ರಣ್‌ಬೀರ್ 'ಎನಿಮಲ್' ಟೀಸರ್ "ಟಿಕ್ ಟಾಕ್ ವಿಡಿಯೋ ತರ ಇದೆ.. ಕೊರಿಯನ್ ಸಿನಿಮಾ ರಿಮೇಕ್": ನೆಟ್ಟಿಗರು ಗರಂ

ದಕ್ಷಿಣ ಹಾಗೂ ಉತ್ತರ ಭಾರತೀಯ ಚಿತ್ರರಂಗದ ಸಂಮಿಶ್ರಣವೇ 'ಎನಿಮಲ್'. ರಣ್‌ಬೀರ್ ಕಪೂರ್ ರಗಡ್ ಲುಕ್‌ನಲ್ಲಿ ಬರ್ತಿದ್ದಾರೆ. ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಮತ್ತೊಂದು ಖಡಕ್ ಸಿನಿಮಾ ತೋರಿಸೋಕೆ ಹೊರಟಿದ್ದಾರೆ.

ಇಬ್ಬರ ಜೊತೆ ರಶ್ಮಿಕಾ ಮಂದಣ್ಣ ಪಾತ್ರವೇನು? ಅನ್ನೋದು ಸದ್ಯಕ್ಕಂತೂ ಕುತೂಹಲ. ಅಂದ್ಹಾಗೆ 'ಎನಿಮಲ್' ಸಿನಿಮಾ ಮೇಲೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ 'ಅರ್ಜುನ್ ರೆಡ್ಡಿ' ಹಾಗೂ 'ಕಬೀರ್ ಸಿಂಗ್' ಸಿನಿಮಾಗಳೇ ಕಾರಣ.

Ranbir Kapoor Rashmikas Animal Pre-Teaser Response: Comparing with the Oldboy Movie

'ಕಬೀರ್ ಸಿಂಗ್' ಸಿನಿಮಾ 'ಅರ್ಜುನ್ ರೆಡ್ಡಿ'ಯ ರಿಮೇಕ್. ಎರಡೂ ಸಿನಿಮಾಗಳೂ ಬಾಕ್ಸಾಫೀಸ್ ದೋಚಿದ್ದು ಗೊತ್ತೇ ಇದೆ. ಅದಕ್ಕೆ 'ಎನಿಮಲ್' ಮೇಲೆ ಎಲ್ಲರ ಕಣ್ಣಿಟ್ಟು ಕಾದಿದ್ದರು. ಹಂಗೂ ಹಿಂಗೂ ಕಾದಿದ್ದಕ್ಕೆ 'ಎನಿಮಲ್' ಪ್ರೀ ಟೀಸರ್ ರಿಲೀಸ್ ಆಗಿದೆ. ಆದರೆ, ಸಿನಿಪ್ರಿಯರಿಗ್ಯಾಕೋ ಈ ಟೀಸರ್ ಇಷ್ಟ ಆಗಿಲ್ಲ. ಜೊತೆ ಕೊರಿಯನ್ ಸಿನಿಮಾ ಜೊತೆ ಹೋಲಿಕೆ ಮಾಡುತ್ತಿದ್ದಾರೆ.

'ಎನಿಮಲ್' ಪ್ರೀ ಟೀಸರ್‌ಗೆ ಹೇಗಿದೆ ರೆಸ್ಪಾನ್ಸ್?

ರಣ್‌ಬೀರ್ ಕಪೂರ್ ಸಿನಿಮಾ 'ಎನಿಮಲ್' ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಯಾಕಂದ್ರೆ, ಸಂದೀಪ್ ರೆಡ್ಡಿ ವಂಗ ರಗಡ್ ಸಿನಿಮಾಗಳನ್ನು ಮಾಡಿ ಗೆದ್ದವರು. 'ಅರ್ಜುನ್ ರೆಡ್ಡಿ'ಯಂತಹ ರಗಡ್ ರೊಮ್ಯಾಂಟಿಕ್ ಸಿನಿಮಾವೇ ಅದಕ್ಕೆ ಸಾಕ್ಷಿ. ಹೀಗಾಗಿ ರಣ್‌ಬೀರ್ ಕಪೂರ್ ಅನ್ನೂ ಪಕ್ಕಾ ಮಾಸ್ ಅವತಾರದಲ್ಲಿ ತೋರಿಸಲಾಗುತ್ತೆ ಎನ್ನಲಾಗಿತ್ತು. ಈಗ ಅದೇ ಸಿನಿಮಾ ಪ್ರೀ ಟೀಸರ್ ರಿಲೀಸ್ ಮಾಡಿದ್ದಾರೆ.

'ಎನಿಮಲ್' ಪ್ರೀ ಟೀಸರ್ ರಿಲೀಸ್ ಅಗುತ್ತಿದ್ದಂತೆ ಕೆಲವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ಈ ಪ್ರೀ ಟೀಸರ್ ಇಷ್ಟ ಆಗಿಲ್ಲ. ಮತ್ತೆ ಕೆಲವರಿಗೆ ಪಂಜಾಬಿ ಹಾಡಿಗೆ ತಕರಾರು ತೆಗೆದಿದ್ದಾರೆ. ಇಷ್ಟು ದಿನ ಕಾದಿದ್ದಕ್ಕೂ ಖುಷಿ ಕೊಟ್ಟಿಲ್ಲ. ಆದರೆ, ರಣ್‌ಬೀರ್ ಮಾಸ್ ಲುಕ್ ಇನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿರೋದು ಫ್ಯಾನ್ಸ್‌ಗೆ ಸಮಧಾನ ಕೊಟ್ಟಿದೆ.

"ಟಿಕ್ ಟಾಕ್ ತರ ಇದೆ"

ರಣ್‌ಬೀರ್ ಕಪೂರ್ ಅಭಿನಯದ 'ಎನಿಮಲ್' ಪ್ರೀ ಟೀಸರ್ ರಿಲೀಸ್ ಆಗುತ್ತಿದ್ದಂತೆ ಜೋರಾಗಿಯೇ ಚರ್ಚೆಯಾಗುತ್ತಿದೆ. ನೆಟ್ಟಿಗರು ನೆಗೆಟಿವ್ ಆಗಿಯೇ ಹೆಚ್ಚು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ." ಸರ್ದಾರ್ ಒಬ್ಬರೇ ಅದು ಸನ್ನಿ ಡಿಯೋಲ್. ಹಾಗೇ ರಣ್‌ಬೀರ್ ಕಪೂರ್‌ಗೆ ಈ ದೇಸಿ ಆಕ್ಷನ್ ಲುಕ್ ಒಪ್ಪಿಗೆ ಆಗುತ್ತಲೇ ಇಲ್ಲ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು " ಇದಾ ಪ್ರೀ ಟೀಸರ್?.. ದಕ್ಷಿಣದ ನಿರ್ದೇಶಕ, ಪಂಜಾಬಿ ಹಾಡು, ಭೋಜ್‌ಪುರಿ ಆಕ್ಷನ್" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ಇದೇನು ಪ್ರೀ ಟೀಸರಾ? ಟಿಕ್ ಟಾಕ್ ವಿಡಿಯೋ ತರ ಇದೆ" ಎಂದು ಕಿಡಿ ಕಾರಿದ್ದಾರೆ. ರಣ್‌ಬೀರ್ 'ಎನಿಮಲ್' ಲುಕ್ ಅಷ್ಟೊಂದು ಮಜಾ ಕೊಟ್ಟಿಲ್ಲ.

ಕೊರಿಯನ್ ಸಿನಿಮಾ ಜೊತೆ ಹೋಲಿಕೆ

ರಣ್‌ಬೀರ್ ಕಪೂರ್ 'ಎನಿಮಲ್' ಪ್ರೀ ಟೀಸರ್‌ನಲ್ಲಿ ಪಂಜಾಬಿ ಹಾಡು ಬಳಸಿದ್ದಕ್ಕೆ ಹೆಚ್ಚು ಆಕ್ಷೇಪ ವ್ಯಕ್ತವಾಗುತ್ತಿದೆ. "ಎನಿಮಲ್ ಪ್ರಿ ಟೀಸರ್ ಮಾಸ್ ಆಗಿದೆ. ಆದರೆ, ಪಂಜಾಬಿ ಸಾಂಗ್ ಮೂಡನ್ನೇ ಹಾಳು ಮಾಡಿಬಿಡ್ತು" ಕಿಡಿ ಕಾರುತ್ತಿದ್ದಾರೆ. ಇನ್ನೊಂದು ಕಡೆ ಕೊರಿಯನ್ ಸಿನಿಮಾ 'ಓಲ್ಡ್‌ಬಾಯ್' ಸೀನ್ ಒಂದಕ್ಕೆ ಹೋಲಿಕೆ ಮಾಡಲಾಗುತ್ತಿದೆ.

'ಓಲ್ಡ್‌ಬಾಯ್' ಡಾರ್ಕ್ ಆಕ್ಷನ್, ಥ್ರಿಲ್ಲರ್ ಸಿನಿಮಾ ಆಗಿತ್ತು. 20 ವರ್ಷಗಳ ಹಿಂದೆ ತೆರೆಕಂಡಿರೋ ಈ ಕೊರಿಯನ್ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೇ ಬರೆದಿತ್ತು. ಇದರ ಒಂದು ಸೀನ್, ಎನಿಮಲ್‌ ಪ್ರೀ ಟೀಸರ್‌ಗೆ ಹೋಲಿಕೆಯಾಗುತ್ತಿದೆ ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ. ಹೀಗಾಗಿ 'ಎನಿಮಲ್' ಸೀಕ್ವೆನ್ಸ್‌ ಕೊರಿಯನ್ ಸಿನಿಮಾದಿಂದ ಎರವಲು ಪಡೆದಿದ್ದಾ? ಅನ್ನೋ ಪ್ರಶ್ನೆ ಹುಟ್ಟಿದೆ.

More from Filmibeat

English summary
Ranbir Kapoor Rashmika's Animal Pre-Teaser Response: Comparing with the Oldboy Movie, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X