ಬಾಕ್ಸಾಫೀಸ್‌ನಲ್ಲಿ ರಣ್‌ಬೀರ್, ರಶ್ಮಿಕಾ ಜೋಡಿ ಗೆಲ್ಲುತ್ತಾ? :'ಎನಿಮಲ್' ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರವೇನು?
ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಸಿನಿಮಾ ಎನಿಮಲ್ ಇದೇ ವಾರ ಬಿಡುಗಡೆಯಾಗುತ್ತಿದೆ. ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿರುವುದರಿಂದ ಈಗಾಗಲೇ ಇಡೀ ಚಿತ್ರತಂಡ ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ.
ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಚಿತ್ರತಂಡದ ಪ್ರಮುಖರು 'ಎನಿಮಲ್' ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅಂದ್ಹಾಗೆ, ಎನಿಮಲ್ ಹಿಂದಿ ಜೊತೆಗೆ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲೂ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಕನ್ನಡದಲ್ಲಿ ಕೆವಿಎನ್ ನಿರ್ಮಾಣ ಸಂಸ್ಥೆ 'ಎನಿಮಲ್' ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಭಾರತದಲ್ಲಿ ಈ ಸಿನಿಮಾಗಿರೋ ಕ್ರೇಜ್ ನೋಡಿ ಟ್ರೇಡ್ ಎಕ್ಸ್‌ಪರ್ಟ್ಸ್ ಮೊದಲ ದಿನ ಕಲೆಕ್ಷನ್ ಬಗ್ಗೆ ಲೆಕ್ಕಾಚಾರ ಹಾಕಿದ್ದಾರೆ. ಫಸ್ಟ್ ಡೇನೇ 'ಎನಿಮಲ್' ದಾಖಲೆ ಕಲೆಕ್ಷನ್ ಮಾಡುತ್ತೆ ಎಂದು ಅಂದಾಜು ಹಾಕಲಾಗಿದೆ. ಬಹುಶ: ಇದು ರಶ್ಮಿಕಾ ಮಂದಣ್ಣ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಮಟ್ಟಿಗೆ ಓಪನಿಂಗ್ ಪಡೆದ ಸಿನಿಮಾ ಆಗಬಹುದೆಂದು ಅಂದಾಜಿಸಲಾಗಿದೆ.
'ಎನಿಮಲ್' ಟ್ರೈಲರ್ ರಿಲೀಸ್ ಆಗೋವರೆಗೂ ಇಷ್ಟೊಂದು ಕ್ರೇಜ್ ಇರಲಿಲ್ಲ. ಆದರೆ, ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಅಡ್ವಾನ್ ಬುಕಿಂಗ್‌ನಲ್ಲಿ ದಿಢೀರ್ ಬದಲಾವಣೆಯಾಗಿದೆ. ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ಕಾತುರರಾಗಿದ್ದಾರೆ. ಹೀಗಾಗಿ ಮೊದಲ ದಿನ ದಾಖಲೆ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
'ಎನಿಮಲ್' ಅಡ್ವಾನ್ಸ್ ಬುಕಿಂಗ್ ಅದ್ಭುತವಾಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ವರದಿ ನೀಡಿದ್ದಾರೆ. ದೇಶ ಹಾಗೂ ವಿದೇಶದಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಫಸ್ಟ್‌ಡೇನೇ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ 'ಎನಿಮಲ್' ಮೊದಲ ದಿನ 75 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಅಂದಾಜು ಹಾಕಿದ್ದಾರೆ.

'ಎನಿಮಲ್'ಗೆ ಕೇವಲ ಹಿಂದಿ ಭಾಷೆಯಲ್ಲಷ್ಟೇ ಅಲ್ಲ. ದಕ್ಷಿಣ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲೂ ಈ ಸಿನಿಮಾಗೆ ಕ್ರೇಜ್ ಇದೆ. ಕರ್ನಾಟಕದಲ್ಲಿ ಕನ್ನಡ ಡಬ್ಬಿಂಗ್‌ಗೆ ಬಗ್ಗೆ ಜನರು ಆಸಕ್ತಿ ತೋರದೇ ಹೋದರೂ, ಹಿಂದಿ ಅವತರಣಿಕೆ ಡಿಸೆಂಟ್ ಅಮೌಂಟ್ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಎಕ್ಸ್‌ಪರ್ಟ್‌ಗಳ ಪ್ರಕಾರ, ಹಿಂದಿ ಏರಿಯಾಗಳಲ್ಲಿ 30 ಕೋಟಿ ರೂಪಾಯಿ (ನೆಟ್ ಕಲೆಕ್ಷನ್) ಕಲೆಕ್ಷನ್ ಮಾಡಬಹುದೆಂದು ಅಂದಾಜು ಮಾಡಲಾಗಿದೆ. ಹಾಗೇ ದಕ್ಷಿಣ ಭಾರತದ ನಾಲ್ಕು ಭಾಷೆಗಳಿಂದ ಮೊದಲ ದಿನ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ದೇಶ ಹಾಗೂ ವಿದೇಶದಲ್ಲಿ 'ಎನಿಮಲ್' ಕ್ರೇಜ್ ನೋಡಿದ ಬಳಿಕ ಶಾರುಖ್ ಖಾನ್ 'ಪಠಾಣ್' ಹಾಗೂ 'ಜವಾನ್' ಸಿನಿಮಾದ ಮೊದಲ ದಿನ ಗಳಿಕೆಯನ್ನು ಬ್ರೇಕ್ ಮಾಡಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications











