'ಡಾರ್ಲಿಂಗ್ ಪ್ರಭಾಸ್ ನನ್ನ ಫೇವರಿಟ್ ಆಕ್ಟರ್' ಎಂದ ರಣ್‌ಬೀರ್ ಕಪೂರ್

'ಕೆಜಿಎಫ್ 2', RRR ಸಿನಿಮಾ ಬಳಿಕ ಬಾಲಿವುಡ್‌ ಕೂಡ ಮೈ ಕೊಡವಿ ಎದ್ದು ನಿಂತಿದೆ. ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬ್ರಹ್ಮಾಸ್ತ್ರ' ಸಿನಿಮಾ ಪ್ರಚಾರ ಆರಂಭ ಆಗಿದೆ. ಬಾಲಿವುಡ್‌ನ ರಣ್‌ಬೀರ್ ಕಪೂರ್ ಈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ರಣ್‌ಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಇದು ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಸಿನಿಮಾ ಪ್ರಚಾರ ಆರಂಭ ಮಾಡಲಾಗಿದೆ. ಈ ತಂಡಕ್ಕೆ ಟಾಲಿವುಡ್‌ನ ರಾಜಮೌಳಿ ಕೂಡ ಸಾಥ್ ನೀಡಿದ್ದಾರೆ.

ರಣ್‌ಬೀರ್ ಕಪೂರ್ ಇದೇ ಮೊದಲ ಬಾರಿಗೆ ತಮ್ಮ ಪ್ಯಾನ್ ಇಂಡಿಯಾ ಸಿನಿಮಾದ ಪ್ರಚಾರಕ್ಕಾಗಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. 'ಬ್ರಹ್ಮಾಸ್ತ್ರ' ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಹಾಗೂ ರಣ್‌ಬೀರ್ ಕಪೂರ್ ವೈಜಾಗ್‌ಗೆ ವಿಸಿಟ್ ಕೊಟ್ಟಿದ್ದರು. ಈ ವೇಳೆ ತೆಲುಗು ಸ್ಟಾರ್‌ಗಳನ್ನು ಮನಸಾರೆ ಹೊಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಭಾಸ್ ಬಗ್ಗೆ ಆಡಿದ ಮಾತು ಡಾರ್ಲಿಂಗ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

'ಡಾರ್ಲಿಂಗ್ ಪ್ರಭಾಸ್ ನನ್ನ ಫೇವರಿಟ್'

'ಡಾರ್ಲಿಂಗ್ ಪ್ರಭಾಸ್ ನನ್ನ ಫೇವರಿಟ್'

'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರಕ್ಕಾಗಿ ರಣ್‌ಬೀರ್ ಕಪೂರ್ ವೈಜಾಗ್‌ಗೆ ಬಂದಿದ್ದರು. ಈ ವೇಳೆ ರಣ್‌ಬೀರ್ ಕಪೂರ್ ತಮ್ಮ ಫ್ಯಾನ್ಸ್ ಜೊತೆ ಹಾಗೂ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ರಣ್‌ಬೀರ್ ಕಪೂರ್‌ಗೆ ನಿಮ್ಮ ಫೇವರಿಟ್ ತೆಲುಗು ನಟ ಯಾರು ಎಂದು ಪ್ರಶ್ನೆ ಮಾಡಿದ್ದರು. "ಐ ಲವ್ ಡಾರ್ಲಿಂಗ್ ಪ್ರಭಾಸ್. ಅವರು ನನಗೆ ಒಳ್ಳೆಯ ಸ್ನೇಹಿತ. ಎಲ್ಲರೂ ಅದ್ಭುತ ನಟರೇ.. ಆದರೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಅಂದರೆ, ಅವರು ಪ್ರಭಾಸ್." ಎಂದು ಹೇಳಿದ್ದಾರೆ.

