₹8 ಕೋಟಿ ದುಬಾರಿ ಕಾರು ಖರೀದಿಸಿದ ರಣ್‌ಬೀರ್ ಕಪೂರ್: ಕಾರಿನ ವಿಶೇಷತೆಯೇನು?

ಕಳೆದ ವರ್ಷ 'ಅನಿಮಲ್' ಸಿನಿಮಾ 900 ಕೋಟಿ ರೂಪಾಯಿ ಬಾಚಿಕೊಂಡಿದ್ದಷ್ಟೇ ತಡ ರಣ್‌ಬೀರ್ ಕಪೂರ್ ರೇಂಜ್ ಎಲ್ಲಿಗೋ ಹೋಗಿದೆ. ಒಂದು ಸಮಯದಲ್ಲಿ ಒಂದರ ಹಿಂದೊಂದು ಸೋಲುಗಳನ್ನು ಕೊಟ್ಟು ಟೀಕೆಗೆ ಗುರಿಯಾಗಿದ್ದ ಈ ನಟನಿಗೆ ಮತ್ತೆ ಶುಕ್ರದೆಸೆ ಬಂದಿದೆ. ರಣ್‌ಬೀರ್ ಕಪೂರ್ ಈಗ ಬಾಲಿವುಡ್‌ನ ಬೇಡಿಕೆಯ ನಟ.

ಕೆಲವು ದಿನಗಳಿಂದ ತನ್ನ ಹೊಸ ಸಿನಿಮಾಗಳಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನಾಗಿ ನಟಿಸುತ್ತಿರೋ ಸುದ್ದಿ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಮಧ್ಯೆ ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ರಣ್‌ಬೀರ್ ಕಪೂರ್ ಖರೀದಿ ಮಾಡಿ ಟ್ರೆಂಡಿಂಗ್‌ನಲ್ಲಿದ್ದಾರೆ.

Ranbir Kapoor buys Rs 8 crore Bentley Continental GT V8 car here is video

ರಣ್‌ಬೀರ್ ಕಪೂರ್ ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣ ಆ ದುಬಾರಿ ಕಾರಿನ ಬೆಲೆ. ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿ8 ಕಾರಿನ ಬೆಲೆ ಬರೋಬ್ಬರಿ 8 ಕೋಟಿ ರೂಪಾಯಿ. ಬೆಂಟ್ಲಿ ತಯಾರಿಸುವ ಕಾರುಗಳಲ್ಲೇ ಇದು ಅತೀ ದುಬಾರಿ ಎಂದು ಹೇಳಲಾಗುತ್ತಿದೆ. ರಣ್‌ಬೀರ್ ಕಪೂರ್ ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್‌ ನಟ ರಣ್‌ಬೀರ್ ಕಪೂರ್ ಖರೀದಿಸಿದ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿ8 ಕಾರಿನ ವಿಶೇಷತೆಗಳನ್ನು ಅಭಿಮಾನಿಗಳು ಹುಡುಕುವುದಕ್ಕೆ ಶುರು ಮಾಡಿದ್ದಾರೆ. ಹಾಗಿದ್ರೆ, ಈ 8 ಕೋಟಿ ರೂಪಾಯಿ ಕಾರಿನ ವಿಶೇಷತೆ ಏನು? ತಿಳಿಯಲು ಮುಂದೆ ಓದಿ.

ಬೆಂಟ್ಲಿ ತಯಾರಿಸಿದ ಅತ್ಯುತ್ತಮ ಕಾರು ಎಂದು ಹೇಳಲಾಗುತ್ತದೆ. ಈ ಕಾರು 4.0 ಲೀಟರ್‌ನ ಟರ್ಬೋ ಚಾರ್ಜ್‌ ಮಾಡಲ್ಪಟ್ಟಿರುವ ವಿ8 ಇಂಜಿನ್ ಇದೆ. ಇದು 542ಬಿಎಚ್‌ಪಿ ಪವರ್ ಅನ್ನು ಪ್ರಡ್ಯೂಸ್ ಮಾಡುತ್ತೆ. ಈ ದುಬಾರಿ ಕಾರು ಟಾಪ್ ಸ್ಪೀಡ್ ಅನ್ನು ಕೂಡ ಅತೀ ವೇಗವಾಗಿಯೇ ತಲುಪುತ್ತೆ. 0 ಯಿಂದ 100 ಕಿ.ಮೀ/ಗಂಟೆ ವೇಗವನ್ನು ಕೇವಲ 3.9 ಸೆಕೆಂಡುಗಳಲ್ಲಿ ತಲುಪುತ್ತೆ. ಇದು 318 ಟಾಪ್‌ ಸ್ಪೀಡ್ ವರೆಗೂ ಮುಂದುವರೆಯಬಹುದು.

ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿ8ನ ಒಳ ವಿನ್ಯಾಸ ಕೂಡ ಅಷ್ಟೇ ಅದ್ಭುತವಾಗಿದೆ. ಕೊಟ್ಟ ಬೆಲೆಗೆ ತಕ್ಕಂತೆ ಡಿಸೈನ್ ಅನ್ನು ಮಾಡಲಾಗಿದೆ. ಐಷಾರಾಮಿ ಇಂಟಿರಿಯರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಡೈಮಂಡ್ ಕಟ್ ಸೀಟಿನ ವಿನ್ಯಾಸ ಮಾಡಲಾಗಿದೆ. 12.3 ಇನ್‌ಫ್ಲೋಟೈನ್ಮೆಂಟ್ ಡಿಸ್ಪೈ ಇದೆ. ಈ ಡಿಸ್ಪೈ ಮೂರು ದಿಕ್ಕುಗಳಿಗೆ ತಿರುಗುತ್ತದೆ. ಒಂದೊಂದು ಸೈಟ್‌ನಲ್ಲೂ ಒಂದೊಂದು ಫೀಚರ್‌ಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸುರಕ್ಷತೆ ಹಾಗೂ ಆರಾಮಾಗಿ ಪ್ರಯಾಣ ಮಾಡಬಹುದಾಗಿದೆ. ಸದ್ಯ ಬಾಲಿವುಡ್‌ನಲ್ಲಿ ಈ ಕಾರಿನ ಬಗ್ಗೆ ಟಾಕ್ ಶುರುವಾಗಿದೆ.

'ಅನಿಮಲ್' ಯಶಸ್ಸಿನ ಬಳಿಕ ರಣ್‌ಬೀರ್ ಕಪೂರ್ 'ರಾಮಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಸಿನಿಮಾದ ಸೆಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡಿದ್ದವು. ಶೀಘ್ರದಲ್ಲಿಯೇ ಈ ಸಿನಿಮಾ ಸೆಟ್ಟೇರುತ್ತಿದ್ದು, ಶ್ರೀರಾಮನ ಅವತಾರದಲ್ಲಿ ರಣ್‌ಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Ranbir Kapoor buys Rs.8 crore Bentley Continental GT V8 car:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X