'ರಂಗೂನ್' ಟ್ರೈಲರ್: ಕಂಗನಾ ಪ್ರೀತಿಗಾಗಿ ಇಬ್ಬರ ಹೋರಾಟ!
'ಅತ್ಯುತ್ತಮ ನಟಿ' ಎಂಬ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡ ನಟಿ ಕಂಗನಾ ರನೌತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ರಂಗೂನ್' ಚಿತ್ರದ 3 ನಿಮಿಷ 20 ಸೆಕೆಂಡ್ ನ ಟ್ರೈಲರ್ ಬಿಡುಗಡೆ ಆಗಿದೆ.['ರಂಗೂನ್' ಶೂಟಿಂಗ್ ಸಮಯದಲ್ಲಿ ಕಂಗನಾಗೆ ಎದುರಾದ ಕಷ್ಟಗಳಿವು]
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಡೆಯುವ ಪ್ರೀತಿ ಮತ್ತು ಹೋರಾಟ ಕುರಿತ ಕಥೆ ಆಧಾರಿತ ಸಿನಿಮಾ 'ರಂಗೂನ್'. ದೇಶದ ಸ್ವಾತಂತ್ರ್ಯ ಹೋರಾಟದ ಸಮಯ, ಮತ್ತೊಂದೆಡೆ ಯುದ್ಧ, ಈ ಸಮರದ ನಡುವೆಯೂ ಯುವಕ ಮತ್ತು ಯುವತಿಯ ನಡುವೆ ಹುಟ್ಟುವ ಪ್ರೀತಿಗೆ ಎರಡು ಹಾದಿಗಳು. ರಂಗೂನ್ ಚಿತ್ರದ ಬಹುತೇಕ ಕಥೆಯ ಚಿತ್ರೀಕರಣ ಮ್ಯಾನ್ಮಾರ್ ರಾಜಧಾನಿ ಆಗಿದ್ದ 'ರಂಗೂನ್' ನಲ್ಲಿ ನಡೆಯುತ್ತದೆ.

ಅಂದಹಾಗೆ 'ರಂಗೂನ್' ಚಿತ್ರದಲ್ಲಿ ಬಾಲಿವುಡ್ ಚಿತ್ರರಂಗದ ಗಟ್ಟಿಗಿತ್ತಿ ನಟಿ ಕಂಗನಾ ರನೌತ್ ಗೆ ಶಾಹಿದ್ ಕಪೂರ್ ಮತ್ತು ಸೈಫ್ ಅಲಿ ಖಾನ್ ಇಬ್ಬರು ನಟರು.[ಅಸಲಿ ಸತ್ಯ ಹೊರಬೀಳಲಿದೆ': ಕಂಗನಾಗೆ ಟಾಂಗ್ ಕೊಟ್ಟ ಹೃತಿಕ್]
ಓಂಕಾರ, ಹೈದರ್, ಬ್ಲೂ ಅಂಬ್ರೆಲ್ಲಾ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ವಿಶಾಲ್ ಭಾರದ್ವಜ್ 'ರಂಗೂನ್' ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಫೆಬ್ರವರಿ 24 ರಂದು ತೆರೆಕಾಣಲಿದೆ.
ರಂಗೂನ್ ಚಿತ್ರದ ಟ್ರೈಲರ್ ನೋಡಿ..


Click it and Unblock the Notifications











