Ramayana X Review:'ಆದಿಪುರುಷ್' ಆಯ್ತು.. ಈಗ 'ರಾಮಾಯಣ' ಟೀಸರ್ ನೆಟ್ಟಿಗರು ಕಿಡಿ.. ಅಂತಹದ್ದೇನಾಗಿದೆ?
ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ 'ರಾಮಾಯಣ'. ಸುಮಾರು 4 ಸಾವಿರ ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬಾಲಿವುಡ್ ನಟ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ಸೇರಿದಂತೆ ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2 ಸಾವಿರ ಕೋಟಿ ಸಿನಿಮಾ ಕೊಟ್ಟಿರುವ ನಿತೇಶ್ ತಿವಾರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇಷ್ಟೆಲ್ಲ ಇರುವಾಗ ಸಿನಿಮಾ ಬಗ್ಗೆ ನಿರೀಕ್ಷೆ ಇರದೇ ಹೋದರೆ ಹೇಗೆ? ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಇವರನ್ನು ಕಣ್ತುಂಬಿ ಕೊಳ್ಳುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದರು. ಅದಕ್ಕೂ ಮುನ್ನ ಟೀಸರ್ ನೋಡುವುದಕ್ಕೆ ಎದುರು ನೋಡುತ್ತಿದ್ದರು. ನಿರೀಕ್ಷೆಯಂತೆ ಸಿನಿಮಾ ಟೀಸರ್ ರಿಲೀಸ್ ಆಗಿದೆ.

'ರಾಮಾಯಣ ಟೀಸರ್ ನೋಡಿ ಕೆಲ ನೆಟ್ಟಿಗರಿಗೆ ನಿರಾಸೆಯಾಗಿದೆ. ಕೆಲವರು 'ಆದಿಪುರುಷ್' ಸಿನಿಮಾದ ಜೊತೆ ಹೋಲಿಕೆ ಮಾಡುತ್ತಿದ್ದು, ಇದು ಆದಿಪುರುಷ್ 2.0 ಎಂದು ಹೇಳುತ್ತಿದ್ದಾರೆ. ವಿಎಫ್‌ಎಕ್ಸ್ ಹಾಗೂ ವಿಜ್ಯೂವಲ್ಸ್ ನೆಟ್ಟಿಗರಿಗೆ ಇಷ್ಟ ಆಗಿಲ್ಲ. ಹಾಗಿದ್ದರೆ, ಎಕ್ಸ್‌ನಲ್ಲಿ 'ರಾಮಾಯಾಣ' ಟೀಸರ್‌ಗೆ ಏನೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
₹4 ಸಾವಿರ ಕೋಟಿ ಸಿನಿಮಾ ಕೆಟ್ಟದಾಗಿ ಕಾಣಿಸಬಹುದು
ಆದಿಪುರುಷ್ ಸಿನಿಮಾ ತುಂಬಾನೇ ಕೆಳಮಟ್ಟದಲ್ಲಿ ಇತ್ತು. ಇದು, ನಿಮ್ಮಲ್ಲಿ ಕೆಲವರಿಗೆ ಸಿನಿಮ್ಯಾಟಿಕ್ ಆಗಿ ಕಾಣಿಸಿರಬಹುದು. ಇಲ್ಲದೇ ಹೋದಲ್ಲಿ ₹4 ಸಾವಿರ ಕೋಟಿಯ ಸಿನಿಮಾ ಕೆಟ್ಟದಾಗಿ ಕಾಣಿಸಿಬಹುದು. ಕೆಲವು ಶಾರ್ಟ್‌ಗಳು ವರ್ಕ್ ಆಗಿವೆ. ಇನ್ನು ಕೆಲವು ಎಐನಿಂದ ಜನರೇಟ್ ಮಾಡಿದಂತೆ ಇದೆ. ಇನ್ನೂ ಅದ್ಭುತವಾದದನ್ನು ನಿರೀಕ್ಷೆ ಮಾಡಿದ್ದೇವು. ಈ ಸಿನಿಮಾ ಬಿಡುಗಡೆಗೂ ಮುನ್ನ ಇದನ್ನೆಲ್ಲ ಸರಿಪಡಿಸುತ್ತಾರೆಂಬ ನಂಬಿಕೆಯಿದೆ.
