ಆಲಿಯಾ ಜೊತೆ ಮದುವೆ ಆಗಿದ್ದ ಅಪಾರ್ಟ್‌ಮೆಂಟ್ ಬಾಡಿಗೆಗೆ ಬಿಟ್ಟ ರಣ್‌ಬೀರ್; ತಿಂಗಳಿಗೆ ಬಾಡಿಗೆ ಎಷ್ಟು ಗೊತ್ತೇ?
ಬಾಲಿವುಡ್ ಮಂದಿಗೆ ಹಣಕ್ಕೇನು ಕಮ್ಮಿ ಹೇಳಿ. ಒಂದು ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟರೆ ಮುಗೀತು, ಹತ್ತಾರು ಕೋಟಿ ಅವರ ಜೇಬಿಗೆ ಬಂದು ಬೀಳುತ್ತೆ. ಅದನ್ನೇ ಅವರು ಪ್ರಾಪರ್ಟಿ ಮೇಲೆ ಹೂಡಿಕೆ ಮಾಡುತ್ತಾರೆ. ಬಾಲಿವುಡ್ ಸ್ಟಾರ್‌ಗಳಂತೂ ಸಿನಿಮಾದಿಂದ ಹಣವನ್ನು ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್, ಬಂಗ್ಲೆ ಖರೀದಿ ಮಾಡುತ್ತಾರೆ. ಅದರಲ್ಲಿ ರಣ್‌ಬೀರ್ ಕಪೂರ್ ಏನು ಕಮ್ಮಿಯಿಲ್ಲ.
ಕಪೂರ್ ಕುಟುಂಬದ ಕುಡಿ ರಣ್‌ಬೀರ್ ಕಪೂರ್ ಮುಂಬೈನಲ್ಲಿ ಹಲವೆಡೆ ಪ್ರಾಪರ್ಟಿಗಳನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ಅಜ್ಜಿಯ ಹೆಸರಿನಲ್ಲಿ ಬೃಹತ್ ಬಂಗಲೆಯನ್ನೇ ನಿರ್ಮಾಣ ಮಾಡಿದ್ದಾರೆ. ಇದರ ಅಂದಾಜು ಮೌಲ್ಯ ಬರೋಬ್ಬರಿ 250 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಕೆಲವು ವರ್ಷಗಳಿಂದ ನಿರ್ಮಾಣ ಆಗುತ್ತಿದ್ದ ಈ ಬಂಗ್ಲೆಗೆ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಶಿಫ್ಟ್ ಆಗಿದ್ದಾರೆ.

ಈ ಮಧ್ಯೆ ಮಿಡ್-ಡೇ ರಣ್‌ಬೀರ್ ಕಪೂರ್ ಅಪಾರ್ಟ್‌ಮೆಂಟ್ ಒಂದನ್ನು ದಾಖಲೆ ಮೊತ್ತಕ್ಕೆ ಬಾಡಿಗೆಗೆ ಬಿಟ್ಟಿದ್ದಾರೆಂದು ವರದಿ ಮಾಡಿದೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ನಡೆದಿತ್ತು. ಹಾಗಿದ್ದರೆ, ಈ ಫ್ಲಾಟ್‌ನ ತಿಂಗಳ ಬಾಡಿಗೆ ಎಷ್ಟು? ಅದರ ವಿಸ್ತೀರ್ಣ ಎಷ್ಟು? ವಿಶೇಷತೆಗಳೇನು? ತಿಳಿಯುವುದಕ್ಕೆ ಮುಂದೆ ಓದಿ.
ಮದುವೆ ಆದ ಅಪಾರ್ಟ್‌ಮೆಂಟ್ ಬಾಡಿಗೆಗೆ
ಮುಂಬೈನ ಶ್ರೀಮಂತ ಏರಿಯಾಗಳಲ್ಲಿ ಒಂದಾಗಿರುವ ಪಾಲಿ ಹಿಲ್ಸ್‌ನಲ್ಲಿ ರಣ್‌ಬೀರ್ ಕಪೂರ್ ಅವರ ಐಷಾರಾಮಿ ಅಪಾರ್ಟ್‌ಮೆಂಟ್ ಇದೆ. 2016ರಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿಗೆ ಈ ಅಪಾರ್ಟ್‌ಮೆಂಟ್ ಅನ್ನು ಖರೀದಿ ಮಾಡಿದ್ದರು. ಅದನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಇಂಟೀರಿಯರ್ ಡಿಸೈನ್ ಮಾಡಿದ್ದರು. ಇದೇ ಅಪಾರ್ಟ್‌ಮೆಂಟ್‌ನಲ್ಲಿ ರಣ್‌ಬೀರ್ ಕಪೂರ್ ನಟಿ ಆಲಿಯಾರನ್ನು ವಿವಾಹವಾಗಿದ್ದರು.
ಈ ಅಪಾರ್ಟ್‌ಮೆಂಟ್ ಅನ್ನು ತಿಂಗಳಿಗೆ 11 ಲಕ್ಷ ರೂಪಾಯಿಯಂತೆ ರಣ್‌ಬೀರ್ ಕಪೂರ್ ಬಾಡಿಗೆಗೆ ಬಿಡಿದ್ದಾರೆಂದು ಮಿಡ್ ಡೇ ವರದಿ ಮಾಡಿದೆ. ಐದು ವರ್ಷಗಳಿಗೆ ಆದಿತ್ಯ ಶುಕ್ಲಾ ಎಂಬುವವರಿಗೆ ಬಾಡಿಗೆ ನೀಡಿದ್ದು, ಇದರಲ್ಲಿ 45 ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ಸೇರಿಕೊಂಡಿದೆ ಎಂದು ವರದಿಯಾಗಿದೆ.

ಅಪಾರ್ಟ್‌ಮೆಂಟ್ ಹೈಲೈಟ್ ಏನು?
ಮುಂಬೈನ ದುಬಾರಿ ಏರಿಯಾ ಪಾಲಿ ಹಿಲ್ಸ್‌ನಲ್ಲಿರುವ ಈ ಅಪಾರ್ಟ್‌ಮೆಂಟ್ ಇದ್ದು, ಅದರ ಏಳನೇ ಅಂತಸ್ಥಿನಲ್ಲಿ ರಣ್‌ಬೀರ್ ಕಪೂರ್ ಒಡೆತನದ ಫ್ಲ್ಯಾಟ್ ಇದೆ. ಇದರ ವಿಸ್ತೀರ್ಣ 2460 ಚದರ ಅಡಿ ಎಂದು ಹೇಳಲಾಗಿದೆ. ಸಕಲ ಸೌಲವತ್ತುಗಳು ಇರುವ ಈ ಫ್ಲಾಟ್ ಬಾಡಿಗೆಗೆ ಕೇಳಿ ಅವರ ಅಭಿಮಾನಿಗಳೇ ಕಂಗಾಲಾಗಿದ್ದಾರೆ.
ಹೊಸ ಮನೆಗೆ ಶಿಫ್ಟ್
2025ರಲ್ಲಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರೂ ತಮ್ಮ ಪುತ್ರಿ ರಾಹಾ ಜೊತೆಗೆ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಇತ್ತೀಚೆಗಷ್ಟೇ ನವೀಕರಣಗೊಂಡಿರುವ ಅವರ ಅಜ್ಜಿಯ ಹೆಸರಿನಲ್ಲಿ ಇರುವ ಕೃಷ್ಣ ರಾಜ್ ಬಂಗ್ಲೆಯಲ್ಲಿ ವಾಸವಿದ್ದಾರೆ. ಇದು ಕೂಡ ಮುಂಬೈನ ಪಾಲಿ ಹಿಲ್ಸ್ ಏರಿಯಾದಲ್ಲಿಯೇ ಇದೆ. ಈ ಬಂಗ್ಲೆ ಮುಂಬೈನ ಅತ್ಯಂತ ದುಬಾರಿ ಮೌಲ್ಯದ ಬಂಗ್ಲೆ ಎಂದು ಹೇಳಲಾಗಿದೆ. ಇದರ ಬೆಲೆ ಬರೋಬ್ಬರು 250 ಕೋಟಿ ರೂಪಾಯಿ. ಇದು ಸುಮಾರು ಆರು ಅಂತಸ್ಥಿನ ಬಂಗ್ಲೆ ಆಗಿದ್ದು, ರಿಷಿ ಕಪೂರ್ ಅವರ ಅಮ್ಮನ ಹೆಸರು ಇಡಲಾಗಿದೆ.


Click it and Unblock the Notifications
