'ರಂಗೀಲಾ' ನಟಿ ಊರ್ಮಿಳಾ ಮಾತೋಂಡ್ಕರ್ ದಾಂಪತ್ಯ ಜೀವನದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ?

ಒಂದು ಕಾಲದಲ್ಲಿ ಬಾಲಿವುಡ್‌ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ ಊರ್ಮಿಳಾ ಮಾತೋಂಡ್ಕರ್. ಈಕೆಯ ದಾಂಪತ್ಯ ಜೀವನದಲ್ಲೀಗ ಬಿರುಕು ಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಎಂಟು ವರ್ಷಗಳ ದಾಂಪತ್ಯ ಜೀವನದ ಬಳಿಕ ಪತಿ ಮೋಸಿನ್ ಅಖ್ತರ್ ಮಿರ್ ಅವರಿಂದ ಬೇರೆಯಾಗುವುದಕ್ಕೆ ನಿರ್ಧರಿಸಿದ್ದಾರೆ.

ಊರ್ಮಿಳಾ ಮಾತೋಂಡ್ಕರ್ 2016ರ ಫೆಬ್ರವರಿ 4ರಂದು ಮೋಸಿನ್ ಅಖ್ತರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ವಿವಾಹ ಹಲವು ಕಾರಣಗಳಿಗೆ ಸುದ್ದಿಯಾಗಿತ್ತು. ಊರ್ಮಿಳಾ ಮಾತೋಂಡ್ಕರ್ ಹಾಗೂ ಮೋಸಿನ್ ನಡುವೆ ಸುಮಾರು 10 ವರ್ಷಗಳ ವಯಸ್ಸಿನ ಅಂತರವಿತ್ತು. ಅಲ್ಲದೇ ಅಂತರ್‌ಧರ್ಮೀಯ ವಿವಾಹ ಆಗಿದ್ದರಿಂದ ಸಾಕಷ್ಟು ಸುದ್ದಿಯಲ್ಲಿತ್ತು.

Rangeela actress Urmila Matondkar files for divorce from husband Mohsin Akhtar Mir report

ಎಂಟು ವರ್ಷಗಳ ಕಾಲ ಒಟ್ಟಿಗೆ ಸಂಸಾರ ಮಾಡಿದ್ದ ಈ ಜೋಡಿ ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ. ಮುಂಬೈ ಕೋರ್ಟ್‌ನಲ್ಲಿ ಊರ್ಮಿಳಾ ಮಾತೋಂಡ್ಕರ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು ಖಾತರಿಯಾಗಿದ್ದು, ಇದಕ್ಕೆ ಕಾರಣಗಳೇನು ಅನ್ನೋದು ಇನ್ನೂ ಬೆಳಕಿಗೆ ಬಂದಿಲ್ಲ. ಈ ವಿಷಯ ಊರ್ಮಿಳಾ ಮಾತೋಂಡ್ಕರ್ ಅಭಿಮಾನಿಗಳಂತೂ ಶಾಕ್ ಆಗಿದೆ.

ಊರ್ಮಿಳಾ ಮಾತೋಂಡ್ಕರ್ ಹಾಗೂ ಪತಿ ಮೋಸಿನ್ ಅಖ್ತರ್ ಮಿರ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು 2014ರಲ್ಲಿ. ಬಾಲಿವುಡ್‌ನ ಡಿಸೈನರ್ ಮನೀಶ್ ಮಲ್ಹೋತ್ರಾ ಸೊಸೆಯ ಮದುವೆ ಸಂದರ್ಭದಲ್ಲಿ ಊರ್ಮಿಳಾ ಮಾತೋಂಡ್ಕರ್ ಹಾಗೂ ಮೋಸಿನ್ ಭೇಟಿಯಾಗಿತ್ತು. ಕಾಶ್ಮೀರ ಮೂಲದ ಮೋಸಿನ್ ಆ ವೇಳೆ ಉದ್ಯಮಿ ಹಾಗೂ ಮಾಡಲ್ ಆಗಿ ಗುರುತಿಸಿಕೊಂಡಿದ್ದರು. ಇಲ್ಲಿಂದ ಪರಿಚಯ ಬೆಳೆದು 2016ರಲ್ಲಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದರು.

ಊರ್ಮಿಳಾ ಮಾತೋಂಡ್ಕರ್ ವಿಚ್ಚೇದನದ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಾಗಿ ಮಾತಾಡಿದ ಊರ್ಮಿಳಾ ಮಾತೋಂಡ್ಕರ್ ಈ ವಿಷಯವನ್ನು ಖಾಸಗಿಯಾಗಿಯೇ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಸಿನಿಮಾ ಸಕ್ಸಸ್ ಕಂಡಿದ್ದ ನಟಿಯ ವೈಯಕ್ತಿಕ ಬದುಕಿನಲ್ಲೀಗ ಬಿರುಗಾಳಿ ಎದ್ದಿದೆ.

Rangeela actress Urmila Matondkar files for divorce from husband Mohsin Akhtar Mir report

ಇನ್ನು ಕಾಶ್ಮೀರ ಮೂಲದ ಮೋಸಿನ್ ಅಖ್ತರ್ ತನ್ನ 21ನೇ ವಯಸ್ಸಿನಲ್ಲಿಯೇ ಬಾಲಿವುಡ್‌ನಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಮುಂಬೈಗೆ ಶಿಫ್ಟ್ ಆಗಿದ್ದರು. ಬಾಲಿವುಡ್‌ ಸಿನಿಮಾಗಳಾದ 'ಬಿ ಎ ಪಾಸ್', 'ಎ ಮ್ಯಾನ್ಸ್ ವರ್ಲ್ಡ್, 'ಲಕ್ ಬೈ ಚಾನ್ಸ್', 'ಮುಂಬೈ ಮಸ್ತ್ ಕಲಂದರ್' ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರೂ, ನಿಧಾನವಾಗಿ ಉದ್ಯಮದ ಕಡೆಗೆ ವಾಲಿದ್ದರು.

ಬಾಲಿವುಡ್‌ನ ಫೇಮಸ್ ಡಿಸೈನರ್ ಮನೀಷ್ ಮಲ್ಹೋತ್ರಾ ಜೊತೆ ಮೋಸಿನ್ ಗುರುತಿಸಿಕೊಂಡಿದ್ದರು. ವಿವಾಹದ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ವಿರಳ ಆದರೂ, ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ವಿವಾಹ ವಾರ್ಷಿಕೋತ್ಸವ ಸೇರಿದಂತೆ ಹಲವು ಸಂದರ್ಭಗಳಲ್ಲಿ ಇಬ್ಬರು ಜೊತೆಯಾಗಿರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಕಾರಣಕ್ಕೆ ದಿಢೀರನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಊರ್ಮಿಳಾ ಮಾತೋಂಡ್ಕರ್ ಅಭಿಮಾನಿಗಳಿಗೆ ಶಾಕ್ ಆಗಿದೆ.

ಕಳೆದ 8 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದಕ್ಕೆ ಊರ್ಮಿಳಾ ಮಾತೋಂಡ್ಕರ್ ಹಾಗೂ ಮೋಸಿನ್ ನಿರ್ಧರಿಸಿದ್ದಾಗಿ ವರದಿ ಮಾಡಲಾಗಿದೆ. ಆದರೆ, ಈ ನಟಿ ಇನ್ನೂ ಈ ವಿಷಯದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೂಲಗಳ ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಆದರೂ ದಾಂಪತ್ಯ ಉಳಿಸಿಕೊಳ್ಳಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

More from Filmibeat

English summary
Rangeela actress Urmila Matondkar files for divorce from husband Mohsin Akhtar Mir report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X