»   » 'ಅಸಲಿ ಸತ್ಯ ಹೊರಬೀಳಲಿದೆ': ಕಂಗನಾಗೆ ಟಾಂಗ್ ಕೊಟ್ಟ ಹೃತಿಕ್

'ಅಸಲಿ ಸತ್ಯ ಹೊರಬೀಳಲಿದೆ': ಕಂಗನಾಗೆ ಟಾಂಗ್ ಕೊಟ್ಟ ಹೃತಿಕ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಕಂಗನಾ ನಡುವೆ ನಡೆಯುತ್ತಿರುವ ಶೀತಲ ಸಮರಕ್ಕೆ ನಟ ಹೃತಿಕ್ ರೋಷನ್ ಅವರು ಅಂತಿಮ ತೆರೆ ಎಳೆಯಲು ನಿರ್ಧರಿಸಿದ್ದಾರೆ. ಈ ವಿಚಾರವಾಗಿ ಇತ್ತೀಚೆಗೆ ನಡೆದ '17ನೇ ಐಫಾ' ಪ್ರಶಸ್ತಿ ಸಮಾರಂಭದಲ್ಲಿ ಖುದ್ದು ಹೃತಿಕ್ ರೋಷನ್ ಅವರು ಮಾತನಾಡಿದ್ದಾರೆ.

'ತಮ್ಮಿಬ್ಬರ ಜಗಳದ ಅಸಲಿ ಸತ್ಯಾಸತ್ಯತೆ ಏನು ಎಂಬುದು ಅತೀ ಶೀಘ್ರದಲ್ಲೇ ಎಲ್ಲರೆದುರು ಬಯಲಾಗಲಿದೆ. ನನ್ನ ಬೆನ್ನ ಹಿಂದೆ ಏನೂ ಇಲ್ಲ. ಎಲ್ಲಾ ಸತ್ಯ ನಿಮ್ಮ ಮುಂದೆ ಬರಲಿದೆ' ಎಂದು ಹೃತಿಕ್ ರೋಷನ್ ಅವರು ಮ್ಯಾಡ್ರಿಡ್ ನಲ್ಲಿ (ಜೂನ್ 25) ನಡೆದ ಐಫಾ ಸಮಾರಂಭದಲ್ಲಿ ತಿಳಿಸಿದ್ದಾರೆ.[ಐಫಾ ಪ್ರಶಸ್ತಿ 2016: ದೀಪಿಕಾ ಮತ್ತು ರಣ್ವೀರ್ ಮೀರಿಸುವವರು ಯಾರಿಲ್ಲ!]

'All will be Revealed soon': says Bollywood Actor Hrithik Roshan

ಕಿತ್ತಾಡಿಕೊಂಡು ಇಡೀ ಬಿಟೌನ್ ನಲ್ಲಿ ರಾಡಿ ಎಬ್ಬಿಸಿಕೊಂಡಿದ್ದ ಹೃತಿಕ್ ರೋಷನ್ ಮತ್ತು ಕಂಗನಾ ರನೌತ್ ಅವರು ತದನಂತರ ಒಬ್ಬರಿಗೊಬ್ಬರು ಕೋರ್ಟ್ ನೋಟಿಸ್ ಕೂಡ ಕೊಟ್ಟುಕೊಂಡಿದ್ದರು.[ಕಂಗನಾ-ಹೃತಿಕ್ ಅಫೇರ್ ಕೇಸ್ ನಲ್ಲಿ ಮಹತ್ತರ ತಿರುವು]

'All will be Revealed soon': says Bollywood Actor Hrithik Roshan

ಒಟ್ನಲ್ಲಿ ಇಬ್ಬರ ಜಗಳಕ್ಕೆ ಸಂಫೂರ್ಣ ಪೂರ್ಣ ವಿರಾಮ ಹಾಕಲು ನಿರ್ಧರಿಸಿರುವ ನಟ ಹೃತಿಕ್ ರೋಷನ್ ಅವರು ಬಹಿರಂಗವಾಗಿ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಹೇಳಿಕೆ ನೀಡಿರುವುದರಿಂದ ಇದೀಗ ನಟಿ ಕಂಗನಾ ಅವರ ಪ್ರತಿಕ್ರಿಯೆ ಯಾವ ರೀತಿ ಇರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.['ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್]

English summary
Bollywood Actor Hrithik Roshan and Actress Kangana Ranaut's legal tussle is a thing of the past now, but the actor Hrithik said that he hasn't left anything behind him and things will soon be in "front of everyone." says at 17th IIFA award function.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada