ರಶ್ಮಿಕಾಗೆ ಟಕ್ಕರ್ ಕೊಟ್ಟ 'ಅನಿಮಲ್' ನಟಿ ಈಗ ನ್ಯಾಷನಲ್ ಕ್ರಶ್; ಭಾವಿ ಪತಿಯ ಬಗ್ಗೆ ತ್ರಿಪ್ತಿ ಡಿಮ್ರಿ ಹೇಳಿದ್ದೇನು?
ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಯಶಸ್ಸು ಕೊಟ್ಟ ಸಿನಿಮಾ 'ಅನಿಮಲ್'. ಹಾಗಂತ ಈ ಸಿನಿಮಾ ಮೂಲಕ ಇವರಿಬ್ಬರಿಗೆ ಜನಪ್ರಿಯತೆ ಸಿಕ್ಕಿತಾ ಅಂದ್ರೆ, ಅದು ಸುಳ್ಳು. ಚಿಕ್ಕದೊಂದು ಪಾತ್ರದಲ್ಲಿ ಬಂದು ಹೋಗುವ ಬಾಲಿವುಡ್ ನಟಿ ತ್ರಿಪ್ತಿ ಡಿಮ್ರಿ ಇವರಿಬ್ಬರಿಗಿಂತೂ ಹೆಚ್ಚು ಫೇಮಸ್ ಆಗಿದ್ದಾರೆ.
ತೆರೆಮೇಲೆ ಕೆಲವೇ ಹೊತ್ತು ಕಾಣಿಸಿಕೊಂಡರೂ ಪಡ್ಡೆ ಹುಡುಗರ ಹೃದಯ ಕದಿಯುವಲ್ಲಿ ಗೆದ್ದಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಯಿದ್ದ ನ್ಯಾಷನಲ್ ಕ್ರಶ್ ಪಟ್ಟ ಸಲೀಸಾಗಿ ಈಕೆಯ ಮಡಿಲು ಸೇರಿದೆ. ಸದ್ಯ ಬಾಲಿವುಡ್ ನಟಿ ತ್ರಿಪ್ತಿ ಡಿಮ್ರಿ ಯುವಕರ ಫೇವರಿಟ್ ನಟಿಯಾಗಿಬಿಟ್ಟಿದ್ದಾರೆ.

'ಅನಿಮಲ್' ಸಿನಿಮಾದಲ್ಲಿ ಸಿಕ್ಕಿದ್ದು ಚಿಕ್ಕದೊಂದು ಪಾತ್ರ ಅಷ್ಟೇ. ಆದರೆ, ರಶ್ಮಿಕಾ ಮಂದಣ್ಣಗೂ ಸಿಗದ ಮನ್ನಣೆ ಈಕೆಗೆ ಸಿಕ್ಕಿದೆ. ಕಳೆದ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಇದೆ. ಆ ರೇಂಜ್‌ನಲ್ಲಿ ತೃಪ್ತಿ ಡಿಮ್ರಿ ಫೇಮಸ್ ಆಗಿದ್ದಾರೆ.
ತ್ರಿಪ್ತಿ ಡಿಮ್ರಿಗೆ 'ಅನಿಮಲ್' ಸಿನಿಮಾಗಿಂತಲೂ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ 6 ಲಕ್ಷ ಫಾಲೋವರ್ಸ್ ಅಷ್ಟೇ ಹೊಂದಿದ್ದರು. ಅದೇ 'ಅನಿಮಲ್' ರಿಲೀಸ್ ಆದ ಬಳಿಕ ಸುಮಾರು 48 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ತ್ರಿಪ್ತಿ ಡಿಮ್ರಿಗೆ ಸಂಬಂಧಿಸಿದ ಚಿಕ್ಕದೊಂದು ಅಪ್‌ಡೇಟ್ ಸಿಕ್ಕರೂ ವೈರಲ್ ಆಗುವುದಕ್ಕೆ ಶುರುವಾಗಿದೆ. ಈ ನಟಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಇಲ್ಲಿ ಆಕೆಯ ಮದುವೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ತ್ರಿಪ್ತಿ ಡಿಮ್ರಿ ಕೊಟ್ಟ ನಾಲ್ಕು ಅಕ್ಷರದ ಉತ್ತರ ಕೂಡ ವೈರಲ್ ಆಗುತ್ತಿದೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತ್ರಿಪ್ತಿ ಡಿಮ್ರಿ ತಮ್ಮ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಅಂತಹ ಯಾವುದೇ ಆಲೋಚನೆಗಳೂ ಇಲ್ಲ. ಸಿನಿಮಾ ಕಡೆಗೆ ಹೆಚ್ಚು ಗಮನಹರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ತಾನು ಮದುವೆ ಆಗುವ ಭಾವಿ ಪತಿ ಹೇಗಿರಬೇಕು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ಹಣ ಹಾಗೂ ಜನಪ್ರಿಯತೆ ಜೊತೆಗೆ ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿರಬೇಕು" ಎಂದು ಚಿಕ್ಕದಾಗಿ ಚೊಕ್ಕದಾಗಿ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ತ್ರಿಪ್ತಿ ಡಿಮ್ರಿ ಕೇವಲ ನಟಿಯಷ್ಟೇ ಅಲ್ಲ. ಬುದ್ದಿವಂತೆ ಅನ್ನೋದನ್ನು ಕೆಲವೇ ಶಬ್ದಗಳಲ್ಲಿ ಉತ್ತರಿಸಿದ್ದಾರೆ. ಈ ಹೇಳಿಕೆಯ ಬಗ್ಗೆ ಯುವಕರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.
ತ್ರಿಪ್ತಿ ಡಿಮ್ರಿ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದು ಚಿತ್ರೀಕರಣದ ಹಂತದಲ್ಲಿದ್ದರೆ, ಇನ್ನೊಂದು ಪೋಸ್ಟ್ ಪ್ರೊಡಕ್ಷನ್ ಸ್ಟೇಜ್‌ನಲ್ಲಿದೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. 'ಜೆರ್ಸಿ' ಸಿನಿಮಾ ನಿರ್ದೇಶಿಸಿರೊ ಗೌತನ್ ತಿನ್ನನೂರಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದರು ತೃಪ್ತಿ ಡಿಮ್ರಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿಯಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


Click it and Unblock the Notifications