ರಾಮ ತಲೆ ಕೂದಲು ಅಲ್ಲಾಡುವುದಿಲ್ಲ
"ಈ ಸಿನಿಮಾದ ಟೀಸರ್‌ನಲ್ಲಿ ರಾಮ ಬಿರುಗಾಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾನೆ. ಹೀಗಿದ್ದರೂ ರಾಮನ ತಲೆ ಕೂದಲು ಹಾಗೂ ಬಟ್ಟೆ ಒಂದು ಸ್ವಲ್ಪವೂ ಅಲ್ಲಾಡಿಲ್ಲ" ಎಂದು ಇನ್ನೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ರಾಮನ ಹೆಸರಲ್ಲಿ ಹಣ ಪೀಕುತಿದ್ದಾರೆ
"ಇದು ನಿಜವಾಗಿಯೂ ನಿರೀಕ್ಷೆಗಿಂತಲೂ ಕೆಳ ಮಟ್ಟದಲ್ಲಿದೆ. ಗ್ರಾಫಿಕ್ಸ್ ನೋಡುವುದಕ್ಕೆ ರಿಯಲ್ ಅಂತ ಅನಿಸುವುದಿಲ್ಲ. ಆದಿಪುರುಷ್ ಸಿನಿಮಾದಿಂದ ಬಾಲಿವುಡ್ ಮಂದಿ ಕಲಿತಿದ್ದಾರೆಂದು ನಾನು ಭಾವಿಸಿದ್ದೆ. ಆದರೆ, ಅವರೆಲ್ಲರೂ ಒಂದೇ. ಅವರೆಲ್ಲರೂ ಶ್ರೀರಾಮ ಹಾಗೂ ನಮ್ಮ ಸಂಸ್ಕೃತಿಯ ಹೆಸರಿನಲ್ಲಿ ಹಣವನ್ನು ಪೀಕುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ" ಎಂದು ಇನ್ನೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
"ಆ ಹುಡುಗ ಏನು ಮಾಡುತ್ತಿದ್ದಾನೆ"
"ಇಂತಹ ಸಣ್ಣ ಸಣ್ಣ ಡಿಟೈಲ್‌ಗಳನ್ನು ಪಾಯಿಂಟ್ ಮಾಡುವುದಕ್ಕೆ ಇಷ್ಟವಿಲ್ಲ. ಆದರೆ, ಎಡ ಭಾಗದಲ್ಲಿರುವ ಬಾಲಕನೊಬ್ಬ ರಣ್‌ಬೀರ್ ತೆರಳಿದ ಬಳಿಕ ಕೈ ಮುಗಿಯುತ್ತಾನೆ. ಅದೇ ಹುಡುಗ ಇನ್ನೊಂದು ಸೀನ್‌ನಲ್ಲಿ ರಣ್‌ಬೀರ್‌ಗೆ ಹೂವನ್ನು ಎಸೆಯುತ್ತಿರುವುದನ್ನು ತೋರಿಸಲಾಗಿದೆ." ಎಂದು ಮತ್ತೊಬ್ಬ ನೆಟ್ಟಿಗರು ಹುಡುಕಿ ತೆಗೆದಿದ್ದಾರೆ.
ಟ್ರೋಲಿಂಗ್ ಒಳ್ಳೆಯದಲ್ಲ
"ರಾಮಾಯಣ ಸಿನಿಮಾವು ತನ್ನದೇ ಆದ ಕೆಲವು ನ್ಯೂನತೆಗಳನ್ನು ಹೊಂದಿದೆ. ಅದರಲ್ಲೂ ವಿಎಫ್‌ಎಕ್ಸ್ ಹಾಗೂ ಲೈಟಿಂಗ್ ವಿಷಯದಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಆದರೆ, ಟ್ರೋಲಿಂಗ್ ಮಾಡುತ್ತಿರುವ ಲೆವಲ್ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಭರವಸೆ ಮೂಡಿಸಿದ್ದಾರೆ. ಈ ಸಿನಿಮಾವನ್ನು ಸುಧಾರಣೆ ಮಾಡುವುದಕ್ಕೆ ಇನ್ನೂ ಸಮಯವಿದೆ. ಟೀಕೆ ಹಾಗೂ ಅನಗತ್ಯ ಟ್ರೋಲಿಂಗ್ ಸರಿಯಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications















