ರಣ್‌ಬೀರ್ ಕಪೂರ್ ಸಹಾಯಹಸ್ತ: ಬಡ ಮಕ್ಕಳಿಗಾಗಿ 10 ಸಾವಿರ 'ಆದಿಪುರುಷ್' ಟಿಕೆಟ್ ಖರೀದಿ

ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಸಿನಿಮಾ 'ಆದಿಪುರುಷ್' ಬಿಡುಗಡೆಗೆ ಇನ್ನೊಂದು ವಾರ ಬಾಕಿಯಿದೆಷ್ಟೇ. ಹೀಗಾಗಿ ಇಡೀ ಚಿತ್ರತಂಡ ಸಿನಿಮಾವನ್ನು ಬಿಡುವಿಲ್ಲದೆ ಪ್ರಚಾರ ಮಾಡುತ್ತಿದೆ. ಜೂನ್ 16ರಂದು ಅದ್ಧೂರಿಯಾಗಿ ಈ ಸಿನಿಮಾ ರಿಲೀಸ್ ಆಗುತ್ತಿದೆ.

ಒಂದ್ಕಡೆ 'ಆದಿಪುರುಷ್' ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೆ. ಇನ್ನೊಂದು ಕಡೆ ಸೆಲೆಬ್ರೆಟಿಗಳು ಸಿನಿಮಾ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಈ ಸಿನಿಮಾವನ್ನು ಮಕ್ಕಳಿಗೆ ತಲುಪಿಸುವುದಕ್ಕೆ ಮುಂದೆ ಬಂದಿದ್ದಾರೆ. ಈ ಬಗ್ಗೆ ಹೊಸ ಅಭಿಯಾನವೇ ಆರಂಭ ಆಗಿದೆ.

Ranbir Kapoor to Book Adipurush tickets for 10,000 underprivileged kids

ಬಾಲಿವುಡ್‌ ಸೆಲೆಬ್ರೆಟಿಗಳು 'ಆದಿಪುರುಷ್' ಸಿನಿಮಾವನ್ನು ಬಡ ಮಕ್ಕಳಿಗೆ ತೋರಿಸಲು ಈ ಅಭಿಯಾನ ಶುರು ಮಾಡಿದ್ದಾರೆ. 10 ಸಾವಿರ ಟಿಕೆಟ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. 'ಕಾಶ್ಮೀರ್ ಫೈಲ್ಸ್' ನಿರ್ಮಾಪಕನ ಬಳಿಕ ಈಗ ರಣ್‌ಬೀರ್ ಕಪೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಣ್‌ಬೀರ್ ಕಪೂರ್‌ 10 ಸಾವಿರ ಟಿಕೆಟ್

ಬಾಲಿವುಡ್ ನಟ ರಣ್‌ಬೀರ್ ಕಪೂರ್ 'ಆದಿಪುರುಷ್' ಸಿನಿಮಾದ 10 ಸಾವಿರ ಟಿಕೆಟ್‌ಗಳನ್ನು ಖರೀದಿ ಮಾಡಲು ಮುಂದೆ ಬಂದಿದ್ದಾರೆ. ಈ ಟಿಕೆಟ್‌ಗಳನ್ನು ಬಡ ಮಕ್ಕಳಿಗೆ ನೀಡಲಾಗುತ್ತಿದ್ದು, ಅವರಿಗೆ 'ಆದಿಪುರುಷ್' ಸಿನಿಮಾವನ್ನು ತೋರಿಸಲಾಗುತ್ತದೆ. ರಣ್‌ಬೀರ್ ಕಪೂರ್ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಷಯವನ್ನು ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ ಟ್ವೀಟ್ ಮಾಡಿದ್ದಾರೆ. "ರಣ್‌ಬೀರ್ ಕಪೂರ್ 10 ಸಾವಿರ ಟಿಕೆಟ್‌ಗಳನ್ನು ಬಡ ಮಕ್ಕಳಿಗಾಗಿ ಬುಕ್ ಮಾಡುತ್ತಿದ್ದಾರೆ." ಎಂದು ತರಾನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

