"ರಣ್‌ಬೀರ್ ಕಪೂರ್ ಕುಟುಂಬಕ್ಕೆ ಆಲಿಯಾ ಭಟ್ ಕಂಡ್ರೆ ಆಗ್ತಿಲ್ಲ": ಏನಿದು ಶಾಕಿಂಗ್ ನ್ಯೂಸ್?

ಬಾಲಿವುಡ್‌ನಲ್ಲಿ ಪ್ರೀತಿ, ಪ್ರೇಮ, ಪ್ರಣಯ ಎಲ್ಲವೂ ಕಾಮನ್. ಹಾಗೇ ಬ್ರೇಕಪ್ ಕೂಡ ಅಷ್ಟೇ.. ಇವತ್ತು ಲವರ್ ಆಗಿದ್ದವರು ನಾಳೆ ಬೇರೆ ಬೇರೆಯಾಗಿ ಓಡಾಡುತ್ತಿರುತ್ತಾರೆ. ಇಂತಹ ಅದೆಷ್ಟೋ ಘಟನೆಗಳು ಬಾಲಿವುಡ್‌ನಲ್ಲಿ ನಡೆದು ಹೋಗಿದೆ.

ಇನ್ನು ಪ್ರೀತಿಸಿ ಮದುವೆ ಆದವರು ಒಂದಿಷ್ಟು ವರ್ಷಗಳ ಬಳಿಕ ನಾನೊಂದು ತೀರ.. ನೀನೊಂದು ತೀರ ಅಂತ ದೂರ ಆಗಿಬಿಡುತ್ತಾರೆ. ಇದನ್ನೂ ಬಾಲಿವುಡ್ ಹತ್ತಿರದಿಂದ ನೋಡಿದೆ. ಮತ್ತೊಂದು ಕಡೆ ಇಂತಹ ಸುದ್ದಿಯನ್ನು ಹಬ್ಬಿಸುವವರೂ ಇದ್ದಾರೆ.

Alia Bhatt, Ranibir Kapoor, Kangana Ranaut

ಸದ್ಯ ಬಾಲಿವುಡ್‌ನಲ್ಲಿ ಶಾಕಿಂಗ್ ಸುದ್ದಿಯೊಂದು ಓಡಾಡುತ್ತಿದೆ. ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ಬೇರೆ ಬೇರೆ ಪ್ಲೋರ್‌ನಲ್ಲಿ ವಾಸ ಮಾಡುತ್ತಿದ್ದಾರೆ ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ. ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದಿದ್ದೇನು? ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ಯಾರು? ಈ ಸುದ್ದಿ ನಿಜವೇ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಆಲಿಯಾ-ರಣ್‌ಬೀರ್ ನಡುವೆ ಎಲ್ಲವೂ ಸರಿಯಿಲ್ಲ

ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವೆ ಎಲ್ಲವೂ ಸರಿಯಾಗಿಲ್ಲ ಅನ್ನೋ ಸುದ್ದಿ ಓಡಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಬಾಲಿವುಡ್ ನಟಿ ಕಂಗನಾ ರನೌತ್ ಇವರಿಬ್ಬರ ಕೌಟುಂಬ ಕಹಲದ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

Alia Bhatt, Ranibir Kapoor, Kangana Ranaut

ರಣ್‌ಬೀರ್ ಕಪೂರ್ ಪತ್ನಿ ಆಲಿಯಾ ಭಟ್‌ಗೆ ಮೋಸ ಮಾಡುತ್ತಿದ್ದಾರೆ. ಇದು ಆಲಿಯಾ ಭಟ್‌ಗೂ ಚೆನ್ನಾಗಿಯೇ ಗೊತ್ತಿದೆ. ಕೌಟುಂಬಿಕ ಸಮಸ್ಯೆಯಿಂದ ರಣ್‌ಬೀರ್ ಹಾಗೂ ಆಲಿಯಾ ಇಬ್ಬರೂ ಒಂದೇ ಪ್ಲೋರ್‌ನಲ್ಲಿ ವಾಸವಿಲ್ಲ ಎಂದು ಕಂಗನಾ ರನೌತ್ ಹೇಳಿದ್ದರು. ಈಗ ಮತ್ತೊಬ್ಬ ಬಾಲಿವುಡ್ ಮಂದಿ ಇವರಿಬ್ಬರ ಸಂಬಂಧದ ಬಗ್ಗೆ ಗಂಭೀರ ಆರೋಪ ಮಾತಾಡಿದ್ದಾರೆ.

"ರಣ್‌ಬೀರ್ ಕುಟುಂಬಕ್ಕೆ ಆಲಿಯಾ ಇಷ್ಟವಿಲ್ಲ"

ಕಂಗನಾ ರನೌತ್ ಬಳಿಕ ಬಾಲಿವುಡ್‌ನ ವಿವಾದಾತ್ಮಕ ಕ್ರಿಟಿಕ್ ಕೆಆರ್‌ಕೆ ಸರಿದಿ. ಈತ ಕೂಡ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಬಗ್ಗೆ ಹೊಸದೊಂದು ಶಾಕಿಂಗ್ ನ್ಯೂಸ್ ಹೊತ್ತು ಬಂದಿದ್ದಾರೆ. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಆಲಿಯಾ ಭಟ್ ಅನ್ನು ರಣ್‌ಬೀರ್ ಕಪೂರ್ ಕುಟುಂಬ ಇಷ್ಟ ಪಡುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಕೆಆರ್‌ಕೆ ಮಾಡಿದ ಕಮೆಂಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇಷ್ಟೇ ಅಲ್ಲದೆ ಕಂಗನಾ ಮಾಡಿದ ಆರೋಪವನ್ನೇ ಇಟ್ಟುಕೊಂಡು "ರಣ್‌ಬೀರ್ ಕಪೂರ್ ಬೇರೆ ಫ್ಲೋರ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಜೊತೆ ವಾಸವಿದ್ದಾರೆ. ಅದಕ್ಕೆ ಆಲಿಯಾ ಭಟ್ ತನ್ನ ಮಗಳು ರಾಹಾ ಜೊತೆ ಇದ್ದಾರೆ" ಎಂದು ಹೇಳಿದ್ದಾರೆ. ಇದು ಗಂಭೀರ ಚರ್ಚೆಗೆ ಗ್ರಾಸವಾಗಿದೆ.

ನೀತು ಕಪೂರ್ ಬರ್ತ್‌ಡೇ ಬಂದಿಲ್ವಾ ಆಲಿಯಾ?

ಅಷ್ಟಕ್ಕೂ ರಣ್‌ಬೀರ್ ಹಾಗೂ ಆಲಿಯಾ ಭಟ್ ಬಗ್ಗೆ ಇಂತಹ ಗಂಭೀರ ಆರೋಪ ಮಾಡುತ್ತಿರುವುದಕ್ಕೆ ಕಾರಣವಿದೆ. ಇತ್ತೀಚೆಗೆ ರಣ್‌ಬೀರ್ ಕಪೂರ್ ಅಮ್ಮ ನೀತು ಕಪೂರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಬರ್ತ್‌ಡೇಗೆ ಆಲಿಯಾ ಭಟ್ ಗೈರು ಹಾಜರಾಗಿದ್ದರು ಎನ್ನಲಾಗಿದೆ. ಅಲ್ಲಿಂದ ಇವರಿಬ್ಬರ ಸಂಬಂಧ ಸರಿಯಿಲ್ಲ ಎಂಬ ಸುದ್ದಿಗಳು ಓಡಾಡುತ್ತಿವೆ.

ಆದರೆ, ಆಲಿಯಾ ಭಟ್ ಬಾಲಿವುಡ್ ನಟ ರಣ್‌ವೀರ್ ಕಪೂರ್ ಜೊತೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣಕ್ಕೆ ಆಲಿಯಾ ಭಟ್ ಅತ್ತೆಯ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಆದ್ರೀಗ ಕಂಗನಾ ಹಾಗೂ ಕೆಆರ್‌ಕೆ ಇಬ್ಬರೂ ಮಾಡಿರುವ ಆರೋಪದಿಂದ ಅವರ ಅಭಿಮಾನಿಗಳ ನಿದ್ದೆ ಕೆಡಿಸಿದೆ.

More from Filmibeat

English summary
Ranbir Kapoor Family Doesn't Like Alia Bhatt Says KRK Shocking Comment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X