ರಾಜಮೌಳಿಗೆ ನಮಸ್ಕರಿಸಿದ ರಣ್‌ಬೀರ್

ರಾಜಮೌಳಿಗೆ ನಮಸ್ಕರಿಸಿದ ರಣ್‌ಬೀರ್

'ಬ್ರಹ್ಮಾಸ್ತ್ರ' ಸಿನಿಮಾದ ಹೀರೊ ರಣ್‌ಬೀರ್ ಕಪೂರ್ ತಮ್ಮ ನೆಚ್ಚಿನ ನಟ ಪ್ರಭಾಸ್ ಎನ್ನುತ್ತಿದ್ದಂತೆ ಡಾರ್ಲಿಂಗ್ ಅಭಿಮಾನಿಗಳು ಹಿರಿ ಹಿರಿ ಹಿಗ್ಗಿದ್ದಾರೆ. ಇದೇ ವೇಳೆ ವೇದಿಕೆ ಮೇಲೆ ಮೂವಿ ಮಾಂತ್ರಿಕ ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣ್‌ಬೀರ್ ಬಗ್ಗೆನೂ ಟಾಲಿವುಡ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ದಕ್ಷಿಣ ಭಾರತಕ್ಕೆ ಕಾಲಿಡುತ್ತಿರುವ ರಣ್‌ಬೀರ್ ಮೊದಲ ಯತ್ನದಲ್ಲಿಯೇ ಒಳ್ಳೆ ಅಭಿಪ್ರಾಯ ಗಿಟ್ಟಿಸಿಕೊಂಡಿದ್ದಾರೆ.

ರಜನಿ, ಕಮಲ್ ಬಿಗ್ ಫ್ಯಾನ್

ಇದೇ ವೇದಿಕೆ ಮೇಲೆ ರಣ್‌ಬೀರ್ ದಕ್ಷಿಣ ಭಾರತದ ಬಗ್ಗೆನೂ ಹೇಳಿದ್ದಾರೆ. "ನಾನು ದಕ್ಷಿಣ ಭಾರತದ ಸಿನಿಮಾಗಳ ದೊಡ್ಡ ಫ್ಯಾನ್. ರಜನಿ ಸರ್, ಕಮಲ್ ಸರ್, ಚಿರಂಜೀವಿಯವರು, ಪವನ್ ಕಲ್ಯಾಣ್ ಅವರ ಸಿನಿಮಾ ಅಭಿಮಾನಿ. ಜೂ.ಎನ್‌ಟಿಆರ್ ಮತ್ತು ರಾಮ್‌ ಚರಣ್ ನನ್ನ ಅತ್ಯುತ್ತಮ ಸ್ನೇಹಿತರು. ಪವನ್ ಕಲ್ಯಾಣ ಅವರ ಕ್ರೇಜ್‌ ನನಗೆ ಇಷ್ಟ. ಅವರು ಸಿನಿಮಾವನ್ನು ಸಂಭ್ರಮಿಸುತ್ತಾರೆ. ಮನರಂಜನೆಯ ಪರಿಶುದ್ಧ ರೂಪ" ಎಂದಿದ್ದಾರೆ.

ಬ್ರಹ್ಮಾಸ್ತ್ರ ದಿಗ್ಗಜರ ಸಮಾಗಮ

ಬ್ರಹ್ಮಾಸ್ತ್ರ ದಿಗ್ಗಜರ ಸಮಾಗಮ

'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ದಿಗ್ಗಜರ ಸಮಾಗಮವೇ ಆಗಿದೆ. ರಣ್‌ಬೀರ್ ಕಪೂರ್ ಜೊತೆ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಮನ್ಮಥ ನಾಗಾರ್ಜುನಾ ಕೂಡ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ದಿಗ್ಗಜರು ಸೇರಿರುವ ಈ ಸಿನಿಮಾವನ್ನುಅಯನ್ ಮುಖರ್ಜಿ ನಿರ್ದೇಶಿಸಿದ್ದು, ಎರಡು ಪಾರ್ಟ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.

More from Filmibeat

English summary
Ranbir Kapoor Says Darling Prabhas is His Favourite Actor and Fan Of South Movies, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X