'ಕಾಶ್ಮೀರ್ ಫೈಲ್ಸ್' ನಿರ್ಮಾಪಕನಿಂದ ಟಿಕೆಟ್ ಖರೀದಿ

'ದಿ ಕಾಶ್ಮೀರ್ ಫೈಲ್ಸ್', 'ಕಾರ್ತಿಕೇಯ 2' ಅಂತಹ ಸಿನಿಮಾಗಳ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮೊದಲ ಅಭಿಯಾನ ಶುರು ಮಾಡಿದ್ದಾರೆ. ನಿರ್ಮಾಪಕ ಅಭಿಷೇಕ್ 10 ಸಾವಿರ 'ಆದಿಪುರುಷ್' ಟಿಕೆಟ್‌ಗಳನ್ನು ಖರೀದಿ ಮಾಡುತ್ತಿರುವ ವಿಷಯವನ್ನೂ ತರಾನ್ ಆದರ್ಶ್ ಟ್ವೀಟ್ ಮಾಡಿದ್ದರು.

'ಆದಿಪುರುಷ್' ಸಿನಿಮಾದ 10 ಸಾವಿರ ಟಿಕೆಟ್‌ಗಳನ್ನು ತೆಲಂಗಾಣದ ಸರ್ಕಾರಿ ಶಾಲೆಗಳಾ ಮಕ್ಕಳಿಗೆ, ಅನಾಥ ಮಕ್ಕಳಿಗೆ ಹಾಗೂ ಅನಾಥಾಶ್ರಮದಲ್ಲಿರುವ ವೃದ್ಧಿರಿಗೆ ಹಂಚಲಾಗುತ್ತಿದೆ. ಎಲ್ಲಾ ವರ್ಗದವರೂ ಈ ಪೌರಾಣಿಕ ಸಿನಿಮಾವನ್ನು ನೋಡಲಿ ಎಂಬ ಕಾರಣಕ್ಕೆ ಈ ಪ್ರಯತ್ನಕ್ಕೆ ಮುಂದಾಗಿದ್ದರು.

ಮುಂದುವರೆಯುತ್ತಾ ಅಭಿಯಾನ?

'ಕಾಶ್ಮೀರ್ ಫೈಲ್ಸ್' ನಿರ್ಮಾಪಕನ ಬಳಿಕ ಬಡ ಮಕ್ಕಳು ಹಾಗೂ ಅಸಹಾಯಕರಿಗಾಗಿ ರಣ್‌ಬೀರ್ ಕಪೂರ್ ಕೂಡ 10 ಸಾವಿರ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ಮತ್ತಷ್ಟು ಸೆಲೆಬ್ರೆಟಿಗಳಿಗೆ ಇದು ಪ್ರೇರಣೆಯಾಗಬಹುದು. ಹೀಗಾಗಿ ಈ ಅಭಿಯಾನಕ್ಕೆ ಯಾವ್ಯಾವ ಸೆಲೆಬ್ರೆಟಿಗಳು ಕೈ ಜೋಡಿಸುತ್ತಾರೆ ಅನ್ನೋ ಕುತೂಹಲವಿದೆ.

ಓಂ ರಾವುತ್ ನಿರ್ದೇಶಿಸಿದ 'ಆದಿಪುರುಷ್' ಸಿನಿಮಾ ಬಗ್ಗೆ ಕಮೆಂಟ್ ಏನೇ ಇದ್ದರೂ, ಅಪರೂಪಕ್ಕೆ ಬರುವ ಈ ಸಿನಿಮಾವನ್ನು ನೋಡುವ ತವಕದಲ್ಲಿದ್ದಾರೆ. ಆದರೆ, ಟಿಕೆಟ್ ಬೇರೆ ಹೆಚ್ಚಿರುವ ಕಾರಣ ಅಸಹಾಯಕರು ನೋಡಲು ಅಸಾಧ್ಯವಾಗಬಹುದು. ಹೀಗಾಗಿ ಈ ಸಹಾಯಹಸ್ತ ಅಸಹಾಯಕರಿಗೆ ಅನುಕೂಲ ಆಗಬಹುದು.

More from Filmibeat

English summary
Ranbir Kapoor to Book Adipurush tickets for 10,000 underprivileged kids, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X