟ್ ಮಾಡುತ್ತಿವೆ. ಸಿನಿಮಾ ಸಕ್ಸಸ್‌ಗೆ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ರಣಬೀರ್ ಕಪೂರ್ ಅವರ ತೃಪ್ತಿ ಡಿಮ್ರಿ ನಗ್ನವಾಗಿರುವ ಲಿಪ್-ಲಾಕ್ ದೃಶ್ಯ ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ರಣಬೀರ್ ಕಪೂರ್ ಅವರ 'ಅನಿಮಲ್' ಬಿಡುಗಡೆಯಾದಾಗಿನಿಂದಲೂ ಅಭಿಮಾನಿಗಳು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ರಣಬೀರ್ ಕಪೂರ್ ಮತ್ತು ತೃಪ್ತಿ ಡಿಮ್ರಿ ನಡುವಿನ ಕಿಸ್ಸಿಂಗ್ ಸೀನ್ ಮತ್ತು ನಗ್ನ ದೃಶ್ಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದು, ಚಿತ್ರಮಂದಿರಗಳಲ್ಲಿ ಸೀಟಿನ ಅಂಚಿಗೆ ತಂದು ಕೂರಿಸಿದೆ.
ರಣಬೀರ್ ಕಪೂರ್ ಮತ್ತು ತೃಪ್ತಿ ಡಿಮ್ರಿ ನಗ್ನ ದೃಶ್ಯಕ್ಕೆ ಅಭಿಮಾನಿಗಳ ಪ್ರತಿಕ್ರಿಯೆ
ಈ ಬೆತ್ತಲೆ ದೃಶ್ಯಕ್ಕೆ ನೆಟ್ಟಿಗರು ಪ್ರತಿಕ್ತಿಯಿಸಿದ್ದು, "ತಂದೆ- ಮಗನ ಸಿನಿಮಾ ಎಂದರು, ಆದರೆ ಇದು ರೊಮ್ಯಾಂಟಿಕ್ ಮತ್ತು ಟ್ರಯಾಂಗಲ್ ಲವ್ ಸ್ಟೋರಿ ತರಹ ಇದೆ" ಎಂದಿದ್ದಾರೆ. ಇನ್ನು, ಹಲವು ಮಂದಿ ಸಿನಿಮಾದಲ್ಲಿ ರಶ್ಮಿಕಾ ಇನ್ಯಾಕೆ ಬೇಕಿತ್ತು...? ಇದು ಟ್ರಯಾಂಗಲ್ ಲವ್ ಸ್ಟೋರಿಯೇ...? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮತ್ತೆ ಕೆಲವರು ರಣಬೀರ್ ಕಪೂರ್ ಮತ್ತು ತೃಪ್ತಿ ಡಿಮ್ರಿ ನಡುವಿನ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ.
ಬುಲ್ ಬುಲ್ ಖ್ಯಾತಿಯ ಬಾಲಿವುಡ್ ನಟಿ ತೃಪ್ತಿ ಡಿಮ್ರಿ 'ಅನಿಮಲ್'ನಲ್ಲಿ ಜೋಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ತೃಪ್ತಿ ಡಿಮ್ರಿ ಅವರಲ್ಲದೆ, ಈ ಚಿತ್ರದಲ್ಲಿ ಬಾಬಿ ಡಿಯೋಲ್, ಅನಿಲ್ ಕಪೂರ್, ಶಕ್ತಿ ಕಪೂರ್ ಮತ್ತು ಇತರರು ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ- ರಣಬೀರ್ ಕಪೂರ್ ಹಾಟ್ ಸೀನ್
ಇನ್ನು, ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ- ರಣಬೀರ್ ಕಪೂರ್ ನಡುವೆ ಅನೇಕ ಹಾಟ್ ಸೀನ್‌ಗಳಿವೆ. ಸಿನಿಮಾದ ಹಾಡು ಮತ್ತು ಟ್ರೈಲರ್‌ಗಳಲ್ಲಿ ಇದು ಕಾಣುತ್ತಿತ್ತು. ಚಿತ್ರ ಬಿಡುಗಡೆಯಾದ ಬಳಿಕ ಅನೇಕ ದೃಶ್ಯಗಳು, ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಅದರಲ್ಲೂ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಜೊತೆಗೆ ತಳುಕು ಹಾಕಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಡೀಪ್‌ಫೇಕ್ ವಿಡಿಯೋಗೆ ಅಳುತ್ತಿದ್ದವರು, ಸಿನಿಮಾದಲ್ಲಿನ ಇಂತಹ ಹಾಟ್ ದೃಶ್ಯಗಳ ಬಗ್ಗೆ ಮಾತಾಡುವುದಿಲ್ಲ ಎಂದು ವ್ಯಂಗ್ಯವಾಡಲಾಗುತ್ತಿದೆ.


Click it and Unblock the Notifications










